ಅಪರಿಚಿತರು ಪರಿಚಿತರಾದರು
ಅಪರಿಚಿತರು ಪರಿಚಿತರಾದರು
ಪರಿಚಯಕ್ಕೆ ಕಾರಣ ಬೇಕಿಲ್ಲ
ಎದರು ಬದರು ಆಗಿಲ್ಲ
ಭಾವಚಿತ್ರಗಳು ಬದಲಾಗಿವೆಯಲ್ಲ
ನೊಡದೆ ಮಾತಾಡುವ ಅಕ್ಷರಗಳ ಮಂತ್ರ
ಭಾವನೆಗಳು ಬೆಸದಿವೆ ಆಧುನಿಕ ತಂತ್ರ
ರೀ, ಸರ್ ಶಬ್ದಗಳ ಜಾಗದಲಿ
ಲೇ , ಏ ಮಾತಿನ ಮೋಜು
ಎದರು ಬದರು ಆಗೇ ಇಲ್ಲ
ಅಪರಿಚಿತರು ಪರಿಚಿತರಾದರು
ಮಾತು ಮೀತಿಯ ದಾಡಿ
ಬೇಲಿ ಹಾಯುವ ಗಳಿಗೆ
ಮಾತು ಮೌನವಾಗಿ ದಾರಿ ಕಾಣದಾಗಿ
ಎಚ್ಚರದ ಕೂಗು ಕೊಗಿ
ಅಪರಿಚಿತರು ಪರಿಚಿತರಾದರು
ಗೆಳೆಯ ಗೆಳತಿಯರ ಕಳ್ಳು ಬಳ್ಳಿ
ದಾಟದಾಗದು ಭವ ಬಂಧನವ
ಹರಿಯುವ ನೀರಿಗೆ ದಾರಿ ಬೇರೆ
ಸೇರುವುದೊಂದೇ ಭೂಮಿಯೋಳು
ಅಪರಿಚಿತರು ಪರಿಚಿತರಾದರು
ಕೂಡಿದ್ದು ಕೂಟವಲ್ಲ
ಆಡಿದ್ದು ಆಟವಲ್ಲ
ಮಾತು ಮನಂಗಗಳಲಿ
ಭಾವ ಶುದ್ಧವಾಗಿ ಮಹಾಂತನಿಗರ್ಪಿತ
ಅಪರಿಚಿತರು ಪರಿಚಿತರಾದರುು
-ಸೌವೀ, ಮಸ್ಕಿ