e-ಸುದ್ದಿ, ಮಸ್ಕಿ
ಮಸ್ಕಿ ಮಲ್ಲಿಕಾರ್ಜುನ ಜಾತ್ರೆ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಸ್ಕಿ ಶಾಖೆ ವತಿಯಿಂದ 45 ಅಡಿ ಎತ್ತರದ ಬೃಹತ್ ಶಿವಲಿಂಗ ಪ್ರದರ್ಶನವನ್ನು ಫೆ.27 ಮತ್ತು 28 ರಂದು ವ್ಯವಸ್ಥೆ ಮಾಡಿರುವದಾಗಿ ಮಸ್ಕಿ ಶಾಖೆಯ ಹೇಮಾವತಿ ಅಕ್ಕನವರು ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ಪ್ರಪ್ರಥಮ ಬಾರಿಗೆ ಮಸ್ಕಿ ನಗರದ ಸಿಂಧನೂರು-ಲಿಂಗಸುಗೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಪೊಲೀಸ್ ಠಾಣೆ ಹತ್ತಿರದ ಬಯಲು ಜಾಗದಲ್ಲಿ 45 ಅಡಿ ಎತ್ತರದ ಬೃಹತ್ ಶಿವಲಿಂಗವನ್ನು ಪ್ರದರ್ಶನಕ್ಕೆ ಏರ್ಪಡಿಸಲಾಗುವದು ಎಂದು ತಿಳಿಸಿದರು.
ಜಾತ್ರೆಗೆ ಬರುವ ಭಕ್ತರು ಶಿವಲಿಂಗ ದರ್ಶನ ಮಾಡಿ ಈಶ್ವರಿ ವಿಶ್ವವಿದ್ಯಾಲಯದಿಂದ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.