ಬಾಡುವ ನೆಲಕ್ಕೆ ಬೇಕಿದೆ ಜೀವ ಜಲ: ಡಾ.ಸಿ.ಬಿ.ಚಿಲ್ಕರಾಗಿ

ಮೊದಲ ಗೋಷ್ಟಿ
ಬಾಡುವ ನೆಲಕ್ಕೆ ಬೇಕಿದೆ ಜೀವ ಜಲ: ಡಾ.ಸಿ.ಬಿ.ಚಿಲ್ಕರಾಗಿ
e-ಸುದ್ದಿ, ಮಸ್ಕಿ
(ಘನಮಠೇಶ್ವರ ವೇದಿಕೆ)
ಇಲ್ಲಿನ ಭೂಮಿ ಬೆಳದಿಂಗಳಿಗೆ ಬಾಡುವ ನೆಲ. ಮಳೆ ಬಂದರೆ ಬೆಳೆ ಇಲ್ಲದಿದ್ದರೆ ಗುಳೆ ಎನ್ನುವ ಪರಿಸ್ಥಿತಿ. ಇಂತಹ ಪ್ರದೇಶಕ್ಕೆ ನೀರಾವರಿ ಯೋಜನೆಗಳೇ ಪರಿಹಾರ ಎಂದು ಸಿಂಧನೂರಿನ ಸರ್ಕಾರಿ ಕಾಲೇಜಿನ ಪ್ರಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಹೇಳಿದರು.
ಮಸ್ಕಿ ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ‘ಮಸ್ಕಿ ನೂತನ ತಾಲೂಕು ಹೊಸ ದೃಷ್ಟಿ’ ವಿಷಯ ಕುರಿತು ಮಾತನಾಡಿದರು. ಸಿಂಧನೂರು, ಲಿಂಗಸುಗೂರು, ಮಾನ್ವಿ ಮೂರು ತಾಲೂಕಗಳಲ್ಲಿ ವಿಲೀನವಾಗಿದ್ದ ಮಸ್ಕಿ ಈಗ ಹೊಸ ತಾಲೂಕು ಆಗಿ ಉದಯವಾಗಿದೆ. ಈ ಹಿಂದೆ ಇದ್ದ ಮೇಲ್ ವರ್ಗ ಹಾಗೂ ಕೆಳವರ್ಗದ ಸಂಘರ್ಷ ಈಗಿಲ್ಲ. ನೀರಿಗಾಗಿ ರೈತರ ರೈತರ ಮಧ್ಯ ಇದ್ದ ಜಗಳಗಳು ಕಾಣೆಯಾಗಿವೆ. ಭವಿಷ್ಯ ಅಶೋಕನ ಶಾಂತಿ ಸಂದೇಶ ಈ ನೆಲದಲ್ಲಿ ಹಾಸು ಹೊಕ್ಕಾಗಿದೆ ಎಂದರು.
ಇಲ್ಲಿನ ಭತ್ತ ನಮಗೆ ಗೊತ್ತಿಲ್ಲದೇ ರೋಗ ಹರಡುತ್ತಿದೆ ಎನ್ನುವ ಸಂಗತಿಯನ್ನು ಎಲ್ಲರೂ ಮರೆಯುತ್ತಿದ್ದಾರೆ. ಸಾವಯವ ಪದ್ದತಿಯ ಕೃಷಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ.
ಬಂಗಾರದಿಂದ ಬದುಕು ಬಂಗಾರವಾಗಬಹುದು ಎಂಬುದಕ್ಕೆ ಈ ಭಾಗದಲ್ಲಿ ಸಾಕಷ್ಟು ಚಿನ್ನದ ನಿಕ್ಷೇಪ ಇದೆ. ಡಾ.ಪ್ರಭಾಕರ ಸಂಗೂರುಮಠ ಅವರ ಮಾರ್ಗದರ್ಶನದಲ್ಲಿ ಗಣಿಗಾರಿಕೆ ಆರಂಭಿಸಲು ಒತ್ತಾಯಿಸಿದರು.

ಸಾಹಿತಿ ಡಾ.ಅಮರೇಶ ಯತಗಲ್ ‘ಮಸ್ಕಿ-ಐತಿಹಾಸಿಕ ಹಿನ್ನೆಲೆ’ ವಿಷಯ ಕುರಿತು ಮಾತನಾಡಿ, ಮಸ್ಕಿ ನೆಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇವು ಕೇವಲ ಊಹಾ-ಪೋಹಗಳು ಮಾತ್ರವಲ್ಲದೇ ಲಿಖಿತವಾಗಿಯೂ ಇವುಗಳಿಗೆ ಸಾಕ್ಷಿ ದೊರೆತಿವೆ. ಸಾಮ್ರಾಟ ಅಶೋಕನ ಶಾಸಕನದಿಂದ ಹಿಡಿದು ದೇವಸ್ಥಾನ ನಿರ್ಮಾಣ, ಜಿರ್ಣೋದ್ಧಾರದವರೆಗೂ ರಾಷ್ಟ್ರಕೂಟರು, ಚಾಲುಕ್ಯರು, ವಿಜಯ ನಗರ ಅರಸರು ಇಲ್ಲಿ ಆಳಿದ ಇತಿಹಾಸವಿದೆ. ಇಲ್ಲಿನ ಶಾಸನವನ್ನು ಎನ್‍ಸಿಆರ್‍ಟಿಸಿಯೂ ಲಾಂಛನವನ್ನಾಗಿಸಿಕೊಂಡಿರುವುದು ಈ ಭಾಗದ ಹೆಮ್ಮೆ. ಸರ್ವಧರ್ಮ ಸಮನ್ವಯಕ್ಕೂ ಇಲ್ಲಿನ ನೆಲ ಹೊಸ ಭಾಷೆ ಬರೆದಿದೆ. ಚಿನ್ನದ ನಿಕ್ಷೆಪಗಳನ್ನೂ ಇಲ್ಲಿನ ನೆಲ ಒಳಗೊಂಡಿದ್ದು ಹೆಚ್ಚಿನ ಅಧ್ಯಯನ, ಸಂಶೋಧನೆಗಳು ನಡೆದರೆ ಮಸ್ಕಿಯ ಇತಿಹಾಸಕ್ಕೆ ಮತ್ತಷ್ಟು ಮೆರುಗು ಬರಲಿದೆ. ಇಲ್ಲಿನ ಐತಿಹಾಸಿಕ ಹಿನ್ನೆಲೆಗಳನ್ನು ಪಠ್ಯದಲ್ಲೂ ಮುದ್ರಣವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮುಖ್ಯಗುರು ಆದೆಪ್ಪ ಹೆಂಬಾ ‘ಸಂತೆ ಮತ್ತು ಜಾತ್ರೆಗಳು’ ಎನ್ನುವ ವಿಷಯ ಕುರಿತು ಮಾತನಾಡಿ ಸಂತೆಗಳು ಸರ್ವಧರ್ಮ ಸಮನ್ವಯದ ಕೇಂದ್ರಗಳಾಗಿದ್ದು ವ್ಯಾಪಾರ ಹಾಗೂ ಬದುಕಿನ ಆಯಾಮಗಳಣ್ನು ಸಂತೆ ಮತ್ತು ಜಾತ್ರೆಗಳಲ್ಲಿ ಕಾಣಬಹುದಿತ್ತು ಎಂದು ಎಳೆ ಎಳೆಯಾಗಿ ಬಿಚ್ಚಿದರು.
ಹಿರಿಯ ಸಾಹಿತಿ ಗಿರಿರಾಜ ಹೊಸಮನಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತು ಮಾತನಾಡಿದರು.
——————————-
ಎರಡನೇ ಗೋಷ್ಟಿ
ಮಾಧ್ದಮ ಉಧ್ಯಮವವಾಗಿದೆ-ಡಿ.ಎಚ್.ಕಂಬಳಿ
ಮಾಧ್ಯಮ ಇಂದು ಸೇವಾ ಕ್ಷೇತ್ರದಿಂದ ಹೊರಟು ಹೋಗಿ ಉಧ್ಯಮ ಸ್ವರೂಪ ಪಡೆದುಕೊಂಡಿದೆ ಎಂದು ಪತ್ರಕರ್ತ ಡಿ.ಎಚ್.ಕಂಬಳಿ ಹೇಳಿದರು.
ಪತ್ರಿಕೆ ಮತ್ತು ಟಿ.ವಿ ಮಾದ್ಯಮಗಳು ವ್ಯಾಪರದ ಮೇಲೆ ಅವಲಂಭಿತವಾಗಿದ್ದು ಜನಪರ ಹೋರಾಟಗಳಿಗೆ ಸ್ಪಂದಿಸುವ ಗುಣ ಕಳೆದುಕೊಂಡಿವೆ. ನೀರಿಗಾಗಿ 80 ದಿನಗಳ ವರಗೆ ಹೋರಾಟ ಮಾಡುವುದು ರಾಜ್ಯಮಟ್ಟದಲ್ಲಿ
ಸುದ್ದಿಯಾಗುವದಿಲ್ಲ. ಆದರೆ ಐಶ್ರ್ವಯ ರೈ ಗರ್ಭಿಣಿಯಾದರೆ, ಡಿಲೇವರಿ ಆದರೆ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಸುದ್ದಿಯಾಗುತ್ತಿರುವದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.
ಸಾಹಿತಿ ಕೆ.ಶಶಿಕಾಂತ ಸಾಹಿತ್ಯ ಮತ್ತು ಸಂಸ್ಖøತಿ ಕುರಿತು ಮಾತನಾಡಿ ಸಾಹಿತ್ಯದ ಪರಂಪರೆಗೆ ಮಸ್ಕಿ ಪಟ್ಟಣಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಅದರ ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದರು.
ಸಾವಿತ್ರಿ ಮುಜಾಂದಾರ ಮಾತನಾಡಿ ಮಹಿಳೆಯರ ಸಾಧನೆ ಸಾವಲುಗಳನ್ನು ಕುರಿತು ಮಾತನಾಡಿ ಮಹಿಳೆಯರು ವೇತನ ಸಹಿತ ಮತ್ತು ವೇತನ ರಹಿತವಾಗಿ ದುಡಿಯುವ ಶಕ್ತಿ ಹೋಮದಿದ್ದಾರೆ. ಅವರಿಗಿರುವ ಶಕ್ತಿಯನ್ನು ಪುರುಷರು ಗೌರವಿಸುವ ಮೂಲಕ ದುಡಿಯುವ ಮಹಿಳಪರವಾಗಿ ನಿಲ್ಲುವಂತೆ ಕೊರಿದರು. ಮಸ್ಕಿ ಪಟ್ಟಣದಲ್ಲಿ ಆಗಿ ಹೋದ ಮಹಿಳೆಯರು ಕುರಿತು ವಿವರವಾಗಿ ಚರ್ಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರನಿರ್ದೆಶಕ ರಮೇಶ ಸುರ್ವೆ ಮಾತನಾಡಿ ಮಸ್ಕಿಯ ನೆಲ ಭಾವೈಕ್ಯತೆಯ ಬಿಡಾಗಿದ್ದು ನನ್ನ ಕಲಿಕೆ ಕನಸುಗಳು ಈ ನೆಲದಲ್ಲಿ ಮೊಳಕೆಯೊಡೆದು ಬೆಂಗಳೂರಿನಲ್ಲಿ ಸಾಕಾರಗೊಂಡಿವೆ ಎಂದರು.
——————————-
ಕವಿಗಳಲ್ಲಿ ರೈತ ಪರ ಧ್ವನಿ ಮಾರ್ಧನಿಸಿದರೆ ನಿಸರ್ಗ, ಪರಿಸರ ಉಳಿವು ಅಗತ್ಯ ಎಂದರು.
ಕವಿ ಗೋಷ್ಟಿಯಲ್ಲಿ ಶ್ರೀಶೈಲ ಜಾಲಿಹಾಳ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದರೆ, ವಿವೇಕಾನಂದ ಎಲಿಗಾರ ಬರಗಾಲದಲ್ಲಿ ರೈತನ ಗೋಳು ಕುರಿತು ಕವಿತೆ ವಾಚಿಸಿದಾಗ ಸಭಿಕರು ಸ್ಪಂದಿಸಿ ಕಣ್ಣಾಲಿಗಳಲ್ಲಿ ಕಣ್ಣೀರು ಜಿನುಗವಂತೆ ಮಾಡಿದರು.
ಅಮರೇಶ ಪಾಟೀಲ, ಕಾಮಾಕ್ಷಿ ತೋಟದ, ಶ್ರೀದೇವಿ ಕರ್ಜಗಿ, ರವಿಚಂದ್ರ ಮಲ್ಕಾಪೂರು ಕವನಗಳು ಜನ ಮೆಚ್ಚುಗೆ ಪಡೆದುಕೊಂಡುವು.
ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಗುಂಡುರಾವ್ ದೇಸಾಯಿ ಮಾತನಾಡಿ ಕವಿಗಳು ನಿರೀಕ್ಷೆಗೆ ಮೀರಿ ಕವಿತೆ ವಾಚನ ಮಾಡಿ ಆಳುವ ಪ್ರಭುತ್ವಕ್ಕೆ ಕವಿತೆಗಳ ಮೂಲಕ ಬಿಸಿ ಮುಟ್ಟಿಸಿದ್ದಾರೆ. ನಮ್ಮ ನಾಯಕರು ಜನದನಿ ಅರ್ಥ ಮಾಡಿಕೊಳ್ಳಲು ಕವಿಗಳ ಕವಿತೆಗಳಿಗೆ ಕಿವಿಯಾಗುವಂತೆ ಮನವಿ ಮಾಡಿದರು.
————————————
ಸಮಾರೋಪ
ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರು ಕಂಠತ್ಸವಾಗಿ ಗದುಗಿನ ಭಾರತ, ಜೈಮಿನಿ ಭಾರತ, ಪಂಪ ಭಾರತ, ವಚನಗಳು, ದಾಸರ ಹಾಡುಗಳು, ತತ್ವಪದಗಳು ಜನರ ಬಾಯಿಂದ ಬಾಯಿಗೆ ಹರಿದಾಡಿ ಸಾಹಿತ್ಯ ಉಳಿದುಕೊಂಡಿದೆ ಎಂದು ಸಾಹಿತಿ 8ನೇ ರಾಯಚೂರು ಜಿಲ್ಲಾ ಸಮ್ಮೇಳನದ ಅಧ್ಯಕ್ಷ ಡಾ.ಸ್ವಾಮಿರಾವ್ ಕುಲಕರ್ಣಿ ಹೇಳಿದರು.
ಅಕ್ಷರಸ್ಥರಿಂದ ಸಮಾಜ ಕೆಟ್ಟಿದೆ. ಅನಕ್ಷರಸ್ಥರಿಂದ ಸಮಾಜ ಉಳಿದಿದೆ. ಜನಪರವಾಗಿ ಆಳುವ ನಾಯಕರು ಸ್ಪಂದಿಸಬೇಕು. ಕವಿಗಳು ಮತ್ತು ಸಾಹಿತಿಗಳು ಸಮಕಾಲಿನ ಘಟನೆಗಳಿಗೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ, ಬಳಗಾನೂರಿನ ಸಿದ್ಧಬಸವ ಸ್ವಾಮೀಜಿ, ಡಾ.ಕೆ.ಶಿವರಾಜ ಮಾತನಾಡಿದರು. ಸಮ್ಮೇಳನಅಧ್ಯಕ್ಷ ಶರಭಯ್ಯಸ್ವಾಮಿ, ಡಾ.ಶಿವಶರಣಪ್ಪ ಇತ್ಲಿ ಹಾಗೂ ಇತರರುಭಾಗವಹಿಸಿದ್ದರು. ಸಂಜೆ ಶಿಕ್ಷಕರು ಕೋಲಾಟ ಆಡುವ ಮೂಲಕ ಜಾನಪದ ಸೊಗುಡು ಪ್ರದರ್ಶಿಸಿದರು.

 

Don`t copy text!