ಐತಿಹಾಸಿಕ ಕಲ್ಲುಬಾವಿಯ ;ರೋಚಕ ಇತಿಹಾಸ
ನಗರದ ನಾಗರಿಕರು ಈ ದುರವಸ್ಥೆ ನೋಡಬೇಕಿದೆ
ಕುಷ್ಟಗಿ ಪಟ್ಟಣದಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳಲ್ಲಿ ತೆಗ್ಗಿನ ಓಣಿಯಲ್ಲಿರುವ ಕಲ್ಮಠದ ಪಕ್ಕದಲ್ಲಿ ಇರುವ ಕಲ್ಲುಭಾವಿಯೂ ಒಂದು .
ಈ ಕಲ್ಲುಭಾವಿಯ ಇತಿಹಾಸವನ್ನು ಕೆದುಕುತ್ತಾ , ಹೋದಂತೆಲ್ಲ ಹತ್ತು ಹಲವು ಜನರ ಮಾತುಗಳು ,ಹಲವಾರು ಐತಿಹ್ಯಗಳು, ಕಟ್ಟುಕತೆಗಳು ,ಕೆಲವು ನಂಬಲರ್ಹ ಸಂಗತಿಗಳು ಕೇಳಿಬಂದವು
ಅವುಗಳಲ್ಲಿ :
ಒಂದು ಐತಿಹ್ಯ ಹೀಗಿದೆ ;
ಬಿಜಾಪುರದ ಸುಲ್ತಾನನಾದ ಅಲಿ ಆದಿಲ್ ಷಾ,( ೧೫೫೮ / ೧೫೮೦ )
ಈ ಸಂತತಿಯ ಸಮರ್ಥನಾದ ದೊರೆಯಾಗಿದ್ದನು.
ಇತ್ತ ವಿಜಯನಗರ ಹಿಂದೂ ಸಾಮ್ರಾಜ್ಯದ ವಿರುದ್ಧ ವಾಗಿ ಒಂದು ಒಕ್ಕೂಟ ವನ್ನು ರಚಿಸಿದನು,ಇದರಲ್ಲಿ ದಕ್ಷಿಣದಲ್ಲಿಯ ಮುಸ್ಲಿಮ ರಾಜರೆಲ್ಲರೂ ಒಕ್ಕಟ್ಟಾದರು,ದಿಲ್ಲಿಯ ಅಕಬರ್ ಬಾದಶಹನ ಒಪ್ಪಿಗೆ ದೊರೆಯಿತು,
ಇದರಪರಿಣಾಮವಾಗಿ ವಿಜಯನಗರದ ಸಾಮ್ರಾಜ್ಯದ ಮೇಲಿಂದ ಮೇಲೆ ದಂಡೆತ್ತಿ ಹೋಗಿ ಬರುವ ಬರುತ್ತಿರುವ ದಾರಿಯ ,ಮದ್ಯ ಇರುವ ಊರು ಕುಷ್ಟಗಿ ಪಟ್ಟಣ
ಇಲ್ಲಿಯ ಉತ್ತಮ, ಹವಮಾನ , ನೀರಿನ ಸಂಪನ್ಮೂಲ, ವಿಶಾಲವಾದ ಕೆರೆಯಂಗಳದ ಮೈದಾನ ಹೀಗೆಲ್ಲ ಅನೂಕೂಲಗಳಿರಬಹುದಾದ ಜಾಗದಲ್ಲಿ ಬಿಡಾರ ಹೂಡಿಕೊಂಡು ಡೇರೆ ಹಾಕುವ ಪ್ರದೇಶವಾಗಿದ್ದು,
ಒಮ್ಮೆ
ಅಲಿ ಆದಿಲ್ ಷಾನ ಪಟ್ಟದ ಕುದುರೆ ಎಂದು ಹೇಳಲಾಗುವ ( ನಿರ್ದಿಷ್ಟವಾಗಿ ದೊರೆಯ ಹೆಸರು ಗೊತ್ತಿಲ್ಲ )ಕಲ್ ಬಾವಿಯ ಈ ಪ್ರದೇಶದಲ್ಲಿ ಮೂರುಕಾಲು ನೆಲಕ್ಕೂರಿ ಒಂದು ಕಾಲು ಮೇಲೆತ್ತಿ ನಿಂತು ಹೇಂಕರಿಸಿತು,
ಕುದುರೆ ಮುಂದೆಹೋಗಲೇ ಇಲ್ಲ ಇದನ್ನರಿತ ದೊರೆ
ಶಾಸ್ತ್ರ, ಧರ್ಮ ನಿಷ್ಣಾತ ನಾಗಿದ್ದ ರಿಂದ ತನ್ನಜೊತೆಯಲ್ಲಿರುತ್ತಿದ್ದ ಮೌಲ್ವಿಗಳನ್ನು, ಪಂಡಿತರನ್ನು , ವಿದ್ವಾಂಸರನ್ನು ವೀರಶೈವ ಯಳಮಲಿ ದೇವರನ್ನು ಪ್ರಶ್ನೆ ಮಾಡಿಸಿ,
ಬಿಳಿಹೊತ್ತಿಗೆಯನ್ನು ಓದಿಸಿ ಮಾಹಿತಿಪಡೆದುಕೊಂಡಾಗ ಅವರು ಹೇಳಿದ್ದು ,
ಕುದುರೆ ನಿಂತ ಜಾಗದಲ್ಲಿ ಏಳು ಕೊಪ್ಪರಿಗೆ ಹೊನ್ನಿನ ಬಾವಿಇದ್ದು ಇದನ್ನು ತೆಗೆಸುವಮಾರ್ಗ ಕಂಡುಕೊಂಡನು ,
ಈ ಪ್ರದೇಶದಲ್ಲಿ ದೊರೆಯ ಕುದುರೆ ಕುಂಟಿದ ದಂಡು ಪ್ರದೇಶ ಕ್ಕೆ ಕುಂಟಿಗಿ > ಕುಂಠಿಗಿ > ಕುಷ್ಟಿಗಿ > ಕುಷ್ಠಿಗಿ > ಕುಷ್ಟಗಿ ಎಂದಾಯಿತು ಎನ್ನುವವರು ಹಲವರಿದ್ದಾರೆ( ಇದರ ಬಗ್ಗೆ ಪೇಸ್ ಬುಕ್ ನ ಸರಣಿ ಬರಹದಲ್ಲಿ ಉಲ್ಲೇಖಿಸಿರುವೆ ನೋಡಿ )
ಕುದುರೆ ಕುಂಟಿದ ಈ ಕುಂಟಿಗಿಯ ಪ್ರದೇಶದಲ್ಲಿ ಶಾಸ್ತ್ರ ಸಮ್ಮತವಾಗಿ ಹಿಂದೂ ಧಾರ್ಮಿಕ ಪಧ್ಧತಿಯಂತೆ ಶುಭ ಕಾರ್ಯಗಳಿಗೆ ,ವಿಧಿ ವಿಧಾನಮಾಡುವಂತೆ, ಶುಭಕಾರ್ಯಗಳಿಗೆ ಮಾರ್ಗದರ್ಶನ ಮಾಡುವ ಪಂಚಕಳಸ ಹೂಡುವಂತೆ ಗ್ರಾಮದ ಮೇರೆಗಳಲ್ಲಿ ಪಂಚಕಳಸ ನಾಲ್ಕು ದಿಕ್ಕಿಗೆ ಒಂದೊಂದು ಇಂಡೋ ಇಸ್ಲಾಮಿಕ್ ಶೈಲಿಯ ದೇವಾಲಯಗಳನ್ನು ಕಟ್ಡಿಸಲಾಯಿತು
೧ ) ವರಲೆಕ್ಕಿ ಗುಡಿ
೨ ) ಹುಚ್ಚರಾಯನಗುಡಿ
೩ ) ಸಿದ್ದಪ್ಪಜ್ಜನಗುಡಿ
೪ ) ನಾಲ್ಕನೇಯ ಗುಡಿ ನಶಿಸಿಹೋಗಿದ್ದು.ಈಗ ಕಾಣದಾಗಿದೆ.
೫ ) ಊರೊಳಗಿನ ರಾಮಲಿಂಗೇಶ್ವರ ಗುಡಿ
ಈ ರೀತಿಯಾಗಿ ಕಟ್ಟಿಸಿ ದಿಗ್ಭಂಧನಮಾಡಿಸಿ
ಭಾವಿತೋಡಲು ಶುರುಮಾಡಿದರು
ಮೊದಲಿಗೆ ಒಂದು ಕೊಪ್ಪರಿಗೆ ಹೊನ್ನು ಸಿಕ್ಕಿ ತಂತೆ, ? , ಅದರಲ್ಲಿ ವರಹಗಳು ಸಿಕ್ಕವಂತೆ, ! ಈ ರೀತಿಯಾಗಿ ಆರು ಕೊಪ್ಪರಿಗೆ ಹೊನ್ನನ್ನು ಆನೆ ! ಕುದುರೆ ! ಒಂಟೆಗಳಲ್ಲಿ ಸಾಗಿಸಿದರಂತೆ, !
ಇನ್ನೂ ಒಂದು ಕೊಪ್ಪರಿಕೆ ಹೊನ್ನನ್ನು ? ಕಲ್ಲುಭಾವಿಯೊಳಗಿರುವ ಕಲ್ಲಿನ ಬಸವಣ್ಣ ಕಳುವು ಮಾಡಿಕೊಂಡ ! ಎಂದು
ಜನರು ಇಂದಿಗೂ ಕಳ್ಳ ಬಸವಣ್ಣ ಎಂದು ಕರೆಯುವರು
ಹಾದಿ ಬೀದಿಯಲ್ಲಿ ಚೆಲ್ಲಿಹೋದ ದುಡ್ಡನ್ನು ಆರಿಸಿಕೊಂಡವರು , ಕೇಳಿರುವವರು , ಜನಪದರು ಹಾಡಿದರು ಎನ್ನುವ ರೂಢಿಗತ ಹಾಡೊಂದಿದೆ
ಇದನ್ನೇ ನಮ್ಮ ಜನ ಸಮುದಾಯವು
ಆನೆ ಬಂತೊಂದಾನೆ
ಯಾವ ಊರಿನ ಆನೆ ?
ಮುದಗಲ್ ( ಬಿಜಾಪುರದ) ಆನೆ
ಇಲ್ಲಿಗ್ಯಾಕ ಬಂತು ?
ಹಾದಿತಪ್ಪಿ ಬಂತು !
ಹಾದಿಗೊಂದು ದುಡ್ಡು
ಬೀದಿಗೊಂದು ದುಡ್ಡು ?
ಅದ ದುಡ್ಡು ಕೊಟ್ಟು
ಸೇರು ಕೊಬ್ಬರಿ ತಂದು !
ಲಟಲಟ ಮುರಿದು
ಹುಡುಗರ ಕೈಯಾಗ ಕೊಟ್ಟು ?
ಅಣ್ಣ ಎಲ್ಲಿ ಅದಾನ ?
ಹೆಣ್ಣತರಾಕ ಹೊಗ್ಯಾನ ! ಈಗೆಲ್ಲಿ ಹೆಣ್ಣು ? ಹಳೇ ಹುಂಚೆಣ್ಣು !
,,,, ,,,, ,,,,,,,,,,
“””””””””””ಮುಂದುವರೆಯುತ್ತದೆ,!
ಇಂದಿಗೂ ಎಳೆ ಮಕ್ಕಳನ್ನು ಹೆದರಿಸಿ ಮಲಗಿಸಲು ಈ ಹಾಡನ್ನು ಹಾಡುವದನ್ನು ನಾವು ನೀವು ಕೇಳಿದ್ದೇವೆ,
ಈ ಜನಪದರ ಹಾಡಿನ ಹಿಂದೆ
ಒಂದು ನೋವಿನ ಕತೆ ಇದೆ :
ಒಂದನೆಯ ದೇವರಾಯ _ ಇಮ್ಮಡಿ ಹರಿಹರನ ತರುವಾಯ ಅವನ ಹಿರಿಯ ಮಗ ೨ ನೆಯ ಬುಕ್ಕನು ಪಟ್ಟವೇರಿದನು, ಒಂದೆರೆಡು ವರ್ಷಗಳಲ್ಲಿ ಅವನು ಸತ್ತದ್ದರಿಂದ ಅವನ ತಮ್ಮನಾದ ಒಂದನೆಯ ದೇವರಾಯನು ಅರಸನಾದನು ಇವನು ನೀರಾವರಿಗಾಗಿ ಶ್ರಮಿಸಿದನು ವಿಜಯನಗರದಲ್ಲಿ ಕಾಲುವೆಯನ್ನು ಕಟ್ಟಿಸಿ,ರಾಜಧಾನಿಸುತ್ತಲೂ ಕೋಟೆಗೋಡೆಕಟ್ಟಿಸಿದನು, ತುಂಗಬಧ್ರಾ ನದಿಗೆ ಒಡ್ಡು ಹಾಕಿಸಿದನು
ಇವನಕಾಲಕ್ಕೆ ಮುದಗಲ್ ಬಹಮನೀ ರಾಜರ ವಶದಲ್ಲಿತ್ತು,
ಮುದಗಲ್ಲಿನಲ್ಲಿದ್ದ ಒಬ್ಬ ಅಕ್ಕಸಾಲಿಗನಿಗೆ ಅತ್ಯಂತ ಸುಂದರಿಯಾದ ನಿಹಾಲ ಎಂಬ ಮಗಳಿದ್ದಳು, ನಿಹಾಲಳನ್ನು ತನಗೆ ಮದುವೆ ಮಾಡಿಕೊಡಬೇಕೆಂದು ದೇವರಾಯನು ಅಕ್ಕಸಾಲಿಗನಿಗೆ ಕೇಳಿದನು ಅವನು ಒಪ್ಪಲಿಲ್ಲ
ದೇವರಾಯನು ಮುದಗಲ್ಲಿಗೆ ದಂಡೆತ್ತಿಹೋದನು, ನಿಹಾಲಳು ಬಹಮನೀರಾಜ್ಯದೊಳಗೆ ಓಡಿಹೋದಳು,
ಈ ಸುದ್ದಿ ಯನ್ನು ಕೇಳಿ ಬಹಮನೀ ಅರಸನು ಸಿಟ್ಟಿಗೆದ್ದನು
ವಿಜಯನಗರದ ಮೇಲೆ ದಂಡುಕಟ್ಟಿಗೊಂಡು ನಡೆದನು ಯುದ್ದವಾಯಿತು ದೇವರಾಯನು ಸೋತು ತನ್ನಮಗಳನ್ನು ಪಿರೋಜಶಹನಿಗೆ ಕೊಟ್ಟಿದ್ದಲ್ಲದೆ ಬಂಕಾಪೂರದ ಕೋಟೆಯನ್ನು ವರದಕ್ಷಿಣೆ ಎಂದು ನೀಡಿದನು,
ಆಗ ಗೆದ್ದ ಸುಲ್ತಾನ್ ನ ಸೈನಿಕರಿಗೆ ಆ ದಂಡಿನವರಿಗೆ ಕೊಬ್ಬರಿ ಬೆಲ್ಲ ವನ್ನು ಹಿಡಿದುಕೊಂಡು ದಾರಿಯಲ್ಲಿಬರುವ ಗ್ರಾಮಸ್ಸರು ನೀಡಬೇಕಿತ್ತಂತೆ ,ಕೊಬ್ಬರಿ ಬೆಲ್ಲ ಇಲ್ಲದೆ ಹೋದರೆ, ಮನೆ ಮಠಗಳಮೇಲೆ ಅಮಾಯಕ ಹೆಣ್ಣುಮಕ್ಕಳ ಮೇಲೆ ರಾಕ್ಷಸೀತರಹದ ಅನಾಚಾರ ಅತ್ಯಾಚಾರ ಮಾಡಿ ರಣ ಕೇಕೆ ಹಾಕುತ್ತಿರುವುದು ಸಾಮಾನ್ಯವಾದ ಸಂಗತಿ ಯಾಗಿತಂತೆ, ಹೆಣ್ಣು ಹೊನ್ನು ಆಸೆಗಾಗಿ
ಅಣ್ಣ ಎಲ್ಲಿ ಹೋದ ? ಹೆಣ್ಣು ತರಕ ಹೋದ ? ಈಗ ಎಲ್ಲಿ ಹೆಣ್ಣು ? ಹಳೆಯ ಹುಣಸೆ ಹಣ್ಣು ಎಂದು ಮನೆಯಲ್ಲಿರುವ ಅಶಕ್ತರು ಈ ರೀತಿ ಕೇಳಿದ ಸೈನಿಕರಿಗೆ ಹೇಳಿಕಳಿಸುತ್ತಿದ್ದರಂತೆ,
ಇದನ್ನೇ ಕಲ್ಲುಬಾವಿಯಲ್ಲಿ ಸಿಕ್ಕ ಹೊನ್ನನ್ನು “ವರಹ ನಾಣ್ಯಗಳನ್ನು ಆನೆ ಮೇಲೆ ಒಯ್ದರು ಎಂದು ಹೇಳುವ ಜನರಿದ್ದಾರೆ, !
ಇದರ ಸತ್ಯಾಂಶವು ಇತಿಹಾಸ ಸಂಶೋಧಕರಿಂದ ಹೊರಬರಬೇಕಿದೆ ಎನ್ನುವುದು ನನ್ನ ಅಭಿಪ್ರಾಯ ವಾಗಿದೆ, ಆಗೀನ ಕಾಲದಿಂದಲೂ ಪ್ರಚಲಿತದಲ್ಕಿರುವ ಹಳೆ ಮಂದಿ ಬಾಯಲ್ಲಿ ಉಸುರುವ
ಆಗ ಹುಟ್ಟಿದ ಹಾಡೇ ಆನೆ ಬಂತೊಂದ ಆನೆ,, ಎನ್ನಬಹುದಾಗಿದೆ
ಆದಿಲ್ ಶಾಹಿ ದೊರೆಯು ರಸಿಕನಾಗಿದ್ದು ಕಲೆ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಮನಸ್ಸಿನವ ನಾಗಿದ್ದ, ಇತನ ಹಿಂದೆ ಇರುವ ಪಂಡಿತರು , ವಿದ್ವಾಂಸರು, ಮೌಲ್ವಿಗಳು , ವೀರಶೈವ ಪಂಡಿತರು ಕಾಲಾಳುಗಳು ವಿವಿಧ ಧರ್ಮಿಯರು ,ಇನ್ನಿತರರು ಇದ್ದರಂತೆ,
ಹಿಂದೂಗಳಿಗೆ
ಪೂಜೆ ಪುನಸ್ಕಾರ ಮಾಡಲು ಅನೇಕ ದೇವಾಲಯಗಳನ್ನು ಕಟ್ಟಿಸಿಕೊಳ್ಳಲು ಅನುಮತಿ ನೀಡಿದನಂತೆ ಅದರಂತೆ ಭಾಗ್ಯದ ಹನುಂಮತ ದೇವರ ಗುಡಿ , ವೆಂಕಟೇಶ್ವರ ಗುಡಿ , ಮುಸ್ಲಿಂರಿಗೆ , ನಮಾಜುಮಾಡಲು ಮಸೀದಿಗಳಿಗೆ ಬೇಡಿಕೆಇಟ್ಟಾಗ ಶಾಹಿಯೇ ಮಸಜಿದ್ ಎನ್ನುವ ದೊಡ್ಡ ಮಸೀದಿಯನ್ನು ತೆಗ್ಗಿನ ಓಣಿಯಲ್ಲಿ ಕಟ್ಟಿಸಿದನು ಎಂದು ಹೇಳುವವರು.
ಇಲ್ಲಿ ಇನ್ನೊಂದು ವಿಷಯ ತಿಳಿಯಬೇಕಾದ ಅಂಶವೇನಂದರೆ, ಮೊಹರಂ ಹಬ್ಬದ ಸಂದರ್ಭದಲ್ಲಿ ಅಲೈದೇವರು ಹೊಳೆಗೆ ಹೋಗುವಾಗ ಪರಸ್ಪರ ಅಲಂಗಿಸಿಕೊಂಡು ಬಿಳ್ಕೋಡುವ ಜಾಗವು ಕನ್ಯಾ ಶಾಲೆಯ ಮುಂದಿನ ದ್ಯಾಮವ್ವನ ಕಟ್ಟೆ ಪಾದಗಟ್ಟೆಯ ಮುಂದಿನ ಬಯಲು ಜಾಗ ಇಲ್ಲೇ ಇರುವುದು ಇಂದಿಗೂ ಕಾಣಬಹುದಾಗಿದೆ,
ಹೈದರಾಬಾದ್ ನಿಜಾಮ್ ಅವರ ಸಿಬ್ಬಂದಿಯು ಮೊಹರಮ್ ಹಬ್ಬವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಅವರನಿವಾಸವು ಎತ್ತರದ ಪ್ರದೇಶದ ಕಟ್ಟಡವು ಇಲ್ಲಿಯೇ ಇತ್ತಂತೆ ಅವರಿಗಾಗಿ ಸಲಾಮ್ ತಗೆ್ದುದುಕೊಳ್ಳುವ ಜಾಗವು ಇಲ್ಲಿ ಇದ್ದಿದುದರಿಂದ ಇಂದಿಗೂ ಇದೇ ಸ್ಥಳದಲ್ಲಿ ಅಲೈದೇವರು ಹೊಳೆಗೆ ಹೋಗುವುದು ಪೂರ್ವಿಯಿಂದ ನಡೆದುಕೊಂಡು ಬಂದಿದ್ದು ,ಕಾಣುತ್ತಿದ್ದೇವೆ.
ಹಿಂದೂಗಳಿಗೆ
ಭಾಗ್ಯದ ಹನುಮಂತದೇವರ ಗುಡಿ ಕಟ್ಟಿಸಿದ ಸ್ಥಳದಲ್ಲಿ , ದೊಡ್ಡದಾದ ಗಣೇಶನ ಶಿಲ್ಪ ಆಗ ಇತ್ತೆಂದು ಹಿರೀಕರು, ನೋಡಿದವರಾದ ದಿ . ಪಂಚಯ್ಯ ಮಳಿಮಠ ಅವರು ನೆನಪಿಸಿಕೊಂಡರು ಕಾಲಾಂತರದಲ್ಲಿ ಅದು ಕಳುವಾಯಿತಂತೆ, !
ಅದೇ ರೀತಿಯಾಗಿ ಯಳಮಲಿ ಬಸವಲಿಂಗಯ್ಯ ಶಾಸ್ತಿಯವರ ಮನೆ ಪಕ್ಕದಲ್ಲಿ ವೀರಭದ್ರ ದೇವರ ದೇಗುಲ ನಿರ್ಮಣವಾದವು ಎನ್ನುತ್ತಾರೆ ಇನ್ನೂ ಕೆಲವರು.
ಕಲ್ಲುಬಾವಿಯ ಕಲಾತ್ಮಕ ಕಮಾನುಗಳು ರಚನಾ ಶೈಲಿ ಬಿಜಾಪುರದ ವಾಸ್ತು ಶಿಲ್ಪ,ವನ್ನು ಹೋಲುತ್ತಿದ್ದು,
ಕಲ್ಲುಬಾವಿಯೊಳಗೆ ನಾಲ್ಕು ದಿಕ್ಕಿನಲ್ಲಿ ದೊಡ್ಡದಾದ ಕಮಾನುಗಳನ್ನು ಕಾಣಬಹುದು,
ದಕ್ಷಿಣಾಭಿಮುಖವಾಗಿ ಕಾಣುವ ಕಮಾನು ಇಂದಿಗೂ ಗಟ್ಟಿಯಾದ ಕಲಾತ್ಮಕ ವಾಗಿದೆ,
ಬಾವಿಯೊಳಗಿನ ನೆಲ ಮಟ್ಟದಿಂದ ೨೦ ಪೀಟ್ ಎತ್ತರದ ಕಟ್ಟೆಯ ಮೇಲೆ, ೮ ಫೀಟ್ ಅಗಲ ೧೦ ಫೀಟ್ ಉದ್ದ ದ ಕಮಾನಿನ ಒಳಗೆ ಸಣ್ಣ ಸಣ್ಣ ಪ್ರಮಾಣದ ಮೂರು ಕಮಾನುಗಳು ಅವುಗಳಮೇಲೆ ಚಿಕ್ಕಾದಾದ ಮೂರು ಚೌಕದ ಮಾಡಗಳು ಕಾಣಸಿಗುತ್ತವೆ,
ಇವುಗಳ ನಡುವೆ ಸಣ್ಣದಾದ ಚೌಕಾಕಾರದ ಮಾಡವಿದೆ,
ಕಲ್ಲುಬಾವಿಯೊಳಗೆ ಪ್ರವೇಶಿಸಲು ನೈರುತ್ಯ ಮೂಲೆಯಿಂದ ಇಳಿಜಾರಿನಲ್ಲಿ ಸಾಗಿ ಮುಂದೆ ಉತ್ತರ ದಿಕ್ಕಿಗೆ ಕಮಾನುಇದ್ದು ತಳಮಟ್ಟದಿಂದ ೨೦ ಪೀಟ್ ಅಗಲ ೨೫ ಫಿಟ್ ಎತ್ತರದ ಗಟ್ಟಿಯಾದ ಕಮಾನು ಇದು ಕೂಡಾ ಇಟ್ಟಿಗೆ ಗಾರೆ ಕಲ್ಲಿನಿಂದ ರಚಿಸಲ್ಪಟ್ಟಿದೆ,
ಪಶ್ಚಿಮಕ್ಕೆ ಇರುವ ಕಮಾನು ದೊಡ್ಡದಾದ ಆಲದ ಮರವು ಬೆಳೆದು ಕಾಣದಂತಾಗಿ ಬಿಲಗಳಲ್ಲಿ ಪಾರಿವಾಳ ಪಕ್ಷಿಗಳು ಗೂಡುಕಟ್ಟಿವೆ, ಕಟ್ಟಡವು ದುರ್ಬಲವಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ
ತಳಪಾಯದ ಕಲ್ಲುಗಳು ಶಿಥಿಲಗೊಂಡಿರುವುದು ಆತಂಕವನ್ನುಂಟುಮಾಡುತ್ತಿದೆ,
ಮಸೀದಿ ಶೈಲಿಯಲ್ಲಿ ಬೃಹತ್ ಪ್ರಮಾಣದ ನಾಲ್ಕು ದೊಡ್ಡ ಕಮಾನುಗಳನ್ನು ಇಟ್ಟಿಗೆ ಕಲ್ಲು ಗಾರೆಗಳಿಂದ ನಿರ್ಮಿಸಲಾಗಿದ್ದು ದೊಡ್ಡ ಕಲ್ಲು ಗಳ ಸಹಾಯದಿಂದ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ
ಕೆರೆ ,ಭಾವಿ ತೋಡಿಸುವಾಗ ತೆಗೆದ ತಗ್ಗಿನ ಮಣ್ಣನ್ನು ಮೇಲೆಕೆತ್ತಿದ ಜಾಗ ಗೌಡರ ಓಣಿ ಕಲ್ಮಠದ ಸುತ್ತಲಿನ ಜಾಗವು ಎತ್ತರವಾಗಿ ಉಳಿದ ಸಮೀಪದ ಪ್ರದೇಶ ತಗ್ಗಾಗಿ ಇಂದಿಗೂ ತೆಗ್ಗಿನ ಓಣಿಯಾಯಿತು ಅದರ ಪಕ್ಕದ ಕೆರೆ ಅಂಗಳ , ಕ್ರೀಡಾಂಗಣ , ಮನೆಗಳಿಂದ ಒತ್ತುವರಿಯಾಯಿತು !
, ಆ ಕೆರೆಯ ಸುತ್ತಲೂ ಭದ್ರವಾದ ಕಲ್ಲಿನ ರಕ್ಷಣಾ ಕೋಟೆಯು ಇತ್ತಂತೆ ?
ನನಗೆ ನೆನಪಿರುವಂತೆ ಕೆರೆಯ ದಡದಲ್ಲಿ ಈಗಲೂ ಇರುವ ಸಹದೇವಪ್ಪನವರ ಸಾ ಮಿಲ್ ನ ಹಿಂಭಾಗದಲ್ಲಿ ಶಾಸನ ನೋಡಿದ ನೆನಪಿದೆ, ಈಗ ಎಷ್ಟು ಹುಡುಕಿದರೂ ಅದು ಕಾಣುತ್ತಿಲ್ಲವಾಗಿದೆ ?
ಕೆರೆಯ ನೀರಿನ ಸಮತಟ್ಟಾದ ಕಲ್ಲುಬಾವಿ ಇದ್ದುದರಿಂದ ಕೆರೆಯಿಂದ ಕಲ್ಲುಬಾವಿಯ ವರೆಗೆ ಹೈದರಾಬಾದ್ ನಿಜಾಮ್ ಸರಕಾರ ಒಳ ಕಾಲುವೆ ಮಾಡಿಸಿ ತೂಬಿನ ವ್ಯವಸ್ಥೆ ಮಾಡಿಸಿದರು,
ಇದರಿಂದಾಗಿ ಮನೆಮನೆಗಳಲ್ಲಿ ನೀರಿನ ಊಟಿಕಿತ್ತುವುದು ಸರ್ವೆ ಸಾಮಾನ್ಯ ವಾಗಿತ್ತು,ಇದರಿಂದ ಅಕ್ಕ ಪಕ್ಕದ ಮನೆಯವರು ,ಆ ಪರಿಸರದ ಮಂದಿ ರೋಸಿಹೋದ ಜನರು ಆಗ ಬಾವಿಯೊಳಗಿನ ತೂಬಿಗೆ ಕಲ್ಲುಜಡಿದು ಪೂರ್ತಿ ಬಂದ ಮಾಡಲಾಯಿತು,
ಇಂತಹ ಬೃಹತ್ ಕಲ್ಲುಬಾವಿಯ ಉದ್ದ ೬೦ ಮೀಟರ್ ಅಗಲ ೭೫ ಮೀಟರ ಒಟ್ಟು ಸುತ್ತಳತೆ ೪೫೦೦ ಚದರ ಮೀಟರ್ ವಿಸ್ತೀರ್ಣದ ಕಲ್ಲುಬಾವಿಯಲ್ಲಿ ನೀರು ಸಂಗ್ರಹವಾದರೆ, ನೀರಿನ ಪ್ರಮಾಣವು ೫ ಮೀಟರ್ ಆಳದಲ್ಲಿ ನೀರು ನಿಂತರೆ, , ೨ ಕೋಟಿ ೨೫ ಲಕ್ಷ ಲೀಟರ್ ನೀರು ದೊರೆಯುತ್ತದೆ
ಇಂತಹ ದೊಡ್ಡ ಪ್ರಮಾಣದ ಕಲ್ಲುಭಾವಿಯ ಸ್ವಚ್ಚತಾ ಕಾರ್ಯ ವನ್ನು ೨೦೦೪ ರಲ್ಲಿ ಮೊಟ್ಟಮೊದಲಬಾರಿಗೆ ನಟರಾಜ ಸೋನಾರ ನನ್ನ ಮಾರ್ಗದರ್ಶನ ದಲ್ಲಿ ಸಂತೋಷ ಸರಗಣಾಚಾರ ಮತ್ತು ಅವರ ಗೆಳೆಯರು ಸೇರಿ ಯುವ. ಶಕ್ತಿ ಯುವಕ ಮಂಡಳ ದ ವಾರ್ಷಿಕೋತ್ಸವದ ಸಮಾರೋಪದಲ್ಲಿ
ಪ.ಪೂ ಗವಿಸಿದ್ದೇಶ್ವರ ಶ್ರೀ ಗಳನ್ನು ಪ್ರಥಮಬಾರಿಗೆ ಪುರ ಪ್ರವೇಶ ಮಾಡಿಸಿ ಕಾರ್ಯಕ್ರಮಕ್ಕೆ ಕರೆತಂದು ಕಲ್ಲುಬಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆರ್ಶಿವದಿಸಿದರು.ಯುವ ಕಾರ್ಯಕರ್ತರಾದ, ಉತ್ಸಾಹಿತರಣರ ಗುಂಪಿನ
ಸಂತೋಷ ಸರಗಣಾಚಾರ , ಶಿವಕುಮಾರ ಸೂಡಿ ಮಹಾಂತೇಶ ಮಂಗಳೂರು ಇನ್ನಿತರರ ನೇತೃತ್ವದಲ್ಲಿ ಅವರ ಗೆಳಯರ ಸಹಕಾರದಲ್ಲಿ ನಡೆಯಿತು
ಆಗ ಇಲ್ಲಿ ಚುನಾವಣಾ ಸಂಧರ್ಭವೂ ಇತ್ತಂತೆ ತೋರುತ್ತದೆ
ಅಮರಗುಂಡಪ್ಪ ಮೇಟಿಯವರ ಪೆಟ್ರೋಲ್ ಪಂಪ್ ಕೆಲಸ ಎನ್ನೆಚ್ ೧೩ ರ ಹತ್ತಿರ ನಡೆದಿತ್ತು ನಾವು ಹೋಗಿ ವಿನಂತಿಸಿದಾಗ ೨ ಇಟಾಚಿ ನೀಡಿ ಸ್ವಚ್ಚತೆಗೆ ಸಹಕರಿಸಿದರು
ಬಾವಿಯೊಳಗೆ ಸಮತಟ್ಟಾದ ಜಾಗ ನಿರ್ಮಿಸಿ ಅದರಲ್ಲಿ
. ಹುಡುಗರು ಕೆಲ ವರುಷ ಅಲ್ಲಿ ಆಟ ಆಡಿದರು
ನಂತರ ಕಲ್ಲೇಶ ತಾಳದ ಅವರ ಸಂಘಟನೆಯ ಗೆಳೆಯರು ಸೇರಿ ಬಾವಿ ಸ್ವಚ್ಚಿಕರೀಸಿ ಆಟವಾಡಲು ಒಳಾಂಗಣ ಕ್ರೀಡಾ ಮೈದಾನವಾಗಿಸಿದರು
ಇನ್ನೂ ಆಸಕ್ತ ಕೆಲವರು ಸ್ವಂತ ಇಚ್ಛೆಯಿಂದ ಸ್ವಚ್ಚತೆಯಸೇವೆ ಮಾಡಿದರು
ಈಗ ಅಲ್ಲಿನ ಸುತ್ತಮುತ್ತಲಿನ ಸ್ಥಳೀಯರು ಬಚ್ಚಲು ನೀರನ್ನು, ಪಾಯಖಾನೆಯ ಕಶ್ಮಲವನ್ನು ಬಿಟ್ಟು ಬಾವಿಯಲ್ಲಿ ಬಳ್ಳಾರಿ ಜಾಲಿ ಬೆಳೆದು ಕಲ್ಲುಗಳು ಜಾರಿಬಿದ್ದು , ಅವನತಿಯ ಹಂತ ತಲುಪುತ್ತಿರುವುದು ಕಣ್ಮುಂದೆ ನಡೆಯುತ್ತಿದೆ,
ಇತ್ತೀಚೆಗೆ ದೊಡ್ಡಾದ ಅಲದ ಮರಬೆಳೆದು ಅದರಬೇರುಗಳು ಬಾವಿಯ ಕಲ್ಲುಗಳನ್ನು ಸಡಿಲಗೊಳಿಸುತ್ತಿರುವುದ ಕಂಡು ಸ್ಥಳೀಯ ಮುಖಂಡ ರ ನೆರೆವಿನಿಂದ ಮರವನ್ನು ಕತ್ತರಿಸಲಾಗಿದೆ.
ಈ ಕಲ್ಲುಬಾವಿಯ ಕುರಿತಂತೆ ಸಿವಿಲ್ ಇಂಜಿನಿಯರ್ ವಿರೇಶ ಬಂಗಾರಶೆಟ್ರ ಅವರು ಹೇಳಿದ್ದಿಷ್ಟು;
” ಪುರಾತನ ಕಲ್ಲುಬಾವಿಯು ತೀರಾ ದುಸ್ತಿತಿಯಲ್ಲಿದ್ದು ನಿವಾಸಿಗಳ ಅನಾದಾರದಿಂದ ಕೊಳಚೆಯಾಗಿ ಮಾರ್ಪಟ್ಟಿದೆ, ಇದನ್ನು ಸಾರ್ವಜನಿಕವಾಗಿ ಬಳಕೆಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮಾನ್ಯ ಶಾಸಕರಿಗೆ,
ಪುರಸಭೆಯ ಜನ ಪ್ರತಿನಿಧಿಗಳಿಗೆ ಮನವಿಪತ್ರವನ್ನು ಸಲ್ಲಿಸಲು ಇದಕೊಂದು ಕ್ರೀಯಾಯೋಜನೆಯನ್ನು ರೂಪಿಸಲು ಹಕ್ಕೊತ್ತಾಯ ಮಾಡಲು ನಿರ್ಧಾರ ತೆಗೆದುಕೊಳ್ಳುವ ಮೂಲಕ ನಾವು ಮನ್ನೆಡೆ ಇಡಬೇಕಿದೆ ಎಂದು ಇತಿಹಾಸಕಾರ ಡಾ ಕೆ ಶರಣಪ್ಪ ನಿಡಸೇಸಿ ಆತ್ಮವಿಶ್ವಾಸದಿಂದ ನುಡಿಯುತ್ತಾರೆ ”
ನಗರದ ಸಂಘಟನೆಯ ಸದಸ್ಯರು ಹಾಗು ಜನಪ್ರತಿನಿಧಿಗಳು ಹೇಗೆ ಸಹಕಾರ ನೀಡುತ್ತಾರೆ ? ಎಂದು ಕಾದುನೋಡಬೇಕಿದೆ,
ಪುರಾತನ ಕಲ್ಲುಬಾವಿ ರಕ್ಷಣಾ ಸಮಿತಿ ರಚಿಸೋಣ :
ಅದರ ಪ್ರಯೋಜನ ಪಡೆಯೋಣ
ಚಿತ್ರ / ಬರಹ :
– ನಟರಾಜ್ ಸೋನಾರ್