e-ಸುದ್ದಿ, ಮಸ್ಕಿ
ಪ್ರತಾಪಗೌಡ ಪಾಟೀಲರು ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ ಕ್ಷೇತ್ರದ ಜನರಿಗೆ ವಂಚಿಸಿರುವುದರಿಂದ ಕ್ಷೇತ್ರದ ಮತದಾರರು ಉಪ ಚುನಾವಣೆಯಲ್ಲಿ ತಕ್ಕ ಪಾಠಕಲಿಸುತ್ತಾರೆ ಎಂದು ಮಸ್ಕಿ ಕಾಂಗ್ರೆಸ್ ಮುಖಂಡ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಗೌಡನಭಾವಿ ಗ್ರಾಮದಲ್ಲಿ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ ಕಾರಣಕ್ಕಾಗಿಯೇ ಕ್ಷೇತ್ರದ ಜನರು ನನನ್ನು ಅಷ್ಟೋಂದು ಮತಗಳನ್ನು ನೀಡಿ ಆರ್ಶಿವಾದ ಮಾಡಿದ್ದಿರಿ ಆದರೆ ನಾನು ಸೋಲಲು ಕಳ್ಳ ಮತಗಳೆ ಕಾರಣವಾಗಿವೆ ಎಂದು ಆರೋಪಿಸಿದರು.
ಇತ್ತಿಚೀಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರನ್ನು ಖರೀದಿ ಮಾಡಿ ಅವರು ಅಧಿಕಾರ ಪಡೆದುಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಾಪಗೌಡ ಪಾಟೀಲ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಬಹುದು ಎನ್ನುವ ಭ್ರಮೆಯಲ್ಲಿ ಇದ್ದಾರೆ. ಆದರೆ ಕ್ಷೇತ್ರದ ಜನರು ಅದಕ್ಕೆ ಅವಕಾಶ ನೀಡವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ತಾಪಂ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪೂರು, ಮಹಿಬೂಬಸಾಬ್ ಮುದ್ದಾಪೂರು, ಬಸನಗೌಡ ಮುದೆಗೌಡ, ಯಂಕಾರಡ್ಡಿ ಹಾಲಾಪೂರು, ಮರಿಸ್ವಾಮಿ ಹೊಸಳ್ಳಿ, ಮಹ್ಮದ್ ಸುತಾರಿ, ಬಸನಗೌಡ ಮಾರಲದಿನ್ನಿ, ಮಲ್ಲಯ್ಯ ಮುರಾರಿ, ದುಗೇಶ ವಕೀಲ, ಸಿದ್ದನಗೌಡ ಮಾಟೂರು, ಮಲ್ಲನಗೌಡ ಸುಂಕನೂರು, ಹನುಮೇಶ ಬಾಗೋಡಿ, ನಾಗನಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.