ಸಮುದ್ರ

 

ಸಮುದ್ರ

ಸಮುದ್ರದ ಅಲೆಗಳಿಗೆ
ಎಕಿಷ್ಟು ಆರ್ಭಟ
ಎಲ್ಲಿಯ ರೋಷಾವೇಷ
ಯಾರ ಮೇಲೆ ಕೋಪ ||

ಅಲೆಗಳ ಆಟದಲಿ
ಏರಿಳಿತದ ಪಾಠ
ತೀರದಲ್ಲಿ ತೀರದಷ್ಟು
ಒಲವು ಸ್ನೇಹ ಕೂಟ ||

ನದಿಗಳೆಲ್ಲವೂ ಕಷ್ಟದಿ ಇಷ್ಟಪಟ್ಟು
ನಿನ್ನ ಬಂದು ಸೇರುವವು
ನಿನ್ನಿಷ್ಟವ ತೀರಿಸಲು
ತಮ್ಮತನವನ್ನೇ ತೊರೆಯುವವು||

ಸಿಹಿಯ ತೊರೆದು ಉಪ್ಪು ಬೆರೆದು
ಆನು ತಾನು ಅಳಿದು
ಏಕ ಭಾವ ಬೆರೆದು
ನಿನ್ನಲ್ಲೇ ಒಂದಾಗುವವು.||

ನಿನಗಾರು ಸರಿಸಾಟಿ
ವಿಸ್ತಾರದಿ ನಿನ್ನ ಮೀಟಿ
ಬೇರೆ ಅರಿಯೆ ನಾನು
ಮನವ ಸೆಳೆವೆ ನೀನು ||

ಎಷ್ಟು ಜೀವ ನಿನ್ನೊಡಲಲಿ
ಮುತ್ತು ರತ್ನ ಕಡಲಾಳದಿ
ಶಕ್ತಿ ಆಗರ ನೀನು
ಸಮತೆ ಸಾರುವೆ ಎನು ||

ಬೆಸ್ತರನು ಬದುಕಿಸುವಾ
ಭಾಗ್ಯ ದೈವ ನೀನು
ಜಲಮಾರ್ಗದಿ ಸಾಗಿಸುವಾ
ಉಗ್ರ ಒಲವು ನೀನು ||

ಸುನಾಮಿಗೆ ಸಿಡುಕಿ ಬಂದೆ
ಜೀವಗಳಾ ಕೊಂದು ತಿಂದೆ
ದಾಹ ತೀರಿತೇನು
ಮತ್ತೆ ಬಾರದಿರು ನೀನು ||

ಸವಿತಾ ಎಮ್ ಮಾಟೂರು, ಇಲಕಲ್

Don`t copy text!