ಮಾಡಲಾಗದು ಭಕ್ತನು

ಮಾಡಲಾಗದು ಭಕ್ತನು

ಓಡಲಾರದ ಮೃಗವು ಸೊಣಗಂಗೆ ಮಾಂಸವ ಕೊಡುವಂತೆ
ಮಾಡಲಾಗದು ಭಕ್ತನು | ಕೊಳ್ಳಲಾಗದು ಜಂಗಮವು|
ಹಿರಿಯರು ನರಮಾಂಸವು ಭುಂಜಿಸುವರೆ |
ತನುವುಕ್ಕಿ ಮಾಡಬೇಕು
ಭಕ್ತಿಯ ಮಾಡಿಸಿಕೊಳ್ಳಬೇಕು ಜಂಗಮ |ಕೂಡಲಸಂಗಮದೇವ ||

ವಿವರಣೆ

ಗುರು ಹಿರಿಯರ ದಾಕ್ಷಿಣ್ಯಕ್ಕಾಗಲಿ ಅಥವಾ ಅವರ ಕೈಯಲ್ಲಿ ಸಿಕ್ಕ ಪೇಚಾಡಬೇಕಾಗುತ್ತದೆಂದಾಗಲಿ ಮನಸ್ಸಿಲ್ಲದೆ ಅನಿರ್ವಾಯದಿಂದ ಧನ-ಧಾನ್ಯಾದಿಗಳನ್ನು ದಾನಮಾಡಿದರೆ ಅದರಿಂದ ಆ ದಾನ ಮಾಡಿದಾತನಿಗೆ ಪುಣ್ಯವು ಬರುವುದಿಲ್ಲ.ಆ ಪ್ರಕಾರ ಅಸಮಾಧಾನದಿಂದ ಕೊಟ್ಟ ದಾನವನ್ನು ತೆಗೆದುಕೊಂಡಾತನು ಆ ದಾನ ಕೊಟ್ಟವನನ್ನು ಹಿಂಸೆಗೊಳಿಸಿದಂತೆಯೇ ಸರಿ. ಆದ ಪ್ರಯುಕ್ತ ದಾನ ಮಾಡುವವರು ಮನಪೂರ್ವಕ ಸ್ವಸಂತೋಷದಿಂದಲೇ ಮಾಡಬೇಕು, ಮತ್ತು ಅಂತ ದಾನವನ್ನೇ ಸ್ವೀಕರಿಸಬೇಕು ” ಬೇಡುವಾತ ಜಂಗಮವಲ್ಲ ; ಭೇಡಿಸಿಕೊಂಬತ ಭಕ್ತನಲ್ಲ ” ಎಂಬ ಪುರಾತನ ವಚನವಾದರೂ ಮೇಲಣ ಅಭಿಪ್ರಾಯವನ್ನೇ ಸೂಚಿಸತಕ್ಕದಾಗಿದೆ. ಇದನ್ನೇ ಈ ವಚನದಲ್ಲಿ ವಿವರಿಸಿದ್ದಾರೆ.

ವಿಜಯ ಗೌಡ ಮುಂಬೈ

Don`t copy text!