ಸಮಾಜ ಚಿಂತಕ ಬಸವರಾಜ ಪಾಟೀಲ್ ಸೇಡಂ 

ಸಮಾಜ ಚಿಂತಕ ಬಸವರಾಜ ಪಾಟೀಲ್ ಸೇಡಂ 

 

(ಜನನ 10 ಫೆಬ್ರವರಿ 1944)

ಭಾರತದ ರಾಜಕಾರಣಿ, ಶಿಕ್ಷಣತಜ್ಞ ಮಾಜಿ ಸಂಸದರು. ಕರ್ನಾಟಕದಿಂದ ರಾಜ್ಯಸಭೆಯ ಸದಸ್ಯರಾಗಿದ್ದವರು. ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿಯಾಗಿ, ಮತ್ತು ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
ಗುಲ್ಬರ್ಗಾದಿಂದ 12 ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.

೧೦ ಫೆಬ್ರವರಿ ೧೯೪೪ 
ತರನಳ್ಳಿ ಜನನ, ಗುಲ್ಬರ್ಗಾ ಜಿಲ್ಲೆ.
ಸಂಗಾತಿ ಬಸವಲಿಂಗಮ್ಮ.
ವಾಸಸ್ಥಾನ ಸೇಡಂ, ಗುಲ್ಬರ್ಗಾ ಉದ್ಯೋಗ ಕೃಷಿಕ ಮತ್ತು ಸಮಾಜ ಕಾರ್ಯಕರ್ತರು.
ಗುಲ್ಬರ್ಗಾ ಜಿಲ್ಲೆಯ ಟರ್ನಳ್ಳಿ ಯಲ್ಲಿ 10 ಫೆಬ್ರವರಿ 1944 ರಂದು ಶ್ರೀಮತಿ ಶಂಕ್ರಮ್ಮ ಮತ್ತು ಶ್ರೀ ಗಣಪಥ ರಾವ್ ಅವರ ಉದರದಲ್ಲಿ ಬಸವರಾಜ ಪಾಟೀಲ ಸೇಡಂ ಜನಿಸಿದರು.
ಬಿಎಸ್ ಸಿ
ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಸರ್ಕಾರಿ ಪದವಿ ಕಾಲೇಜಿನ ಗುಲ್ಬರ್ಗಾದಿಂದ ಪೂರ್ಣಗೊಳಿಸಿದರು. ಬಸವಲಿಂಗಮ್ಮರನ್ನು ವಿವಾಹವಾದರು.
* 1990-96 ರಲ್ಲಿ ಕರ್ನಾಟಕ ಶಾಸಕಾಂಗ ಪರಿಷತ್ತಿನ ಸದಸ್ಯರಾಗಿದ್ದರು.

* 1992 ಸದಸ್ಯ, ಪಬ್ಲಿಕ್ ಅಕೌಂಟ್ಸ್ ಕಮಿಟಿ, ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್ .

*1998-1999 ಸದಸ್ಯ, ಹನ್ನೆರಡನೆಯ ಲೋಕಸಭಾ ಸದಸ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ ಮತ್ತು ಮೌಲ್ಯ ಆಧಾರಿತ ಶಿಕ್ಷಣ ಸದಸ್ಯರ ಉಪ ಸಮಿತಿ, ಮಹಿಳಾ ಸಬಲೀಕರಣದ ಜಂಟಿ ಸಮಿತಿ, ನಗರ ವ್ಯವಹಾರ ಮತ್ತು ಉದ್ಯೋಗ ಸದಸ್ಯರ ಸಚಿವಾಲಯ.

* 2012 ರ ಏಪ್ರಿಲ್ ನಿಂದ ರಾಜ್ಯಸಭೆಗೆ ಆಯ್ಕೆಯಾದರು.
ಸದಸ್ಯರು, ಇಂಡಸ್ಟ್ರಿ ಸದಸ್ಯರ ಸಮಿತಿ, ಸೆಂಟ್ರಲ್ ಸಿಲ್ಕ್ ಬೋರ್ಡ್.
*ಗುಲ್ಬರ್ಗಾ ವಿಶ್ವವಿದ್ಯಾಲಯ 2011ರಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿದೆ.

* ಸ್ಥಳೀಯ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಲಿ: ಡಾ. ಸೇಡಂ.

* “ಕಲ್ಯಾಣ ಕರ್ನಾಟಕ’ ವಿಕಾಸ ಜಾತ್ರೆ ೨೦೧೭

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘದ ಅಧ್ಯಕ್ಷರು

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ತಂದಿದೆ. ಸಂಘದ ಪ್ರಥಮ ಅಧ್ಯಕ್ಷರನ್ನಾಗಿ ರಾಜ್ಯಸಭೆ ಮಾಜಿ ಸದಸ್ಯ, ಬಿಜೆಪಿಯ ಹಿರಿಯ ಮುಖಂಡ ಬಸವರಾಜ ಪಾಟೀಲ್ ಸೇಡಂ ಅವರನ್ನು ನೇಮಕ ಮಾಡಿದೆ. ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಈಗಾಗಲೇ ಅಸ್ತಿತ್ವತದಲ್ಲಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಿ ಸಂಘ ರಚನೆ ಮಾಡಲಾಗಿದ್ದು, ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾನವ ಸಂಪನ್ಮೂಲ ಅಭವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಸಹಕಾರ ಸಂಘಗಳ ಕಾಯ್ದೆ ಅಡಿ ಸಂಘದ ನೋಂದಣಿ ಮಾಡಲಾಗಿದೆ.

ಸಾವಯವ ಕೃಷಿಗೆ ಉತ್ತೇಜನ, ಆರೋಗ್ಯ ವೃದ್ಧಿ, ಶಿಕ್ಷಣ ಸುಧಾರಣೆ, ಮಹಿಳಾ ಸಬಲೀಕರಣ, ದೇಸೀ ಗೋತಳಿ ಅಭಿವೃದ್ಧಿ, ಸಾಂಸ್ಕೃತಿಕ ಸಿರಿವಂತಿಕೆ ಕಾಪಾಡುವುದು ಸೇರಿದಂತೆ ವಿವಿಧ ಉದ್ದೇಶಗಳನ್ನು ಈ ಸಂಘ ಹೊಂದಿದೆ. ಈಗಾಗಲೇ ವಿಕಾಸ ಅಕಾಡೆಮಿ ಮೂಲಕ ಮಾನನ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಯಲ್ಲಿ ಸೇಡಂ ತೊಡಗಿಕೊಂಡಿದ್ದರು. ಅದೇ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರಾಗಿ ಅವರ ನೇಮಕ ಮಾಡಲಾಗಿದೆ.

ಕಲಬುರ್ಗಿ ಸಹಕಾರಿ ಸಂಘಗಳ ನಿಬಂಧಕರ ಕಛೇರಿಯಲ್ಲಿ ನೂತನ ಸಂಘದ ನೋಂದಣಿ ಮಾಡಲಾಗಿದೆ. ಈ ಸಂಘವೂ ಬೇರೆ ಸಂಘದ ರೀತಿಯಲ್ಲಿ ಒಂದು. ಆದರೆ ಇದಕ್ಕೆ ರಾಜ್ಯ ಸರ್ಕಾರವೇ ಅಧ್ಯಕ್ಷರನ್ನು ನೇಮಕ ಮಾಡಿ, ಅದರ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಬಸವರಾಜ ಪಾಟೀಲ್ ಸೇಡಂ ಅವರು ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಸಂಘ ಪರಿವಾರದ ಮುಖಂಡರಾಗಿ ಸೇವೆ ಸಲ್ಲಿಸಿದವರು.ಬಿಜೆಪಿ ಸಂಘಟಿಸುವ ಜೊತೆಗೆ, ಕಲಬುರ್ಗಿ ಲೋಕಸಭೆಯಿಂದ ಒಮ್ಮೆ ಆಯ್ಕೆಯಾಗಿದ್ದರು. ಒಮ್ಮೆ ರಾಜ್ಯಸಭಾ ಸದಸ್ಯರೂ ಆಗಿದ್ದರು.

ವೀರೇಶ ಸೌದ್ರಿ, ಮಸ್ಕಿ

Don`t copy text!