ನೆನಪುಗಳು 

ನೆನಪುಗಳು 

ಸುಖ- ದುಃಖಗಳ
ಮಿಶ್ರಣ
ಒಳ್ಳೆಯ- ಕೆಟ್ಟ ಕ್ಷಣಗಳ
ಹೂರಣ

ವರವಾಗಬಲ್ಲವು
ನೆನಪುಗಳು
ಶಾಪವಾಗಿ ಕಾಡಬಲ್ಲವು
ಇವುಗಳು

ಎದೆ ಅಂಗಳದಲ್ಲಿ
ಹಚ್ಚ ಹಸಿರಾಗಿ ಬೇರೂರುವವು
ಕೆಲವೊಂದನ್ನು ಹಂಚಿಕೊಂಡರೆ
ಮನಕೆ ಮುದ ನೀಡುವವು

ಸುರುಳಿ ಬಿಚ್ಚಿದರೆ
ದಿಬ್ಬಣವೇ ತಯಾರಾಗುವುದು
ಇದರ ತಳಹದಿಯೇ
ಅನುಭವಗಳು

ವತ೯ಮಾನದ ಮೇಲೆ
ಪ್ರಭಾವ ಬೀರಬಲ್ಲವು
ಹಲವಾರು ಮುಖಗಳ ಇವು
ಕಥೆಯಾಗಿ ನಿಲ್ಲಬಲ್ಲವು

ಮಿದುಳಿನ ಮೂಲೆಯಲ್ಲಿ
ಇವು ಜೀವಂತ
ನೆನಪುಗಳ ಸಾಮರ್ಥ್ಯ
ಅನಂತ………

– ಡಾ ನಂದಾ ಕೋಟೂರ

Don`t copy text!