ಬಾಳ ಗೆಳೆಯ

ಬಾಳ ಗೆಳೆಯ

ಕನಸಿನೊಳಗೆ ಕನವರಿಸುವ
ಅಚ್ಚರಿಯದ ಸಚ್ಚರಿತೆಯ
ಜಾತಿ ರಹಿತ ಜ್ಯೋತಿಯಂತೆ
ಹೂಗುಚ್ಚದಂತ ರೂಪವು ||

ಬಾಳ ಬಂಧನದಿ
ಸಿಹಿ ಒಲವ ಬುತ್ತಿಯಲಿ
ಬಯಲುಗೊಳಿಸಿಹುದು
ಭವ ಭಾರ ಇಳಿಸಿ ||

ಸಸಿ ಇದ್ದ ಮನವಾ
ಸೊಂಪಾಗಿ ಬೆಳೆಸಿ
ಹೂಹಣ್ಣು ಚಿಗುರಿಸಿದ
ಹೂ ಮನವು ನಿನದು ||

ಮನವನಾಳ್ದನು ನೀನು
ಮುಚ್ಚು ಮರೆ ಏನು
ಸ್ವಚ್ಚ ಮನದಲಿ ನಿನ್ನ
ಬಚ್ಚಿಡುವೆನು ||

ದೊರೆ ನೀನು ಮನಕೆ
ಧರೆಯಾಳ್ದನೆನೆಗೆ
ಹುಸಿಯಾಡದೆ ನಿನ್ನ
ವಶವಾಗುವೆ ||

ಅಳಿಯದಾ ಆಸೆ ಬಹಳಾದರೇನು
ಕಳವಳದಿ ನನ್ನಾ ಕೈಬಿಡುವೆಯೇನು
ಹಳಹಳಯು ಮನಕೆ ನೀನಿರದಿರೆ
ಬಳಿಸಾರಿ ಬಂದರೆ ಒಳಿತಲ್ಲವೆ ||

ಕಣ್ಣಂಚ ನಗುವಲೆ ಕರೆದಿರುವೆ ಮೆಲ್ಲನೆ
ಕುಡಿನೋಟದಲ್ಲೆ ಕೆಣಕಿರುವೆ
ಕಣ್ಸನ್ನೆಯಲ್ಲೆ ನಿನ್ನಾಸೆ ಅರುಹಿ
ಕಣ್ಣಾಟದಲ್ಲೆ ಕುಣಿಸಿರುವೆ ||

ಸವಿತಾ ಎಮ್, ಮಾಟುರು ಇಲಕಲ್ಲ

Don`t copy text!