e-ಸುದ್ದಿ, ಮಸ್ಕಿ
ತಾಲೂಕಿನ ಪಾಮಕಲ್ಲೂರು ಬಳಿ 5ಎ ನಾಲೆ ಯೋಜನೆ ಜಾರಿಗೆಗಾಗಿ ಕಳೆದ 68 ದಿನಗಳಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬೇಟಿ ನೀಡಿ ರೈತರನ್ನುದ್ದೇಶಿಸಿ 5ಎ ನಾಲೆ ಜಾರಿಯ ಸಾಧಕ ಭಾದಕಗಳ ವಿವರಿಸಿ ಧರಣಿ ಕೈ ಬಿಡುವಂತೆ ಮನವಿ ಮಾಡಿದರು.
5ಎ ನಾಲೆ ಜಾರಿಯ ಬಗ್ಗೆ ಯಾರಿಗಾದರೂ ಏನೇ ಅನುಮಾನಗಳಿದ್ದರೂ ಕೇಳಿ ನಿಮ್ಮೊಂದಿಗೆ ನಾನು ಎಲ್ಲಿಗೆ ಬೇಕಾದರೂ ಬರುವೆ. ಕ್ಷೇತ್ರಕ್ಕೆ ನೀರಾವರಿ ಯೋಜನೆ ಜಾರಿಯಾದರೆ ಅದು ನನಗೆ ಕಿರ್ತಿ ಹೆಚ್ಚುತ್ತದೆ ಆಗಲಿ ಯೋಜನ ಆಗದಂತೆ ತಡೆ ಹಿಡಿದರೆ ನನಗೇನು ಲಾಭವಿದೆ ರೈತರನ್ನು ಪ್ರಶ್ನಿಸಿದರು.
5ಎ ಯೋಜನೆ ಹೋರಾಟಗಾರರು ಒಪ್ಪಿದರೆ ಮುಖ್ಯ ಮಂತ್ರಿಗಳಿಗೆ ಬೇಟಿ ಮಾಡಿಸುವೆ. ಆಗ ಹೋರಾಟಗಾರರು ಮುಖ್ಯಮಂತ್ರಿ ಹಾಗೂ ಸಚಿವ, ಅಧಿಕಾರಗಳಿಗೆ ಮನವಿ ಮನವರಿಕೆ ಮಾಡಿ ತಮ್ಮಲ್ಲಿರುವ ತಾಂತ್ರಿಕ ಮಾಹಿತಿ ನೀಡಿ 5ಎ ಯೋಜನೆ ಜಾರಿ ಮಾಡುವಂತೆ ಮನವಿ ಮಾಡೋಣ. ಆದ್ದರಿಂದ 5ಎ ಹೋರಾಟಗಾರರು ಒಪ್ಪಿದ್ರೆ ಇನ್ನೂ 2-3 ದಿನಗಳಲ್ಲಿ ರೈತರನ್ನು ಬೇಟಿಗೆ ಅವಕಾಶ ಕೇಳುವೆ. ಎಂದು ರೈತರಲ್ಲಿ ಮನವಿ ಮಾಡಿದರು.
————————
ವಾಗ್ವಾದ
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರನ್ನು ಮಾತನಾಡಲು ಹೋರಾಟಗಾರರು ಇಚ್ಚಿಸಿದಾಗ ಪ್ರತಾಪಗೌಡ ಪಾಟೀಲ ಅವರು ಸಾಧ್ಯಾಸಧ್ಯತೆ ಬಗ್ಗೆ ವಿವರಿಸಿದರು ನಂತರ ಮಾತನಾಡಿದ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ತಿಮ್ಮನಗೌಡ ಚಿಲ್ಕಾರಾಗಿ ಮಾತನಾಡಿ ಈ ಯೋಜನೆ ಜನಪ್ರತಿನಿಧಿಗಳಿಗೆ ಸಾಧ್ಯ ಎಂದು ವಾದ ಮಾಡಿದರು.ಒಂದು ಹಂತದಲ್ಲಿ ವೈಯಕ್ತಿಕ ನಿಲುವಗಳನ್ನು ಮಾತನಾಡಿ ವಾತವರಣ ಹದಗೆಡುತ್ತದೆ ಎಣ್ನು ಪರಸ್ಥಿತಿ ತಿಳಿಯಾಗಿ ರೈತರು ಎರಡು ದಿನ ಕಾಲವಕಾಶ ಪಡೆದುಕೊಳ್ಳಲ್ಲಿ ಜನ ಪ್ರತಿನಿಧಿಗಳು ಸಮಯ ತೆಗೆದುಕೊಂಡು ನಿರ್ಣಯಿಸುವ ವಿಚಾರ ಪ್ರಸ್ತಾಪವಾಯಿತು.