ಲೇಖಕಿ Carson McCullers ಕುರಿತು Chinski ಬರೆದ ಹೃದಯವಿದ್ರಾವಕ ಪದ್ಯ . ನಿನ್ನೆ ಆಕೆ ಹುಟ್ಟಿದ ದಿನ.
ಸಮುದ್ರದ ನಡುವೆ
ಸಮುದ್ರದ ನಡುವೆ,
ವಿಶಾಲ ಹಡಗಿನ ಡೆಕ್ ಮೇಲೆ
ಚಾಚಿಕೊಂಡಿದ್ದ ಆರಾಮ್ ಖುರ್ಚಿಯ ಮೇಲೆ,
ಶಾಲ್ ನಲ್ಲಿ ಸುತ್ತಿಕೊಂಡಿದ್ದ
ಆಕೆ
ಹೆಣವಾಗಿ ಮಲಗಿದ್ದಳು.
ದೊಡ್ಡ ಲೇಖಕಿಯಂತೆ ಆಕೆ,
ಬಿಡಲಾಗದ ಕುಡಿತದ ಚಟ,
ಬಹುಶಃ
ಕುಡಿದು ಕುಡಿದು ಸತ್ತಿರಬೇಕು.
ಆಕೆ
ಬಿಟ್ಟು ಹೋದದ್ದಾದರೂ ಏನು?
ತಲ್ಲಣಿಸುವ ಏಕಾಂತದ ಕಥೆಗಳು,
ಪ್ರೀತಿಗಾಗಿ ಚಡಪಡಿಸುವ
ಕ್ರೂರ ಪ್ರೇಮ ಕವಿತೆಗಳು.
ಜಾಲಿ ಟ್ರಿಪ್ ಗೆಂದು ಬಂದವರು
ತಕರಾರು ಮಾಡಿಯಾರೆಂದು
ಕಣ್ಣು ಮುಚ್ಚಿ ತೆಗೆಯುವುದರಲ್ಲಿ
ಆಕೆಯ ಹೆಣ ಮಾಯವಾಗಿತ್ತು.
ಮುಂದೆ ಎಲ್ಲಾ
ಯಥಾ ಪ್ರಕಾರ ನಡೆಯುತ್ತಿದೆ
ಆಕೆ ತನ್ನ ಕಥೆ ಕವಿತೆಗಳಲ್ಲಿ
ಅವಲತ್ತುಕೊಂಡಂತೆ.
– Charles Bukowski