ಮಸ್ಕಿ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಿಂದ ಸುಮಾರು 500 ಕೋಟಿ ದುರಪಯೋಗ-ರಾಘವೇಂದ್ರ ನಾಯಕ ಆರೋಪ

e-ಸುದ್ದಿ, ಮಸ್ಕಿ
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಿಂದ ಸುಮಾರು 500 ರಿಂದ 700 ಕೋಟಿ ಅನುಧಾನವನ್ನು ದುರಪಯೋಗ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ರಾಘವೇಂದ್ರ ನಾಯಕ ಆರೋಪಿಸಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಮಸ್ಕಿ ಕ್ಷೇತ್ರದಲ್ಲಿ ಕೆಬಿಜೆಎನ್‍ಎಲ್ ಇಲಾಖೆಯಲ್ಲಿನ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಕಾಮಗಾರಿಗಳನ್ನು ಟೆಂಡರ್ ನೀಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿಗಳ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನ ಹಲವ ಕಡೆ ಒಂದೇ ಕಾಮಗಾರಿಗೆ ಎರಡು ಎರಡು ಬಿಲ್ಲ ಎತ್ತಿರುವದು ಕಂಡುಬಂದಿದೆ. ಕಾರ್ಯನಿರ್ವಾಹಣ ಸಾಮಾಥ್ರ್ಯ ಇಲ್ಲದ ಗುತ್ತಿಗೆ ದಾರರಿಗೆ ಗುತ್ತಿಗೆ ನೀಡುವ ಮೂಲಕ ಅದಿಕಾರಿಗಳು ಶಾಮೀಲಾಗಿದ್ದು ಕಳಪೆ ಕಾಮಾಗಾರಿ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದರು.
ಈ ಕುರಿತು ಸರ್ಕಾರ ಉನ್ನತ ಮಟ್ಟದ ಅದಿಕಾರಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಲಿ ಎಂದು ಒತ್ತಾಯಿಸಿದ ರಾಘವೇಂದ್ರ ಗುತ್ತೇದಾರ ಹಲವು ಗುತ್ತೆದಾರ ಹಾಗೂ ಅಧಿಕಾರಿಗಳ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕ್ರೀಮಿನಲ್ ಕೇಸ್ ದಾಖಲಿಸಿರುವದಾಗಿ ತಿಳಿಸಿದರು.
ಸುದ್ದಿ ಗೋಷ್ಟಿಯಲ್ಲಿ ಕಾಂಗ್ರೆಸ್ ಎಸ್.ಟಿ.ಘಟಕದ ಅಧ್ಯಕ್ಷ ಬಸನಗೌಡ ಮಾರಲದಿನ್ನಿ, ಕಾಂಗ್ರೆಸ್ ಯುವ ಮುಖಂಡ ಕೃಷ್ಣ ಚಿಗರಿ, ಪಂಪನಗೌಡ ಗುಡದೂರು, ನಾಗನಗೌಡ ತೊರಣದಿನ್ನಿ ಇದ್ದರು.

Don`t copy text!