ಖಾಲಿ ಹಾಳೆಯ ಮೆಲೆ ಹುಡುಕುವೆ
ಖಾಲಿ ಹಾಳೆಯ ಮೆಲೆನು ಹುಡುಕುವೆ
ಮೌನವೇ ಉತ್ತರವಾಗಿರುವಾಗ..
ಮಾತನೆಕೆ ಬಯಸುವೆ ಮನವು ನಿನ್ನಲ್ಲೆ
ನೆಲೆ ನಿಂತಿರುವಾಗ..
ಬೆರೆನನು ಬಯಸುವೆ ನಮ್ಮಿಬ್ಬರಾತ್ಮಗಳು
ಒಂದೇ ಆಗಿರುವಾಗ…
ಖಾಲಿ ಹಾಳೆಯ ಮೆಲೆನು ಹುಡುಕುವೆ..
ಒಂದು ಕನಸು ನುಚ್ಚು ನುರಾದರೂ
ಪ್ರೆಮದ ಭರವಸೆಯು ಬದುಕು ಕಟ್ಟಿರುವಾಗ..
ನಿನ್ನ ಪ್ರತಿ ಮಾತು ಕವಿಯಲಿ ರಿಂಗಣಿಸುತಿರುವಾಗ…
ಎಕಾಂಗಿತನದ ಭಯಾನಕತೆಗೆ ನಾವಿಬ್ಬರೂ ಒಗ್ಗಿರುವಾಗ ಮತ್ತೆನು ಹುಡುಕುವೆ….
ಖಾಲಿ ಹಾಳೆಯ ಮೆಲೆನು ಹುಡುಕುವೆ..
ನನ್ನೆಲ್ಲಾ ನೊವನ್ನೂ ತಲ್ಲಣಗಳನ್ನು ನಿನ್ನೊಡನೆ ಹಂಚಿಕೊಳ್ಳಬೆಕೆಂದಿದ್ದೆ..
ಮನದಿಂಗಿತವ ನೀ ಅರಿಯಲಿಲ್ಲ..
ನಾನು ಈಗಲೂ ನಿನ್ನ ಪ್ರಿತಿಯ ಅದಮ್ಯ ಆಗಮನಕಾರ.. ಆದರೂ ಮತ್ತೆಕೆ ನೀನು
ಖಾಲಿ ಹಾಳೆಯ ಮೆಲೆನು ಹುಡುಕುವೆ..
ನನಗೊಬ್ಬನಿಗೆ ನೊವೆಂದು ನಾ ತಿಳಿದಿದ್ದೆ..
ಆದರೆ ಗೊತ್ತಾಯಿತಿಗ ನೊವು ತಬ್ಬಿದೆ ಜಗವನೆಲ್ಲ..
ತುಂಬಾ ಮುಗ್ದೆ ನೀನು ಯಾರಾದರೂ ತಿಳಿಹೆಳಬೆಕು ನಿನಗೀಗ..
ಮಾತನಾಡದೇ ಹೊದರೂ ಪ್ರಿತಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ..
ಖಾಲಿ ಹಾಳೆಯ ಮೆಲೆನು ಹುಡುಕುವೆ
ಮೌನವೇ ಉತ್ತರವಾಗಿರುವಾಗ..
ಪ್ರಿತಿಗೆ ತೊಳಿನಾಸರೆ ಸಿಗಬೆಕೆಂಬ ಯಾವುದೇ ಅಗತ್ಯವಿಲ್ಲ..
ಜೀವನವೀಡಿ ಪ್ರಿತಿಸುವವರನ್ನು ಅನುಭೂತಿಸುವುದೇ ಪ್ರಿತಿಯ ಧ್ಯೇಯವಾಗಿರುವಾಗ…
ಖಾಲಿ ಹಾಳೆಯ ಮೆಲೆನು ಹುಡುಕವೆ..
ನೀನು ನನಗೆ ಮತ್ತೆ ಸಿಗುವೆ ಎಲ್ಲಿ ಹೆಗೆಂದು ತಿಳಿದಿಲ್ಲ…
ಕಲ್ಪನೆಯ ಕಣ್ಣೊಳಗೆ ಬಂದರೂ ಸಾಕು
ಸದ್ದಿಲ್ಲದೇ ನಿನ್ನ ನೊಡುವೆ…
ನಿನ್ನನ್ನು ಬಿಗಿದಪ್ಪಿ ನಿನ್ನವೇ ನೂರು ದೂರುಗಳನ್ನು ಹೆಳಬೆಕೆಂದಿರುವೆ..
ಕೆಳುವ ವ್ಯವಧಾನ ನಿನಗಿದೆಯೆಂದಾದರೆ
ಅಮೂರ್ತದ ಅಮರತ್ವದ ಪ್ರೆಮ ಎಂದಿಗೂ ನಮ್ಮದು… ಆದರೂ
ಖಾಲಿ ಹಾಳೆಯ ಮೆಲೆ ನಿನೆನು ಹುಡುಕವೆ…..
✍🏻 ಅಗ್ನಿದಿವ್ಯಾ..
ಅಮರೇಶ ಎಂ. ಪಾಟೀಲ್