ಕನಸಿನ ಕನ್ಯೆ
ಹಸಿರು ಸೀರೆಯನ್ನುಟ್ಟ
ಬಂಗಾರದ ಬಣ್ಣದವಳು
ನೂಸುಲಿಗೆ ವಿಭೂತಿ
ಸಿಂಧೂರ ಧರಿಸಿದವಳು
ಬದುಕಿನ ಸಾರ ನಿಸ್ಸಾರ ಅರಿತವಳು
ಸಾಂಗತ್ಯ ರಸಕವಳ ಹರಿಸಿದವಳು
ವಚನ ನಿರ್ವಚನ ಅರುಹುಳು
ಭವ ಬಂಧನವ ಬಿಡಿಸುವವಳು
ದೇಹದೂಟವ ಬಡಿಸಿ ಇಂದ್ರಿಯ ಸುಖವ ಕೊಟ್ಟವಳು
ಜ್ಞಾನದ ಹಸಿವಿಗೆ ಶರಣರ ದಾರಿ ತೋರಿದವಳು
ಗೆಳತಿಯಾಗಿ ಬಂದವಳು
ಶಾಶ್ವತವಾಗಿ ನಿಂತವಳು
ಜೀವನ್ ಮುಕ್ತಿಗೆ ಆಸರೆ ಆದವಳು
ನನ್ನ ಕನಸಿನ ರಾಣಿ ಅವಳು
–ಸೌವೀ, ಮಸ್ಕಿ
ಕನಸಿನ ರಾಣಿ ಪ್ರೇಮವನ್ನು ನೀಡುವುದರ ಜೊತೆಗೆ, ಭಕ್ತಿ ಪಥದ ಜೊತೇಗೆ, ಶರಣರ ದಾರಿಯಲ್ಲಿ ನಡೆಸಿ… ಮುಕ್ತಿಗೆ ಕರೆದೊಯ್ಯಲು ಬದುಕಿಗೆ ಜೊತೆಯಾದದ್ದು ವಿಶೇಷವಾಗಿದೆ. ಸರ್…. ಒಬ್ಬ ಪುರುಷನ ಕನಸನ್ನು ನನಸಾಗಿಸುವ ಇಂತಹ ರಾಣಿ ದೊರೆತರೆ…. ಅವನ ಒಲವಿಗೂ ಕೂಡ ಸಾರ್ಥಕತೆ ಸಿಕ್ಕಂತೆ…..