e-ಸುದ್ದಿ, ಮಸ್ಕಿ
ಸಾರ್ವಜನಿಕರು ರಸ್ತೆಯ ಸುರಕ್ಷಾ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಿ, ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಿ ಎಂದು ಬಳಗಾನೂರು ಪೊಲೀಸ್ ಠಾಣೆ ಪಿಎಸ್‍ಐ ಶಂಭುಲಿಂಗ ಹಿರೇಮಠ ಹೇಳಿದರು.
ತಾಲೂಕಿನ ಬಳಗಾನೂರು ಪೊಲೀಸ್ ಠಾಣೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ ಅಂಗವಾಗಿ ಠಾಣಾ ವ್ಯಾಪ್ತಿಯ ವಿವಿಧ ರಸ್ತೆಗಳಲ್ಲಿ ಸಂಚರಿಸಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷೆತೆ ಬಗ್ಗೆ ಜಾಗೃತಿ ಮೂಡಿಸಿದರು.
ಪ್ರತಿಯೊಬ್ಬರು ವಾಹನ ಚಾಲನೆ ಮಾಡುವಾಗ ನಿರ್ಲಕ್ಷ್ಯವಹಿಸದೇ ಜಾಗೂರುಕತೆಯಿಂದ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ವಾಹನ ಚಾಲನೆ ಮಾಡಬೇಕು. ಅಂದಾಗ ಮಾತ್ರ ನಾವೂ ನಮ್ಮ ಅಮೂಲ್ಯ ಜೀವವನ್ನು ಅಫಘಾತಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಚಾಲಕರು ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಬಾರದು. ಪ್ರತಿಯೊಬ್ಬರು ವಾಹನ ಲೈಸನ್ಸ್ ಹಾಗೂ ವಾಹನದ ಕಾಗದ ಪತ್ರಗಳನ್ನು ಹೊಂದಿರಬೇಕು ಎಂದರು.
ಅಮರಪ್ಪ ಸಜ್ಜನ್, ಕರಿಯಣ್ಣ, ಮೌನೇಶ, ಮಂಜುನಾಥ, ದಯಾನಂದ್ ರಮೇಶ, ಮೌಲಾಹುಸೇನ್ ಸೇರಿದಂತೆ ಇತರರು ಇದ್ದರು.