ಮುದಿ ಜೀವ

ಮುದಿ ಜೀವ 

ಮುಪ್ಪನ್ನು ಒಪ್ಪಿಕೊಂಡು
ಅಪ್ಪಿಕೊಳ್ಳುವ
ಹೋಗಲಾಡಿಸುವ
ಅವ್ಯಕ್ತ ಭಯ

ಕಾಡದಿರಲಿ ಒಂಟಿತನ
ಭಾರವಾಗದಿರಲಿ ಅವರ ಮನ
ನೀಡಿದರೆ ಸಾಕು ಅವರಿಗೆ ಸ್ಥಾನ-ಮಾನ
ಮನಸಾರೆ ಹಾರಿಸುವುದು ಎಲ್ಲರನ್ನ

ಇರುವುದು ಅವರಿಗೆ
ಪ್ರೀತಿಯ ಹಂಬಲ
ಸಾಂತ್ವನದ ಮಾತುಗಳೇ
ಇವರಿಗೆ ಬಲ

ತೊರೆಯುವರು
ನೂರೆಂಟು ಆಸೆ
ಮಕ್ಕಳ ಅಕ್ಕರೆಯೇ
ಇವರ ಬಾಳಿನ ಭರವಸೆ

ಹೊರೆಯಾಗದಿರಲಿ
ಹಿರಿಯರು
ಕೊಂಚ ಹೊಂದಾಣಿಕೆ
ಬೇಕು ಎಲ್ಲರಲ್ಲೂ

ಇವರಿದ್ದ ಕಡೆ
ನೆಲೆಯೂರುವುದು ಸಂಸ್ಕಾರ
ಸರಿ ದಾರಿಯ ಕಂಡುಕೊಳ್ಳುವುವು
ಎಲ್ಲರ ಆಚಾರ – ವಿಚಾರ

ತೊರೆಯದಿರಿ
ಜೀವನ ಕಟ್ಟಿಕೊಟ್ಟವರನ್ನು
ಆಸರೆಯಾಗಿರಿ ನೀವು
ಅವರ ಮುಪ್ಪಿನ ಕಾಲಕಿನ್ನು……

ಡಾ ನಂದಾ ಕೋಟೂರ,ಬೆಂಗಳೂರು

Don`t copy text!