ಬೇಡ ನಿಮ್ಮ
ಬೇಡ ನಿಮ್ಮ ಮಠ ಮಂದಿರ ಚರ್ಚು
ವಿಹಾರ ಗುರುದ್ವಾರ,ಮಸೀದಿ ಬಸಿದಿಗಳು
ಸಾಕಿನ್ನು ನಿಮ್ಮ ಪ್ರಶಸ್ತಿ ಪುರಸ್ಕಾರಗಳು
ಭಾರವಾದವು ಶಾಲು ಮಾಲೆಗಳು .
ಕುಲಗೆಟ್ಟವು ಜಾತ್ರೆ ಉತ್ಸವಗಳು .
ಹಳಸಿ ಹೋದವು ಮೊಹರಂ ಓಕಳಿಗಳು .
ಕಾಲು ಸುಟ್ಟಿವೆ ಕೆಂಡದಲ್ಲಿ ಹಾಯ್ದು .
ರಕ್ತ ಚಿಮ್ಮಿದೆ ಅಸ್ತ್ರವ ತಿವಿಸಿಕೊಂಡು
ಉರಿಯುತ್ತಿವೆ ಬಾಸುಂಡಿ ಬರೆಗಳು .
ಮಾಸಿಲ್ಲ ಹಚ್ಚೆ ಮುದ್ರೆಗಳು .
ಗಾಳಿ ಪ್ರೇತ ಭೂತದ ಚೇಷ್ಟೆ
ಸುಲಿಗೆ ಮಂತ್ರ ಪುರೋಹಿತರ ಆಟ.
ಬದುಕಲಾರೆವು ಸಾಯಲಾರೆವು.
ಸಾಕು ಸಾಕಿನ್ನು ದೆವ್ವ ದೇವರ ಕಾಟ
ಬೇಕು ಬುದ್ಧ ಬಸವರ ಬಟ್ಟೆಯ ಮಾಟ
*ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ*