ಮಾಡಿದ ಸಾಧನೆ ಕಡಿಮೆ, ಮಾಡಬೇಕಾಗಿರುವದು ಬೆಟ್ಟದಷ್ಟು

 

ಮಾಡಿದ ಸಾಧನೆ ಕಡಿಮೆ, ಮಾಡಬೇಕಾಗಿರುವದು ಬೆಟ್ಟದಷ್ಟು
e- ಸುದ್ದಿ, ಮಸ್ಕಿ

ಮೂರು ಅವಧಿಯಲ್ಲಿ ಮಸ್ಕಿ ಕ್ಷೇತ್ರಕ್ಕೆ ಮಾಡಿದ ಸಾಧನೆ ಹಲವಾರು ಇದ್ದರೂ ಮಾಡಬೇಕಾದ ಕೇಲಗಳು ಬೆಟ್ಟದಷ್ಟಿದೆ ಎಂದು ಮಾಜಿ ಶಾಕ ಪ್ರತಪಾಗೌಡ ಪಾಟೀಲ ಹೇಳೀದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಭಾನುವಾರ ಸಂಜೆ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿಯಿಂದ ಆಯೋಜಿಸಿದ್ದ ಜನಾನುರಾಗಿ ಪ್ರತಾಪಗೌಡ ಪಾಟೀಲ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದರು.
ಕಳೆದ 12 ವರ್ಷಗಳಿಂದ ಅಸ್ಥಿತ್ವಕ್ಕೆ ಬಂದ ಮಸ್ಕಿ ಕ್ಷೇತ್ರಕ್ಕೆ ಶಾಸಕನಾಗಿ
ಎಲ್ಲ ಮತದಾರರ ಋಣ ನನ್ನ ಮೇಲಿದೆ. ಕ್ಷೇತ್ರವÀನ್ನು ಮಾದರಿ ಕ್ಷೇತ್ರ ಮಾಡಬೇಕೆಂಬ ನನ್ನ ಕನಿಸಿಗೆ ಮತದಾರು ನೀರುಣಿಸುವ ಮೂಲಕ ಬೆಳಿಸಿದ್ದಾರೆ ಎಂದರು.
ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಶಾಲೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ ತೃಪ್ತಿ ಇದೆ. ಕ್ಷೇತ್ರದಲ್ಲಿ ಎಲ್ಲಿ ಎಲ್ಲಿ ನೀರಿನ ಲಭ್ಯತೆ ಇದೆ ಅಲ್ಲಲ್ಲಿ ನೀರಾವರಿ ಮಾಡಿ ರೈತರ ಬದುಕು ಹಸನಾಗುವ ಸಂಕಲ್ಪ ಮಾಡಿದ್ದೇನೆ. ರೈತ ಹೊರಾಟಗಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈ ಬಲಪಡಿಸಿ ರಾಜ್ಯ ಮತ್ತು ಮಸ್ಕಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಸದೀಚ್ಛೆಯಿಂದ ಕಾಂಗ್ರೆಸ್‍ಗೆ ರಾಜಿನಾಮೆ ನೀಡಿ ಬಿಜೆಪಿ ಬಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ 17 ಜನ ಶಾಸಕರು ಯಶಸ್ವಿಯಾಗಿದ್ದೇವೆ. ಜನರ ಆಶೀರ್ವಾದದಿಂದ ಬರುವ ಉಪ ಚುನಾವಣೆಯಲ್ಲಿ ಗೆದ್ದರೆ ಮಂತ್ರಿಯಾಗುವ ಅವಕಾಶವಿದೆ. ಮತದಾರರು ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.
ಗಂಗಾವೃತ್ತಿ ಆವೃತ್ತಿಯ ಸ್ಥಾನಿಕ ಸಂಪದಾಕರಾದ ಚಂದ್ರಶೇಖರ ಶೃಂಗೇರಿ ಮಾತನಾಡಿ ವಿಆರ್‍ಎಲ್ ಮೀಡಿಯಾ ಸಂಸ್ಥೆಯ ವಿಜಯವಾಣಿ ಪತ್ರಿಕೆ ಜನರ ಸಮಸ್ಯಗಳಿಗೆ ಸ್ಪಂದಿಸುವ ಮೂಲಕ ಜನ ಮೆಚ್ಚಿದ ನಂ1 ಪತ್ರಿಕೆಯಾಗಿ ರೂಪಗೊಂಡಿದೆ. ಮಾಜಿ ಶಾಸಕ ಮಪ್ರತಾಪಗೌಡ ಪಾಟೀಲ ಅವರ ಕೆಲಸ ಕಾರ್ಯಗಳನ್ನು ಹಿಡಿದಿಡುವ ಪ್ರಯತ್ನ ವಿಶೇಷ ಸಂಚಿಕೆಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.ಸಂಚಿಕೆಯನ್ನು ಬಿಡುಡಗೆ ಮಾಡಿ ಸಾನಿಧ್ಯ ವಹಿಸಿದ ಷ.ಬ್ರ.ವರರುದ್ರಮುನಿ ಶಿವಾಚಾರ್ಯರು ಮಾತನಾಡಿ ಕ್ಷೆಥ್ರದ ತುಂಬೆಲ್ಲ ಪ್ರತಾಪಗೌಡ ಪಾಟೀಲ ಸರಳ ಸಜ್ಜಿನೆಕೆಯ ವ್ಯಕ್ತಿ ಎಂಬ ಹೆಸರು ಜನಮಾನಸವಾಗಿದೆ. ಶಾಸಕರು ಎಂಬ ಹಮ್ಮುಬಿಮ್ಮು ಇಲ್ಲದೆ ಎಲ್ಲಾ ಜನರಿಗೆ ಸರಳವಾಗಿ ಸಿಗುವ ವ್ಯಕ್ತಿಯಾಗಿದ್ದು ಅವರ ಕಂಡ ಕನಸುಗಳು ಈಢೇರಲಿ ಎಂದು ಹಾರೈಸಿದರು.
ಮುಸ್ಲಿಂ ಸಮಾಜದ ಮೌಲ್ವಿ ಜಿಲಾನಿ ಖಾಜಿ ಮಾತನಾಡಿ ಪ್ರತಾಪಗೌಡ ಪಾಟೀಲ ಮಸ್ಕಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳ ಪರ್ವ ಮುಂದುವರಿಯಲ್ಲಿ ಎಂದು ಆರೈಸಿದರು.
ವೇದಿಕೆಯ ಮೇಲೆ ಗ್ರಾಮದ ಹಿರಿಯ ಮುಖಂಡರಾದ ಮಹಾದೇವಪ್ಪಗೌಡ ಪೋಲಿಸ್ ಪಾಟೀಲ, ಜಾಹಿರಾತು ವ್ಯವಸ್ಥಾಪಕ ವಿಜಯ ಗುಮಾಸ್ತೆ , ಸಹಾಕಯ ವ್ಯವಸ್ಥಾಪಕ ಮುತ್ತಣ್ಣ ಕಬ್ಬಿಣದ, ವರದಿಗಾರ ವೀರೇಶ ಸೌದ್ರಿ, ಬಲವಂತಾರಯ ವಟಗಲ್ ಹಾಗೂ ಇತರರು ಭಾಗವಹಿಸಿದ್ದರು.
ಮುಖಂಡಾರದ ಅಂದಾನಪ್ಪ ಗುಂಡಳ್ಳಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಬಸವಂತರಾಯ ಕುರಿ, ಚಂದ್ರಶೇಖರ ಗೂಗೆಬಾಳ, ಶರಣಪ್ಪ ಶಾವಂತಗೇರಿ, ಪಂಚಾಕ್ಷರಯ್ಯ ಸ್ವಾಮಿ, ಶರಣಯ್ಯ ಸೊಪ್ಪಿಮಠ, ಸಿದ್ದಲಿಂಗಯ್ಯ ಗಚ್ಚಿನಮಠ, ಸಿದ್ದಲಿಂಗಯ್ಯ ಸೊಪ್ಪಿಮಠ, ಬಸಪ್ಪ ಬ್ಯಾಳಿ, ಉಮಾಕಾಂತಪ್ಪ ಸಂಗನಾಳ, ದೊಡ್ಡಪ್ಪ ಕಡಬೂರು, ಎಂ.ಅಮರೇಶ, ದೊಡ್ಡಪ್ಪ ಬುಳ್ಳಾ, ಸುಗಪ್ಪ ಮರಳದ, ವೀರೇಶಪ್ಪ ಯಂಬಲದ, ಶಿವಕುಮಾರ ಎನ್, ಮಲ್ಲಿಕಾರ್ಜುನ ಹಳ್ಳಿ, ಎಂ.ಅಮರೇಶ, ಪ್ರಸನ್ನ ಪಾಟೀಲ, ಚೇತನ ಪಾಟೀಲ ಹಾಗೂ ಇತರರು ಭಾಗವಹಿಸಿದ್ದರು.

Don`t copy text!