3.33 ಸಾವಿರ ರೂ ಉಳಿತಾಯ ಬಜೆಟ್ ಮಂಡಿಸಿದ ವಿಜಯಲಕ್ಷ್ಮೀ ಪಾಟೀಲ

3.33 ಸಾವಿರ ರೂ ಉಳಿತಾಯ ಬಜೆಟ್ ಮಂಡಿಸಿದ ವಿಜಯಲಕ್ಷ್ಮೀ ಪಾಟೀಲ

e-ಸುದ್ದಿ, ಮಸ್ಕಿ

ಪ್ರಸಕ್ತ 2021-22 ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ಪುರಸಭೆಗೆ 3 ಲಕ್ಷ 33 ಸಾವಿರ ರೂ ಉಳಿತಾಯ ಬಜೆಟ್‍ನ್ನು ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಮಂಡಿಸಿ ಸರ್ವ ಸದಸ್ಯರ ಬಗ್ಗೆ ಒಪ್ಪಿಗೆ ಪಡೆದುಕೊಂಡರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಸೋಮವಾರ ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದರು. ಸಾರ್ವಜನಿಕರಿಂದ ಕರ, ಸರ್ಕಾರದ ವಿವಿಧ ರೀತಿಯ ಸಾಹಾಯಧನ ಅಸಾಧಾರಣಾದಿಂದ ಒಟ್ಟು 29 ಕೋಟಿ 10 ಲಕ್ಷ ರೂ. ಹೆಚ್ಚು ಆದಾಯ ಬರುವ ನಿರೀಕ್ಷೆ ಇದ್ದು 29 ಕೋಟಿ 7 ಲಕ್ಷ ರೂ. ವಿವಿಧ ಖರ್ಚುಗಳನ್ನು ತೆಗೆದು 3.33 ಲಕ್ಷ ರೂ ಉಳಿತಾಯವಾಗಲಿದೆ ಎಂದು ವಿಜಯಲಕ್ಷ್ಮೀ ಪಾಟೀಲ ತಿಳಿಸಿದರು.
2015-16 ರಿಂದ 1019-20 ರವರೆಗೆ ವಿವಿಧ ಅನುದಾನದಲ್ಲಿ ಕಾಮಗಾರಿ ಅನುಷ್ಠಾನಗೊಂಡು ಉಳಿಕೆಯದ 87 ಲಕ್ಷ 90 ಸಾವಿರ ರೂ.ಗಳಲ್ಲಿ ವಿವಿಧ ವಾರ್ಡಗಳ ಅಭಿವೃದ್ದಿಗಾಗಿ ಹಣ ಹಂಚಿಕೆ ಮಾಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಅಲ್ಲದೆ ಕುಡಿಯುವ ನೀರಿನ ಟ್ಯಾಂಕರ್ ಸೋರಿಕೆಗೆ ಗ್ರೂಟಿಂಗ್ ಮಾಡಿಸಲು, ಎರಡು ಹೊಸ ಟ್ಯಾಂಕರ್‍ಗಳನ್ನು ಖರೀಧಿಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ವಾರದ ಸಂತೆ ಹಾಗು ದಿನದ ಸಂತೆಯ ವಿಷಯವಾಗಿ ಸಭೆಗೆ ಚರ್ಚಿಸಲಾಗಿ ಕರೊನಾ ಹಿನ್ನಲೆಯಲ್ಲಿ ಕಳೆದ ಬಾರಿ ಟೆಂಡರ್ ಪಡೆದವರು ನಷ್ಟ ಅನುಭವಿಸಿದ್ದು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಶೇ.5 ರಷ್ಟು ಹೆಚ್ಚಳ ಮಾಡಿ ವಾರದ ಸಂತೆ ನಡೆಸುವವರಿಗೆ ಕೊಡಲು ಒಪ್ಪಿಗೆ ಸೂಚಿಸಿದರು. ದಿನದ ಸಂತೆ ನಡೆಸಲು ಟೆಂಡರ್ ಕರೆಯುವಂತೆ ಸೂಚಿಸಿದರು.
ಹಿರಿಯ ಸದಸ್ಯರಾದ ಎಂ.ಅಮರೇಶ ಮತ್ತು ನೀಲಕಂಠಪ್ಪ ಮಾತನಾಡಿ ಈಗಾಗಲೇ ಜನತಾ ಮನೆಗಳು ಅಪೂರ್ಣವಾಗಿದ್ದು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಫಲಾನುಭವಿಗಳು ಹಂತ ಹಂತವಾಗಿ ಮನೆಯ ಕೆಲಸದ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುವದು ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹನುಮಂತಮ್ಮ ಹೇಳಿದರು.
ಪುರಸಭೆ ಸದಸ್ಯ ಆಂಜನೇಯ ಮಾತನಾಡಿ ನನ್ನ ವಾರ್ಡನಲ್ಲಿ ಸಾರ್ವಜನಿಕ ಶೌಚಾಲಯ ಕೆಡವಿ ಅಲ್ಲಿ ಅಂಗನವಾಡಿ ಶಾಲೆ ಕಟ್ಟಲು ಒತ್ತಾಯಿಸಿದರು. ಸಾರ್ವಜನಿಕ ಶೌಚಾಲಯ ಕೆಡವುದು ಸೂಕ್ತವಲ್ಲ. ಆದರೆ ಸದಸ್ಯರು ಅಲ್ಲಿನ ನಿವಾಸಿಗಳ ಮನ ಒಲಿಸಿದರೆ ಕಟ್ಟುವುದಾಗಿ ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.
ಒಟ್ಟು 22 ಸದಸ್ಯರಲ್ಲಿ ಕೇವಲ 12 ಜನ ಪುರಸಭೆ ಸದಸ್ಯರು ಸಭೆ ಹಾಜರಾಗಿ ಉಳಿದವರು ಗೈರು ಹಾಗಿದ್ದು ಎದ್ದು ಕಾಣುತಿತ್ತು.
ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಉಪಾಧ್ಯಕ್ಷೆ ಕವಿತಾ ಮಾಟೂರು, ಸದಸ್ಯರಾದ ಪುಷ್ಪಾ ಸೊಪ್ಪಿಮಠ, ಪೂನಾಂ ಪಾಟೀಲ, ರೇಣುಕಾ ಉಪ್ಪಾರ, ಎಂ.ಅಮರೇಶ, ನೀಲಕಂಠಪ್ಪ ಬಜಂತ್ರಿ, ಸುರೇಶ ಹರಸುರು, ಮೌನೇಶ ಮುರಾರಿ, ಮಹಾಂತೇಶ ಹೂವಿನಬಾವಿ, ಆಂಜನೇಯ, ರಂಗಪ್ಪ ಅರಕೇರಿ, ಪುರಸಭೆ ಮ್ಯಾನೇಜರ್ ಸತ್ಯನಾರಯಣ, ಪ್ರಥಮದರ್ಜೆ ಸಹಾಯಕರಾದ ಶಿವಣ್ಣ, ಜಗದೀಶ, ಮೀನಾಕ್ಷಿ, ಅಂಬಿಕಾ ಪಾಟೀಲ, ರಾಘವೇಂದ್ರ ಮುತಾಲಿಕ ಭಾಗವಹಿಸಿದ್ದರು.

Don`t copy text!