e-ಸುದ್ದಿ, ಮಸ್ಕಿ
ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳನ್ನು ಸಬಲಿಕರಣ ಮಾಡಲು ಹಾಗೂ ಸರ್ವರಿಗೂ ಚುಚಿತ ಹಾಗೂ ಕಡ್ಡಾಯ ಶಿಕ್ಷಣ ತಲುಪಿಸುವ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಸದಸ್ಯರಿಗೆ ಶೈಕ್ಷಣಿಕ ತರಬೇತಿ ಹಮ್ಮಿಕೊಂಡಿರುವದು ಮಹತ್ವದ ಬೆಳವಣಿಗೆ ಎಂದು ಸಂಪನ್ಮೂಲ ಶಿಕ್ಷಕ ರವಿಚಂದ್ರ ಹೇಳಿದರು.
ತಾಲೂಕಿನ ಪರಸಾಪುರು ಗ್ರಾಮದ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಸದಸ್ಯರಿಗೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲ ಅಭಿವೃದ್ದಿ ಸಮಿತಿಯವರು ತಮ್ಮ ಊರಿನ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಅನುಕೂಲವಾಗುತ್ತದೆ. ಸದಸ್ಯರು ಶಾಲೆಯ ಬಗ್ಗೆ ಕಾಳಜಿ ಇಟ್ಟುಕೊಂಡರೆ ಶಾಲೆಗಳು ಅಭಿವೃದ್ದಿಯಾಗುವದರ ಜತೆಗೆ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ರವಿ ಅಸನಾಳ ಮಾತನಾಡಿ ಸಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು. ಮುಖ್ಯ ಶಿಕ್ಷಕ ಸತ್ಯಪ್ಪ, ಶಿಕ್ಷಕರಾದ ಹುಲ್ಲಪ್ಪ ಗಂಟಿ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಅಡುಗೆ ಸಿಬ್ಬಂದಿ, ಪಾಲಕರು ಇದ್ದರುಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಎಂದರು.
.