ಕುಲಕ್ಕೆ ಮೂಲ

ಕುಲಕ್ಕೆ ಮೂಲ

ದಟ್ಟವಾದ ಕಾಡು

ಮುಗಿಲು ಮುಟ್ಟುವ

ಮರಗಳು

ಪೊದರಿನಲ್ಲಿ

ಹಕ್ಕಿ ಪಕ್ಷಿಗಳ ಬಳಗ

ಅಂದೊಂದುದಿನ

ಒಬ್ಬ ಧಡೂತಿ

ಮರದ ಕೆಳಗೆ

ದಣಿವರಿಸಲು ಕುಳಿತನು

ಪಕ್ಕ ದೊಡ್ಡ ಕೊಡಲಿ

ಚೂಪಾದ ಕೊಡಲಿ

ಹಿಡಿತ ಉದ್ದನೆಯ ಕಾವು

ಕಟ್ಟಿಗೆಯ ಕಾವಿಗೆ

ಬಣ ಬಣ್ಣದ ಹೊದಿಕೆ

ಮರದ ರೆಂಬೆ ಕೊಂಬೆಗಳು

ಹರುಷಪಟ್ಟಿದ್ದವು

ಕೊಡಲಿಯ ಕಾವು ಕಂಡು

ಎದ್ದವನು ಒಮ್ಮಿಲೆ

ಕಡಿಯಲಾರಂಭಿಸಿದ

ಮರದ ಕೊಂಬೆ ರೆಂಬೆಗಳನು

ಕಿರುಚಿ ಹೇಳ ಹತ್ತಿದವು

ಎಳೆಯ ರೆಂಬೆ ಕೊಂಬೆಗಳು

ಕಡಿಯಬೇಡ

ನೀನು ನಮ್ಮ ಗೆಳೆಯ

ಕೊಡಲಿ ಕಾವು

ಕುಲಕ್ಕೆ ಮೂಲ

ಸ್ತ್ರೀ ಭ್ರೂಣ ಹತ್ಯೆ

ಮಹಾಪಾಪ

ಬರಿ ಗೋಡೆ ಬರಹ

ಹೆಣ್ಣಿಗೆ ಹೆಣ್ಣೇ ಶತ್ರು

ಸರ್ವೇ ಜನ

ಸುಖಿನೋ ಭವಂತು

ಮರ ಉರುಳಿತು

ಕೊಂಬೆ ರೆಂಬೆಗಳು

ಸುಟ್ಟವು ಉರುವಲಾಗಿ

ಪ್ರೊ ವಿಜಯಲಕ್ಷ್ಮಿ ಪುಟ್ಟಿ ಬೆಳಗಾವಿ   

ಇಂಗ್ಲಿಷ್ ವಿಭಾಗದ ಮುಖ್ಯಸ್ಥರು 

Don`t copy text!