*ಕನಸಲ್ಲು ಕಾಮನಬಿಲ್ಲು ಮೂಡುತ್ತಿಲ್ಲ*
ರಾತ್ರಿ ಮಂಚದ ಸುಪತ್ತಿಗೆಯಲ್ಲಿ ಮಲಗಿದ್ದೇನೆ
ಕನಸಲ್ಲು ಕಾಮನ ಬಿಲ್ಲು ಮೂಡತ್ತಿಲ್ಲ
ನನ್ನ ರೈತರು ರಸ್ತೆ ಮೇಲೆ ಮಲಗಿದ್ದಾರೆ
ಮಡದಿ ಮೃಷ್ಟಾನ್ನ ಬಡಿಸಿದ್ದಾಳೆ
ರುಚಿಸುತ್ತಿಲ್ಲ
ನನ್ನ ರೈತರು ಉಪವಾಸ ಕುಳಿತ್ತಿದ್ದಾರಲ್ಲ
ಬಜೆಟ್ ಮೇಲೆ ಚರ್ಚೆ
ಲಾಭ ನಷ್ಟದ ಲೆಕ್ಕಾಚಾರ
ನನ್ನ ರೈತನಿಗೆ ಬಜೆಟ್ಟೇ ಗೊತ್ತಿಲ್ಲ
ಧವಸ ಧಾನ್ಯ ಮಾರುವ ವ್ಯಾಪಾರಿ
ದರ ನಿಗದಿ ಮಾಡುವ ರುವಾರಿ
ಧವಸ ಧಾನ್ಯ ಬೆಳೆದ ರೈತನಿಗೆ
ಅದರ ಅರಿವೇ ಇಲ್ಲ ಅಬ್ಬೆಪಾರಿ
ಎದರು ಬದರು ಪಕ್ಷಗಳು
ಕಿರುಚುತ್ತಿವೆ
ನಾವು ರೈತರ ಪರ, ನಾವು ರೈತರ ಪರ
ಮನೆಯಲ್ಲಿರಬೇಕಾದ ರೈತ ಬೀದಿಗೆ ಬಂದಿದ್ದಾನೆ ಈಗ ಹೇಳಿ ನೀವು ಯಾರ ಪರ
ರೈತ ದೇಶದ ಬೆನ್ನೆಲುಬು ಎಂದಿರಿ
ರೈತನ ಬೆನ್ನೆಲುಬು ಮುರಿದಿರಿ
ರೈತ ಹಸಿದ ಹೊಟ್ಟೆಯಲ್ಲಿ ರಸ್ತೆಯಲಿ ತೇಕುತ್ತಿದ್ದಾನೆ
ದಿಲ್ಲಿಯಲ್ಲಿ ರೈತ ಚಳುವಳಿ
ಪಾಮನಕಲ್ಲೂರಿನಲ್ಲಿ ರೈತ ಚಳುವಳಿ
ಎರಡು ಚಳುವಳಿ ಹಳ್ಳ ಹಿಡಿದಿವೆ
ಚಳುವಳಿ ಹಿಂದೆ ಜಾತಿಯ ಕಮಟು ವಾಸನೆ
ರಾತ್ರಿ ಮಂಚದ ಸುಪ್ಪತ್ತಿಗೆಯಲ್ಲಿ ಮಲಗಿದ್ದೇನೆ
ಕನಸಲ್ಲು ಕಾಮನ ಬಿಲ್ಲು ಮೂಡುತ್ತಿಲ್ಲ
–ಸೌವೀ, ಮಸ್ಕಿ