ಸುಂದರ ಭಾರತ ಪ್ರತಿಷ್ಠಾನ ದಿಂದ ೧೦ ಶಾಲೆಗಳಿಗೆ ಪುಸ್ತಕ, ಕುರ್ಚಿ ಉಚಿತ ವಿತರಣೆ
e-ಸುದ್ದಿ, ಮಸ್ಕಿ
ಬೆಂಗಳೂರಿನ ಸುಂದರ ಭಾರತ ಪ್ರತಿಷ್ಠಾನದವರು ಮಸ್ಕಿ ತಾಲೂಕಿನ ವಿವಿಧ ೧೦ ಶಾಲೆಗಳಿಗೆ ಅಂದಾಜು ೨೫ ಸಾವಿರ ರೂ.ಗಳ ಪುಸ್ತಕ ಹಾಗೂ ಕುರ್ಚಿ ಗಳನ್ನು ಉಚಿತವಾಗಿ ನೀಡುವ ಮೂಲಕ ಸರ್ಕಾರಿ ಶಾಲೆಗಳು ಸದೃಢಗೊಳ್ಳಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಮಸ್ಕಿ, ಮೆದಕಿನಾಳ, ದಿನ್ನಿಬಾಯಿ, ಹಂಪನಾಳ, ಗುಡಗಲದಿನ್ನಿ, ಚುಕನಟ್ಟಿ, ಎಲೆಕೂಡ್ಲಗಿ ಸೇರಿದಂತೆ ರಾಯಚೂರು ಜಿಲ್ಲೆಯ ೩೫ ಶಾಲೆಗಳಿಗೆ ಉಚಿತವಾಗಿ ಪುಸ್ತಕ ಹಾಗೂ ಕುರ್ಚಿ ಗಳನ್ನು ವಿತರಿಸಿದರು.
ಪ್ರತಿಷ್ಠಾನದ ಪ್ರತಾಪ , ಶ್ರೀವತ್ಸ್, ನೀಡ್ ಬೇಸ್ ಇಂಡಿಯಾದ ನಿಜಾಮ ಅವರು ಆಗಮಿಸಿ ಆಯ್ಕೆಯಾದ ಶಾಲೆಗಳಿಗೆ ಭೇಟಿ ನೀಡಿ ವಿತರಿಸಿದರು.
————————————————
-ಉತ್ತಮ ಕೆಲಸ ಮಾಡುವವರನ್ನು ಸಂಘ ಸಂಸ್ಥೆಗಳು, ದಾನಿಗಳು ಗುರುತಿಸುತ್ತಾರೆ ಅನ್ನುವದಕ್ಕೆ ಸುಂದರ ಭಾರತ ಪ್ರತಿಷ್ಠಾನ ಹಾಗೂ ನೀಡ್ ಬೇಸ್ ಇಂಡಿಯಾ ಕಂಪನಿ ಸಾಕ್ಷಿ
– ಗುಂಡೂರಾವ್ ದೇಸಾಯಿ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಮೆದಕಿನಾಳ
———————————————-—
ಪ್ರತಾಪ ಸರ್, ಶ್ರೀವತ್ಸ ಸರ್, ನಜೀಮ ಸರ್ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪುಸ್ತಕ, ನೋಟ್ ಬುಕ್, ಕುರ್ಚಿ ವಿತರಿಸಿ ಖುಷಿ ಪಟ್ಟರೇ ವಿನಃ ಸನ್ಮಾನವನ್ನು ಸ್ವಿಕರಿಸದ ನಿಸ್ಪರ್ಹ ವ್ಯಕ್ತಿಗಳು
– ಕೆ.ವರದೇಂದ್ರ ಶಿಕ್ಷಕರು, ದಿನ್ನಿಬಾಯಿ