ಡಾ. ಜ್ಯೋತಿ ಲಕ್ಷ್ಮಿ ಪಾಟೀಲ ಆಯ್ಕೆ 

ಅಂತಾರಾಷ್ಟ್ರೀಯ ವೈದ್ಯಕೀಯ ವೈಜ್ಞಾನಿಕ ಪತ್ರಿಕೆ ಸಂಪಾದಕ ಮಂಡಳಿಗೆ ಡಾ . ಜ್ಯೋತಿ ಲಕ್ಷ್ಮಿ ಪಾಟೀಲ ಆಯ್ಕೆ

e-ಸುದ್ದಿ, ಮಸ್ಕಿ

ರಾಯಚೂರು ಮೂಲದ ಖ್ಯಾತ ಆಯುರ್ವೇದ ವೈದ್ಯರಾದ ಡಾ ಜ್ಯೋತಿ ಲಕ್ಷ್ಮಿ ಪಾಟೀಲ ಇವರು ಅಂತಾರಾಷ್ಟ್ರೀಯ ವೈದ್ಯಕೀಯ ವೈಜ್ಞಾನಿಕ ಪತ್ರಿಕೆ ಸಂಪಾದಕ ಮಂಡಳಿಗೆ ಸಂಪಾದಕರೆಂದು ಆಯ್ಕೆ ಆಗಿದ್ದಾರೆ .
ಬೆಂಗಳೂರಿನ ಸರಕಾರಿ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಬಿ ಎ ಎಂ ಎಸ ಪದವಿ ಮತ್ತು ಮೈಸೂರಿನ ಸರಕಾರಿ ಆಯುರ್ವೇದಿಕ್ ಮಹಾವಿದ್ಯಾಲಯದಿಂದ ಎಂ. ಡಿ ಸ್ನಾತ್ತಕೋತ್ತರ ಪದವಿ ಪಡೆದು ಸಧ್ಯ ಕಾಯಚಿಕಿತ್ಸಾ ಮತ್ತು ಪಂಚ ಕರ್ಮ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .
ಉತ್ತಮ ಸಂಶೋಧಕರು ವಾಗ್ಮಿಗಳು ಬಡ ಮತ್ತು ನಿರ್ಗತಿಕರ ಆರೋಗ್ಯದ ರಾಷ್ಟ್ರೀಯ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವ ಉತ್ತಮ ವೈದ್ಯರು .
ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆ ದೊರೆಯಬೇಕು ತಮ್ಮಿಂದ ಇನ್ನೂ ಅನೇಕರಿಗೆ ಆಯುರ್ವೇದಿಕ್ ವಿಜ್ಞಾನದ ಸಂಶೋಧನೆಯ ಲಾಭ ಸಿಗಬೇಕೆಂಬ ನಮ್ರ ಹಂಬಲ ಹೊಂದಿರುವ ಉತ್ತಮ ಮಾನವೀಯ ಮೌಲ್ಯವುಳ್ಳ ವೈದ್ಯರು.

. ಇವರ ಸೇವೆರ್ ಸಂಶೋಧನಾ ಸಾಮರ್ಥ್ಯವನ್ನು ಮನಗಂಡು ಇವರನ್ನು scienxt ಪತ್ರಿಕೆಗಳ ಸಮೂಹಕ್ಕೆಆಯುಷ್ ಅಂತಾರಾಷ್ಟ್ರೀಯ ವೈದ್ಯಕೀಯ ವೈಜ್ಞಾನಿಕ ಪತ್ರಿಕೆ ಸಂಪಾದಕ ಮಂಡಳಿಗೆ ಡಾ ಜ್ಯೋತಿ ಲಕ್ಷ್ಮಿ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು scienxt ಪತ್ರಿಕೆಗಳ ವ್ಯವಸ್ಥಾಪಕ ಸಂಪಾದಕ ಡಾ ಶಶಿಕಾಂತ ಪಟ್ಟಣ ಇವರು ಮತ್ತು scienxt ಪತ್ರಿಕೆಗಳ ವ್ಯವಸ್ಥಾಪಕ ನಿರ್ದೇಶಕರು ಶ್ರೀಮತಿ ಮಮತಾ ಗಿರಿಯಪ್ಪ ಉತ್ತರಪ್ರದೇಶದ ನೋಯಿಡಾ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Don`t copy text!