ಶರಣರ ವಚನಂಗಳೆ ಎನ್ನುಸಿರೆಂದಿರಿ,.
ಬಸವಣ್ಣರೆ ಎನ್ನಪ್ಪನೆಂದಿರಿ.
ಶರಣರ ವಚನಂಗಳೆ ಎನ್ನುಸಿರೆಂದಿರಿ,.
ಅವ್ವನೀಲವ್ವೆಗಳೆ ತಾಯೆಂದು,.
ಶರಣಸಂಕುಲಕೆ ಶರಣೆಂದಿರಿ,.
ಶಿವಯೋಗಿ ಹೊರಟಿರಿ ದಟ್ಟಾರಣ್ಯದೊಳ್
ಶರಣ ರೇಚಯ್ಯಗಳ ದರುಶನಕೆ
ಹುಲಿಯುಕಂಡಿವರ
ಸಾತ್ವಿಕತೆಗೆ ಶಿರಬಾಗಿ ಶರಣೆನ್ನುತಿರಲು
ಪ್ರಸನ್ನ ಶಿವಯೋಗಿ ತಾವಾದಿರಿ,
ಜಾತಿ ವಿಜಾತಿ ಎಂಬ ಕಾಲದಿ
ಮುಂಜಾನೆ ಮಂಜಿನಲೆ ಮಂಜಪ್ಪಗೆ
ಕರೆದು ಲಿಂಗದೀಕ್ಷೆಯನಿತ್ತು ಹರಸಿದಿರಿ,.
ಕಾರುಣ್ಯ ರೂಪದಿಂ ಬಂದ ಭಕ್ತರ ಸಂತೈಪ ನಿಜಶರಣ ಶಿವಯೋಗಿವರ್ಯರೆ ತಾವಾದಿರಿ,.
ತಮಗೆ ಶರಣೆಂದು ಬಂದ ಬಾಲಗಂಗಾಧರ ತಿಲಕರಿಗೆ ಕರೆದು’ ದೇಶಕೆ ಸ್ವಾತಂತ್ರ್ಯ ಸಿಗುವುದೆಂದು ಅಭಯವನಿಟ್ಟು ಕಳುಹಿದಿರಿ,.
ಅಪ್ಪಬಸವನನ್ನು ತತ್ವದಿ ಅಪ್ಪಿಕೊಂಡಿರಿ,.
ಪ್ರಭು ಅಲ್ಲಮನನ್ನು ಬೆರಗಿನ ಕಣ್ಣಲೆ ಕೂಡಿಕೊಂಡಿರಿ..
ಚೆನ್ನಬಸವಣ್ಣನ ಚಿನ್ಮಯತವನಿಧಿಯಾಗಿ ತಾವು ಆಚಾರಲಿಂಗಿಯಾದಿರಿ.
ಸೊಲ್ಲಾಪುರ ಸಿದ್ಧರಾಮನ ಯೋಗ ದೃಷ್ಟಿಯಲೆ ಕಂಡಿರಿ,.
ವೀರಮಾಚಯ್ಯಗಳ ದಿಟ್ಟನಿಲುವು ತಾವಾದಿರಿ,.
ಹಡಪದಪ್ಪಣ್ಣಗಳ ಕರುಣೆಗೆ ಕಣ್ಮಣಿಯಾದಿರಿ,.
ಚೆನ್ನಯ್ಯನ ಮನೆಯ ಅಂಬಲಿಗರು ತಾವೆಂದಿರಿ’
ನಂಬಿ ಬಂದವರ ಭವ ದಾಟಿಪ ಅಂಬಿಗರು ತಾವಾದಿರಿ,.
ದಿವ್ಯಪುರುಷರು ತಾವು ಭವ್ಯದೃಷ್ಟಿಯ ಹರೆಸಿ
ಪರುಷ ಹಸ್ತರಾಗಿ ಅನಂತರಿಗೆ
ಲಿಂಗದೀಕ್ಷೆಯನಿತ್ತಿರಿ.,
ಜಗವೆಲ್ಲ ಜಂಗಮ ನಾನೊಬ್ಬನೆ ಸೇವಕನೆಂದು,.
ಬಸವಣ್ಣನನ್ನೇ ನೆನೆ ನೆನದು,
ಬಸವಣ್ಣನನ್ನೇ ಸ್ಮರಿಸಿ ಸ್ಮರಿಸಿ,.
ಬಸವಣ್ಣನನ್ನೇ ಧ್ಯಾನಿಸಿ ಜ್ಞಾನಿಸಿ,.
ಬಸವಣ್ಣನನ್ನೇ ಅರಿದರಿದು ಅನುಸರಿಸಿ,.
ಬಸವಣ್ಣನಲ್ಲೇ ಕಳೆದು ಹೋಗಿ,.
ಬಸವಣ್ಣನಲ್ಲೇ ಹುದುಗಿ ಹೋಗಿ ,.
ಬಸವಣ್ಣನಲ್ಲೇ ಮುಳುಗಿ ಹೋಗಿ,.
ಬಸವಣ್ಣ ಬಸವಣ್ಣ ಬಸವಣ್ಣನೆಂದು’
ಬಸವಣ್ಣನೊಳಗೆ ಬೆರೆತು ಬಯಲಾಗಿ
ಅಪ್ರಮಾಣ ಚಿನ್ಮಯ ಲಿಂಗದ ಸಾಕ್ಷಿಗೂ
ಈ ಜಗಕೆ ಮತ್ತೊಬ್ಬ ಬಸವಣ್ಣರೆ ನೀವಾದಿರಿ,.
✍🏻ಲೋಕೇಶ್ ಎನ್ ಮಾನ್ವಿ.