ನಾವು ಬೇಡುವವರು
ನಾವು ಬೇಡುವವರು
ಕಾಡುವವರು ಸುಲಿಯುವವರು
ಬೇಕು ನಮಗೆ ಮೀಸಲಾತಿ.
ಬೇಕು ನೌಕರಿ ಚಾಕರಿ
ನಾವು ಗುರುಗಳು
ಮರೆಯುವವರು ಕುಣಿಯುವವರು
ಬೇಕು ಪಲ್ಲಕ್ಕಿ ಸಾರೋಟಿ
ಕಿರೀಟ ಪೀಠ ಸಿಂಹಾಸನ
ಬೇಕು ನಮಗೆ ಗುರು ವಂದನೆ
ದಸರಾ ದರ್ಬಾರ ಅಬ್ಬರ
ಘೋಷಣೆಯ ಮೆರವಣಿಗೆ
ಗುಲಾಮಗಿರಿ ಒಡೆತನ
ಬೇಡ ನಮಗೆ ತತ್ವ ಸಿದ್ಧಾಂತ
ಬೇಡ ಬಸವ ಶರಣರು
ಬಿಸಿಲಿಗೆ ಕೊಡೆ ಹಿಡಿವ ನಾವು
ವೇಷ ಹಾಕುವ ಬಹುರೂಪಿಗಳು
ನಾವು ಬೇಡುವವರು ಕಾಡುವವರು
ಸುಲಿಯುವವರು ಕೊಲ್ಲುವವರು
ಬೇಕು ನಮಗೆ ಮೀಸಲಾತಿ.
ಬೇಕು ನೌಕರಿ ಚಾಕರಿ
*ಡಾ.ಶಶಿಕಾಂತ.ಪಟ್ಟಣ ಪುಣೆ*