ಮಮತೆಯ ಮಡಿಲು
ಕರುಣೆಯ ಕಡಲು
ಒಲವಿನ ಒಡಲು
ಮಮತೆಯ ಮಡಿಲು
ತಾಯಿಯ ಭಾಗ್ಯದೊಡಲು||
ಸೌಖ್ಯದ ಸಿರಿಯು
ಶ್ರೀಗಂಧದ ಗಿರಿಯು
ಸೌಗಂಧದ ಪರಿಮಳದಿ
ಘಮ ಘಮಿಸುವ ಸುಮವು ||
ನೋವು ನಲಿವು ಜೊತೆಯಲಿ
ನಾರಿನಂತೆ ಹೂವಲಿ
ಬೆಸೆದು ಕೊಂಡ ಗಟ್ಟಿಬೇರು
ನನ್ನೊಲವಿನ ಜೀವವು ||
ಅತಃಕರಣ ಅರಿವಲಿ
ಮಮತೆ ಮಾತು ಬೆರೆಯಲಿ
ಕರಳು ಬಳ್ಳಿ ಕರೆಯಲಿ
ಒಲವು ತುಂಬಿ ಹರಿಯಲಿ ||
ದುಡಿದು ದುಡಿದು ದಣಿದ ಜೀವ
ನಗು ನಗುತ ಬಾಳಲಿ
ದಣಿವ ಮರೆವ ಧೈರ್ಯ ಬರಲಿ
ನಮಗೆಲ್ಲ ಕ್ಷಮೆಯು ಇರಲಿ
ವಿಜಯಮಹಾಂತನ ಕರುಣೆ ಇರಲಿ||
–ಸವಿತಾ ಎಮ್ ಮಾಟೂರು, ಇಲಕಲ್