ಮಲೆನಾಡು
ಕತ್ತೆತ್ತಿ ನೋಡಿದಷ್ಟು
ಸುತ್ತಲೂ ಗುಡ್ಡ
ಬೆಟ್ಟ ಕಣಿವೆ ನದಿ
ದೊಡ್ಡ ಮರಗಳ
ಮಧ್ಯೆ ಪುಟ್ಟ
ಪೊದರಿನ ಇಂಚರ
ಹಸಿರು ಕಾನನ
ಕಣ್ಣು ಪಾವನ
ಹಲಸು ಮಾವು
ತೆಂಗು ಅಡಿಕೆ
ಸರೋವರ ಕೆರೆ
ತುಂಬಿದ ನಯನ
ನೀಲಿ ಆಕಾಶದ
ಹೊದಿಕೆ
ಮೋಡ ಕವಿದು
ಮಳೆ ಮುತ್ತು ಹನಿ
ದನಕರುಗಳ
ಸಂಭ್ರಮ ನೆಗೆತ
ಹಳ್ಳಿಗಳಲ್ಲಿ
ಜನಪದ ಕುಣಿತ
ಚಳಿ ಗಾಳಿಗೆ
ಮೈಯೊಡ್ಡಿ
ಬದುಕುವರು ನನ್ನವರು
ಮಲೆನಾಡಿನ ಜನರು
–ರೇಖಾ ಅಶೋಕ.ಹರಮ ಘಟ್ಟ