ನೀವು ಮೊಳೆಯಾದರೆ ನಾವು ಹೂವಾಗುತ್ತೇವೆ

ನೀವು ಮೊಳೆ ಹೊಡೆದ ನೆಲದಲ್ಲಿ
ನಾವು ಹೂ ಗಿಡ ನೆಟ್ಟಿದ್ದೇವೆ.
ನಮ್ಮ ರಕ್ತ ರುಚಿ ಉಂಡ ಮೊಳೆಗಳು.
ನಾಳೆ ನಿಮ್ಮ ಪಾದದ ರಕ್ತ ಬೇಡದಿರಲಿಯೆಂದು.

ನೀವು ಮುಳ್ಳು ತಂತಿಯ ಬೇಲಿ ಹಾಕಿದ ಜಾಗದಲ್ಲಿ.
ನಾವು ಸರ್ವ ಧರ್ಮಗಳ ಶಾಂತಿ ಸಂದೇಶ ಬರೆದಿದ್ದೇವೆ.
ನಮ್ಮನ್ನು ದೇಶದ್ರೋಹಿಯೆಂದ ಮುಳ್ಳು ತಂತಿಗಳು.
ನಾಳೆ ನಿಮ್ಮನ್ನು ಗಡಿಪಾರು ಮಾಡದಿರಲಿಯೆಂದು.

ನೀವು ಲಾಠಿ ಬೂಟುಗಳಿಂದ ದಾಳಿ ಮಾಡಿಸಿದ್ದೀರಿ. ಆದರೂ……………..
ನಾವು ಉಸಿರು ಇರುವವರೆಗೂ ಜೈ ಜವಾನ್ ಎನ್ನುತ್ತೇವೆ.
ಏಕೆಂದರೆ ನಾಳೆ ಲೋಕವೇ ಜೈ ಕಿಸಾನ್ ಎನ್ನುವ
ಕಾಲ ಬಂದೇ ಬರುತ್ತದೆ.

ಆಗ ನಿಮ್ಮ ಹಣೆ ಬರಹ ನೀವೇ ತಿದ್ದಿಕೊಳ್ಳುತ್ತಿರಿ
ಅಷ್ಟೇ ಸಾಕು.. ಅನ್ನ ಉಂಡ ಜೀವ ಪ್ರೀತಿ ಹಂಚಿಕೊಳ್ಳಲು.

– *ಅಲ್ಲಾಗಿರಿರಾಜ್ ಕನಕಗಿರಿ

 

Don`t copy text!