🌳 ಕಾಯುವೆ ಮಳೆಗಾಗಿ 🌳
( ಮರದ ಸ್ವಗತ )
ಬರಡಾಯ್ತು ಈ ನೆಲವು
ಮಳೆರಾಯ ಬಾರದೆ;
ಕಂಗೆಟ್ಟ ರೈತರಿಗೆ
ದಿಕ್ಕು ತೋರುವರಾರು…
ಭೂತಾಯಿ ನೀರಡಿಸಿ
ಬಾಯ್ಬಿಡುತಲಿಹಳು
ಆರಿಹೋಗುತಲಿಹುದು
ಗಂಟಲಿನ ಪಸೆಯು…
ಮೇಯುತಲಿ ಒಣಹುಲ್ಲು
ಸೊರಗಿಹಳು ಗೋಮಾತೆ
ನಡೆದಿಹಳು ಕಳವಳಿಸಿ
ಹಸಿರು ಚಿಗುರನು ಬಯಸಿ..
ಹಸಿದ ಹೊಟ್ಟೆಯಲಿಂದು
ಮಗಳ ಜೊತೆಯಲಿ ಅವ್ವ
ಹಸಿವ ನೀಗಿಸಲೆಂದು
ಹೊರಟಿಹಳು ಕೆಲಸ ಅರಸಿ…
ನನ್ನೆಲೆ ಚಿಗುರಗಳು
ತರಗೆಲೆಗಳಾದರೂ
ಕಾಯುವೆ ಮಳೆಗಾಗಿ
ದೃಢಬೇರುಗಳನಿಳಿಸಿ…!!
–ಹಮೀದಾಬೇಗಂ ದೇಸಾಯಿ. ಸಂಕೇಶ್ವರ. 🙏