ಹಾಸ್ಯ ಬರಹ
ಬ್ಯೂಜಿನಾ…..
ಪದ್ದುಗ….ಒಂದು ದಿನ ಕಾಲೊಂದು ಬಂತು….”ಏನು ಬ್ಯೂಜಿನಾ….”ಎನ್ನುವ ಧ್ವನಿ ಕೇಳಿ ಪುಳುಕಿತನಾದ….’ಓ…ಎಸ್ ..ಎಸ್…ಅದೆ ಧ್ವನಿ ಇಪ್ಪತ್ತು ವರ್ಷಗಳಾದವೇನೊ….?ಆ ಧ್ವನಿಗಾಗಿ ಎμÉ್ಡಲ್ಲ ತಪಸ್ಸು ಮಾಡತಿದ್ವಿ…ಅದೆ….ನಾನು ಆ ಧ್ವನಿ ಬದುಕಿನಲ್ಲಿ ಕೇಳುತ್ತೇನೊ ಇಲ್ವಾ ಅನಕೊಂಡಿದ್ದೆ…ಅದು ನನ್ನದಾದರೆ ಸ್ವರ್ಗವೆ ಧರೆಗಿಳಿದಂತೆ ಭಾವಿಸಿದ್ದೆ…ಬಟ್…ನಿಜಾನಾ…’ ಎಂದು ಚಿವಟಿಕೊಂಡು ವಾಸ್ತವವೆಂದು ಖಾತ್ರಿಪಡಿಸಿಕೊಂಡ
“ಹಲೋ….ಯಾರಂತ ಗೊತ್ತಾಯ್ತಾ…..ಬ್ಯೂಜಿನಾ…ಹಾಗಿದ್ರೆ ಆಮೇಲೆ ಮಾಡ್ತಿನಿ” ಅಂದಿತು….ಎರಡು ದಶಕದ ನಂತರೂ ಅದೆ ಮಧುರ ಧ್ವನಿ….ನನ್ನ ಭಾಗ್ಯ ಇವತ್ತು..ಆನ್ ಲೈನ್ ಮಿಟಿಂಗ ನಡಿತಿದ್ರು ಹೊರಬಂದು… “ನೀವು …ಮೀನಾ ತಾನೆ…..?”
“ಹೊ…ಪದ್ದು …ಗುರುತು ಹಿಡಿದ್ರಿ….ಸೊ..ನೈಸ್…”
“ಹೇಗೆ ಮರೆಯೋಕೆ ಆಗುತ್ತೆ ಮೇಡಂ….ನಿಮ್ಮೊಂದಿಗಿನ ಆತ್ಮೀಯ ಸ್ನೇಹವನ್ನು..ಹೌದು ನನ್ನ ನಂಬರ್ ಹೇಗೆ ಸಿಕ್ಕಿತು?”…ಎಂದ
“ಹೋ…. ನಾಟಿ… ಮೇಡಂ ಅಂತಿರಾ ಪದ್ದು..ಬಿಟ್ಟಾಕಿ ಕಾಲ ಮಿ ಯಾಜ ಎ ಮೀನಾ ಓನ್ಲಿ.. ಹೇಗೋ ಸಿಕ್ಕಿತಪಾ…ಹೇಳಿ ಎಲ್ಲಿ ಇರೋದು.?.ಏನು..ಕೆಲ¸?À ಮನೆ ಮಕ್ಕಳು…” ಆ ಬಗ್ಗೆ ಎಲ್ಲಾ ಚರ್ಚೆ ನಡಿತು…. “ಹೋ..ಸೋ ಲಕ್ಕಿ ಮೇಡಂ..ನೀವು…ಬಾಂಬೆದಲ್ಲಿ ಸ್ವಂತ ಮನೆ…ಸಾಫ್ಡವೇರ್ ಪತಿ…ಬೈದಿ ಬೈ ನಾನು ಬೆಂಗಳೂರಲ್ಲಿ ಇರೋದು..ಬಂದಾಗ ಬನ್ನಿ”ಎಂದ
“ಯಾರ್ರಿ ಅದು ಯಾರ ಜೊತೆ ಮಾತಾಡತಾ ಇರೋದು…” ಪಮ್ಮಿಯ ಧ್ವನಿ ಬಂತು ಒಳಗಿನಿಂದ
“ಅದೆ ನನ್ನ ಕ್ಲಾಸ ಮೇಟ್ ಮೀನಾ ಅಂತ ಹೇಳತಿದ್ದೆನಲ್ಲ…. ಅವರು ಮಾಡಿದ್ದು…”
“ಓ ಮನೆಯವರು ಇದ್ದಾರ ಕೊಡಿ ಮಾತಾಡುವೆ” ಎಂದಳು ಮೀನಾ.
ಭಯದಿಂದ ಕೊಟ್ಟ ಪದ್ದು… “ಹೇಳಿ ಮೇಡಂ ಹೇಗಿದ್ದಿರಿ…ನಾನು ನಿಮ್ಮ ಮನೆಯವರ ಕಾಲೇಜ್ ಮೇಟ್..ಯು ಆರ್ ಲಕ್ಕಿ….ಒಳ್ಳೆ ಪರಸನ್…ನಿಮಗೆ ಸಿಕ್ಕಿದ್ದು” ಎಂದು ಏನೆಲ್ಲಾ ಹೇಳತಿದ್ರೆ ಈಕೆಯ ಮುಖದಲ್ಲಿ ಬೇರೆ ಆಗತಿತ್ತು..ಈಕಿನೂ ಕೂಲಾಗಿ ಮಾತನಾಡಿ… “ಬೆಂಗಳೂರಿಗೆ ಬಂದಾಗ ಬನ್ನಿ” ಎಂದಳು. “ನಿಮ್ಮ ಮಾತು ಕೇಳತಾ ಇದ್ರೆ ನೀವು ಬಹಳ ಒಳ್ಳೆಯವರಾಗಿ ಕಾಣ್ತಿರಿ..ಖಂಡಿತ ಬರತೀನಿ” ಎಂದು ಫೋನ ಕಟ್ ಮಾಡಿದಳು
“ಬರತಾಳಂತೆ ಬರತಾಳೆ…..ಬಿನ್ನಾಣಗಿತ್ತಿ..ಇಪ್ಪತೈದು ವರ್ಷ ಆದ ಮೇಲೆ ಯಾಕ ನೆನಪಾಯ್ತೋ ಈ ಮೂದೇವಿಗೆ…ನನ್ನ ಗಂಡನ ಬೇಕಾಗಿತ್ತಾ?”ಅಂತ ಕೈ ಕೈ ಹಿಚುಕೊಳ್ಳಾಕತಿದ್ಲು….ಸಮಯ ಸಿಕ್ಕಾಗ ಪದ್ದು ಅವಳ ಬಗ್ಗೆ ಬಹಳ ವರ್ಣನೆ ಮಾಡ್ತಿದ್ದ..ಅವಳು ಕಣ್ಣು ಹಾಗೆ..ಜಡೆ..ಹೀಗೆ…ತುಟಿ ಹಾಗೆ…ನಡೆ ಹೀಗೆ…ಅಂತ…ಹೇಗೆ ಆಗಲಿಕ್ಕಿಲ್ಲ! ಅವಳದೆ ಫೋನ್ ಬಂದಾಗ..ಸವತಿ ಮತ್ಸರ ಸಹಜವಾಗಿ ಕೆರಳಿತು…..ಮುಖ ಕೆಂಪಾಯಿತು…
“ಯಾಕೆ..?ಹಾಂಗ ದೀಢೀರ್ ನ ಚೇಂಜ್ ಆದಿ!”
“ಆಗದೆ ಏನೋ..ಸಿಕ್ಕಳಲ್ಲ ಆ ಮೂದೇವಿ..ಮುಗಿತು ನನ್ನ ಕಥೆ”
“ಅಯ್ಯೊ…ನನ್ನ ಕಥೇನ ಎಲ್ಲಾ ಮುಗುದಾಗಿದೆ…..ಮತ್ತೆಲ್ಲೆ ಶುರುವಾಗೋದು…ನಾನು ಆಕೆ ಬಗ್ಗೆ ಹೇಳತಿದ್ದ ಎಲ್ಲಾ ಮಾತುಗಳು ಸುಳ್ಳು…ಸುಮ್ಮನೆ ನಿನ್ನ ರೇಗಸೋಕೆ ಹಾಗೆ ಮಾಡತಿದ್ದೆ…ಆಕೆ ಕಾಲೇಜಿನ್ಯಾಗ ನಮ್ಮ ಕಡೆ ತಿರುಗಿ ಸಹಿತ ನೋಡತಿರಲಿಲ್ಲ…”
“ಇಷ್ಟ್ಯಾಕ ಹೌಹಾರಿರಿ… ಹೌದು ತಿರುಗಿ ನೋಡಲಾರದ ಮೂದೇವಿ ಈಗ್ಯಾಕ ಫೋನ್ ಮಾಡಿದಳು”
“ನನಗೂ ಗೊತ್ತಿಲ್ಲ…ವಿಚಾರಸ್ತಿನಿ…ಮೋಸ್ಟಲಿ ಕಾಲೇಜ್ ಗ್ರುಪ ನಲ್ಲಿ ನಂಬರ್ ಸಿಕ್ಕಿರಬೇಕು, ಮಾಡಿರಬೇಕು..”
“ಆಕಿ ಫೋನ್ ನಂಬರ್ ಕೊಡಿ ನಾನೇ ವಿಚಾರಸ್ತಿನಿ”
“ಬೇಡಾನೆ ಏನಾದರೂ ಅಂದಿದಿ..ಈಗ ತಾನೆ ಕಾಲ್ ಮಾಡಿದ್ದಾಳೆಸಂಬಂದ ಮುರಿಬೇಡÉ”
“ಹಾಂ..!.ಎಷ್ಟು ನುಲಿಯಾಕತಿರಿ..ಇಪ್ಪತ್ತೈದು ವರ್ಷದಿಂದ ಅವಳ ಇದ್ದಳಾ?”
“ಆಯ್ತು ತಾಯಿ…ನಿನ್ನ ಸಂಗಡ ವಾದ ಮಾಡೋಕಾಗುತ್ತಾ..ಮಾತಾಡತಿಯಲ್ಲ ಮೆಲ್ಲಕ ಮಾತಾಡು.”
“ಆಯ್ತು ಮೊದಲು ಜಾಗ ಖಾಲಿ ಮಾಡಿ” ಎಂದ್ಲು
“ನನ್ಮುಂದನ ಮಾಡೆ…”
“ ಹ್ಞುಂ ……”ಅಂತ ಗುರಾಯಿಸಿದಳು
“ಆಯ್ತು ಮಹರಾಯ್ತಿ ಏನರ ಮಾಡಿಕೊ” ಎಂದು ಕಾಲ್ಕಿತ್ತಿದ
ಹಿಂಗ್ ಕಾಲ್ ಬಂದದ್ದು ವ್ಯಾಟ್ಸಪ್ ಮೂಲಕ ಚಾಟ್ ಮಾಡವುದರಲ್ಲಿ ಮುಂದುವರೆತು..
ಸ್ನೇಹ ಬೆಳಿತು..ಪದ್ದುನ ಕಲ್ಪನೆಯ ಮೀನಾ ಕಾಲೇಜಿನದ್ದೆ..ಮುದ್ದು ಮುಖ..ಉದ್ದ ಜಡೆ…ಆಕರ್ಷಿಸುವ ಕಂಗಳು…ಅವಳ ಒಂದು ಕರೆಯಿಂದ ಥ್ರಿಲ್ ಆದ ಪದ್ದು ಕಾಲೇಜನಲ್ಲಿ ಕೊನೆಯಾಗಿದ್ದ ಕಾವ್ಯತ್ವವನ್ನು ಹೊರತೆಗೆದ..ನಿತ್ಯ ಒಂದು ಹೊಸ ಕವಿತೆ ಮೀನಾಳಿಗಾಗಿ ಬರೆಯತೊಡಗಿದೆ… “ವಾಟ್ ಎ ಬ್ಯೂಟಿಫುಲ್ ರೈಟಿಂಗ್…ಐ ಲೈಕೈ ಇಟ್.. ಲವ್ ಇಟ್..” ಅಂತ ಮೆಸ್ಸೇಜ್ ಬಂದಿದ್ದೆ ತಡ…ಬರವಣಿಗೆ ಓತಪ್ರೇತವಾಯಿತು..
ಆತ್ಮೀಯತೆ ಹೆಚ್ಚುತ್ತಾ ಹೋಯಿತು ಚಾಟಿಂಗ್ ಎಲ್ಲೆ ಮೀರದಂತೆ ನಡೆದಿತ್ತು..ಕೆಲಸದ ಮೇಲೆ ಪದ್ದು ದೆಹಲಿಗೆ ಹೋಗಿದ್ದಾಗ ಬೆಂಗಳೂರಿಗೆ ಬಂದಿದ್ದಳು…ಮನೆಗೂ ಬಂದು ಹೋಗಿದ್ದಳು…ಪದ್ದು ತಡವರಿಸಿದ್ದು ಅಷ್ಟಿಷ್ಟಲ್ಲ. “ಏನ್ರಿ ನಾನು ಇಲ್ಲದಾಗ ಬಂದುಬಿಟ್ರಿ…..” ಎಂದು ಜಗಳಾನೂ ತೆಗೆದು ಮಾತು ಬಿಟ್ಟಿದ್ದ.. “ಇನ್ನೊಮ್ಮೆ ನಾನು ಇರುವಾಗ ಬರಬೇಕು” ಎನ್ನುವ ಒತ್ತಾಯಕ್ಕೆ ಮತ್ತೆ ಗೆಳೆತನ ಮುಂದುವರೆದಿತ್ತು
ಫೋನ್ ಬೆಸೆದ ಹಳೆಯ ಬಾಂಧವ್ಯ ಒಂದು ಹೊಸ ಕನಸ್ಸನ್ನೆ ಸೃಷ್ಟಿಸಿತ್ತು. ಪರಸ್ಪರ ಭೇಟಿಯಾಗುವ ದಿನ ಬಂದೆಬಿಟ್ಟಿತು..ಬೆಂಗಳೂರಿಗೆ ಮದುವೆಗಾಗಿ ಬರುತ್ತಿದ್ದೇನೆ ಎನ್ನುವ ಮೆಸ್ಸೆಜ್ ಬಂದಿದ್ದೆ ತಡ..ಖುಷಿಯಿಂದ “ಪಮ್ಮಿ ನಾಳೆ ಮೀನಾ ಬರತಾಳಂತೆ “ ಎಂದು ಓಡೋಡಿ ಬಂದು ಹೇಳಿದ
“ಹೌದು ನನಗೆ ಗೊತ್ತು”
“ಹಾಂ! ಹೇಗೆ…?”
“ಕಾಲ್ ಮಾಡಿ ಹೇಳಿದ್ದಾಳೆ”
“ನಿನಗೆ ಏನು ಅನಿಸಲಿಲ್ವಾ?”
“ಏನು ಅನಿಸಬೇಕು…ಒಳ್ಳೆಯವರಿದ್ದಾರೆ,,,ಯು ನೋ ವಿ ಆರ್ ಗುಡ್ ಪ್ರೇಂಡ್ಸ..ಲಾಸ್ಟ್ ಟೈಮ್ ಬೆಂಗಳೂರಿಗೆ ಬಂದಾಗ ಸಕತ್ ಕಂಪನಿಕೊಟ್ರು”
“ಯು….ಲಕ್ಕಿ…ನಾನು ಇರಲಿಲ್ಲ ಅಲ್ಲ..ನಾಳೆ ಬರತಾರಂತೆ..!”
“ಬರಲಿ..ಏನೇನು ಮಾಡಬೇಕು ಹೇಳಿ ಮಾಡುವೆ….”
“ಮಾಡುವಿಯಂತೆ…ಒಂದು ಕೇಳಲಾ…ನಾನು ಹೇರ್‍ಡ್ರೈ ಮಾಡಿಕೊತೀನಿ…ಫೇಸ್ ವಾಶ ಮಾಡಿಸಿಕೊಂಡು ಬರತೀನಿ….”
“ಅಯ್ಯೋ ಅಷ್ಟ್ಯಾಕೆ ಕೇಳತಿರಿ..ನಾನೇ ಹೇರ್ ಡ್ರೈ ಮಾಡ್ತೀನಿ” ಅಂತ ಮಾಡಿದಳು……”.ಬೇಕಾದ್ರೆ ಪಾರ್ಲರ್ ಗೆ ಹೋಗಿ ಬನ್ನಿ” ಎಂದು ಕಳಿಸಿಕೊಟ್ಟಳು
ಪದ್ದು ಕಕ್ಕಾಬಿಕ್ಕಿ…ಒಂದು ಕೂದಲು ಸಿಕ್ರೆ ವಾರಗಟ್ಟಲೆ ವಿಚಾರಣೆಗೆ ಒಳಪಡಿಸುತ್ತಿದ್ದವಳು…ಇವಳಾ? “ಮೀನಾ ನೀನು ಗ್ರೇಟ್ ಒಂದೆ ಭೇಟಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಿಯೇ?” ಎಂದು ಕರೆ ಮಾಡಿ ಹೇಳಿದ್ದ. “ಇಲ್ಲಾ ಪದ್ದು..ನಿಮ್ಮ ಮಿಸೆಸ್ ಸಿಂಪಲಿ ಗ್ರೇಟ್” ಅಂದಿದ್ದಳು
“ಹೋ..ಹೋ..ಇಬ್ಬರ ನಡುವೆ ಹೊಂದಾಣಿಕೆ ನಮಗೆ ಅನಕೂಲ” ಎಂದು ಮುಸಿ ಮುಸಿ ನಕ್ಕಿದ್ದ
ಸೆಲೂನ್ ಹೋಗಿ ಬಂದ ಪದ್ದುರಾಯರನ್ನು ಪಮ್ಮಿ ಗುರುತಿಸಲಾರಲಾದಳು.. “ಮದುವೆಗೂ ಅಷ್ಟು ತಯ್ಯಾರಾಗಿರಲಿಲ್ಲ…ಇಂದು ಹಳೆಯ ಸ್ನೇಹಿತೆ ಬರತಾಳೆ ಅಂದ್ರೆ ಎಷ್ಟು ಚಂದ ಸಿದ್ಧರಾಗಿರಿ” ಎಂದು ಮೂಗು ಮುರಿದಳು… “ಸೆಲ್ಯೂನ್ ಹುಡುಗ ಮಾಡಿದ್ದು, ನಾನು ಶೇವಿಂಗ್ ಅಷ್ಟೆ ಮಾಡಂತ ಹೇಳಿದ್ದೆ” ಎಂದು ಡೈವರ್ಟ ಮಾಡಿಮೆಲ್ಲನೆ ಕನ್ನಡಿ ನೋಡಿಕೊಂಡು….ತನ್ನನ್ನೆ ತಾನು ನಂಬದಾದ…ಇಪ್ಪತ್ತು ವರ್ಷ ಹಿಂದೆ ಹೋದ ಮೇಕಪ್ಪ ಆಗಿತ್ತು..ಒಳೊಳಗೆ ಖುಷಿ ಪಟ್ಟ..
ಮಧ್ಯಾಹ್ನ ಊಟಕ್ಕೆ ಬರತಿನಂದಿದ್ರು. ಅಂದು ಯಾಕೊ ಸಮಯ ಓಡಲಿಲ್ಲ…ಒಂದು ತಾಸು ವರ್ಷವಾದಂತೆ ಭಾಸವಾಗತೊಡಗಿತು.. ಟೈಮು ಓಡ್ತಾ ಇಲ್ಲ ಇಲ್ಲ ಎಂದು ತಡವರಿಸಿದ.ಬೋನಿನಲ್ಲಿ ಹಾಕಿದ ಹುಲಿಯಂತೆ ಅತ್ತ ಇತ್ತ ಓಡಾಡತೊಡಗಿದೆ.
“ಯಾಕ ಅಷ್ಟು ಅವಸರ ಮಾಡ್ತೀರಿ ತಡಿ..ಬರತಾರೆ…ನನಗಾಗಿ ಇಷ್ಟು ತಡವರಿಸಿದ್ದೀರಾ?” ಎಂದು ಕೊಂಕು ನುಡಿದಳು
ಪದ್ದುಗ ನಿಜ ಅನಿಸ್ತು…ಹೌದಲ್ಲ ಎಂದು ಫ್ಲಾಶ ಬ್ಯಾಕಿಗೆ ಹೋದಾಗಲೇ ಕಾರ್ ಸಪ್ಪಳ ಆಯ್ತು… “ಬಂದ್ರು ನೋಡ್ರೀ” ಎಂದು ಪಮ್ಮಿ ಕರೆದಳು… “ನಾನು ಒಳಗಿರತೀನಿ ನೀನು ಕರಕೊಂಡು ಬಾ” ಎಂದು ಒಳಹೋದ…
ಒಳಗೆ ಬಂದದ್ದಾಯಿತು…ಆ ಧ್ವನಿ ಕೇಳತಾ ಪುಳಕಿತನಾಗುತ್ತಿದ್ದ.. “ಎಲ್ಲಿ ನಿಮ್ಮನೆಯವರು ಕಾಣ್ತಾನೆ ಇಲ್ಲ ಎಂದು ಧ್ವನಿ ಬಂದಿದ್ದೆ ತಡ….ಪದ್ದು ಹಾಲನಲ್ಲಿ ಕಾಲಿಟ್ಟ……ರೋಮಾಂಚನದಿಂದ…”ಹೋ ಪದ್ದು ಹೌ ಆರ್ ಯು?”ಎಂದು ಧ್ವನಿ ಬಂದ ಮೀನಾಳತ್ತ ಧೃಷ್ಟಿ ಬೀರಿದ
“ಫೈನ್…..!” ಅಂತ ಹಾಗೆ ನಿಂತ
“ಏನ್ರಿ ಹೇಗಿದ್ದವರು ಹಾಗೆ ಇದ್ದೀರಿ….ಅದೆ ಡೈನಾಮಿಕ್ ಪರ್ಸನಾಲಟಿ” ಎಂದು ಕೈಕುಲುಕಿ ವಿಶ್ ಮಾಡಿದಳು
“…….”ಪದ್ದುಗ ಮಾತು ಹೊರಡಲಿಲ್ಲ.
ಪದ್ದು “ಯಾಕ್ರಿ ಹಾಗೆ ನಿಂತ್ರಿ?” ಎಂದ್ಲು ಮೀನಾ
“ಬಹಳ ದಿನದ ಮೇಲೆ ನೋಡಿದ್ದಾರಲ್ಲ…ಮಾತು ಬರುತ್ತಿಲ್ಲ ರಾಯರಿಗೆ..ಹೌದಲ್ರಿ?” ಎಂದು ಪಮ್ಮಿ ತೀವಿದಳು
“ಎಸ್ ಪದ್ದು…ನಾವು ನೋಡಿ ಹೇಗಾಗಿ ಬಿಟ್ಟಿವಿ…ನಿಮ್ಮನ್ನ ನೋಡಿದ್ರೆ ಸಂಕಟ ಆಗುತ್ತಪ”
ಪದ್ದುಗ ಸಂಕಟ ಪಡೋ ಸಮಯ ಅದಾಗಿತ್ತು..ತನ್ನ ಕಲ್ಪನೆಯ ಮೀನಾ ಆಗಿರಲಿಲ್ಲ…ಉದ್ದಕೂದಲು ಹೋಗಿ ಚೊಟಾಗಿತ್ತು…ಕಂಗಳು ಬತ್ತಿದ ಬಾವಿಯಂತಾಗಿದ್ದವು..ತುಂಬಿದ ಗಲ್ಲ ಒಳ ಸೇರಿದ್ದವು..ಹಲ್ಲು ಬಿದ್ದ ಅರ್ಧ ಬೊಚ್ಚಾಗಿತ್ತು.. ತುಂಬಿಕೊಂಡ ಶರೀರ ಬಡಕಲಾಗಿತ್ತು….ಪದ್ದನು ಕಾಣಲು ಮಾಡಿಕೊಂಡ ಬಂದ ಮೇಕಪ್ ಹೆಣಕ್ಕೆ ಶೃಂಗಾರ ಮಾಡಿದಾಂಗೆ ಆಗಿತ್ತು.
“ಮಾತಾಡಿ ಪದ್ದು ಪೋನ್ ನಲ್ಲಿ ಏನೆಲ್ಲ ಮಾತಾಡತಿದ್ರಿ…? ಎಂದು ಮೀನಾ ಒತ್ತಾಯಿಸಿದಳು
ಪಮ್ಮಿ ಮುಸಿ ಮುಸಿ ನಗುತಿದ್ದಳು
ಇವರೆಲ್ಲಿ ಮಾತಾಡತಾರಿ ಮೊದಲಿಂದಲೂ ಹಾಗೆ ಮೌನಿ ಬಾಬಾ ಎಂಟು ನಾನು ಊಟಕ್ಕ ಅರೆಂಜ್ ಮಾಡ್ತೀನಿ ಅಂತ ಒಳಹೋದಳು..
ಮೀನಾ ಖುಷಿ ಖುಷಿಯಿಂದ ಮಾತಾಡತಿದ್ರು….ಪದ್ದುನು ಮಾತಾಡಿದ…ಆದರೆ, ಕನಸಿನ ಕಟ್ಟೆ ಒಡೆದು ಹೋಗಿತ್ತು…ಆದರೂ ಮಾತಾಡಿದ ಹಳೆಯ ನೆನಪುಗಳನ್ನು ಹಂಚಿಕೊಂಡ…ಕಾಲೇಜಿನಲ್ಲಿ ಸೊಕ್ಕಿನಿಂದ ಮೆರೆದ ಮೀನಾ ಈಕಿನಾ ಅಂತ ಕನಿಕರನೂಗೊಂಡ..
ಹೋಗುವ ಸಮಯ ಬಂತು…ಮೀನಾ ಖುಷಿಯಿಂದ ಟಾಟಾ ಮಾಡಿದಳು…ಪಮ್ಮಿಯ ಪದ್ದುನ ಕೈ ಹಿಡಿದು ಟಾಟಾ ಮಾಡಿಸಿದಳು..
ಪಮ್ಮಿಯ ಗೆಲುವಿನ ಗುಟ್ಟಾ ರಟ್ಟಾಗಿತ್ತು…..ಅಂದಿನಿಂದ ಪಮ್ಮಿಗೆ ಮೀನಾ ಪದ್ದುನ ರೇಗಿಸುವ ವಸ್ತುವಾದಳು..
–ಗುಂಡುರಾವ್ ದೇಸಾಯಿ, ಶಿಕ್ಷಕರು ಮಸ್ಕಿ