ಡಾ.ಚನ್ನಬಸವಯ್ಯ ಹಿರೇಮಠರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ
e-ಸುದ್ದಿ, ಬೆಂಗಳೂರು
ಮಸ್ಕಿಯ ಡಾ.ಚನ್ನಬಸವಯ್ಯ ಹಿರೇಮಠ ಅವರಿಗೆ ೨೦೧೯ ನೇ ಸಾಲಿನ ಸಾಹಿತ್ಯ ಅಕಾಡೆಮಿ ಕೊಡಮಾಡುವ ಪುಸ್ತಕ ಬಹುಮಾನಕ್ಕೆ ಪುರಸ್ಕ್ರತರಾಗಿದ್ದಾರೆ ಎಂದು ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ ಹೇಳಿದ್ದಾರೆ.
೨೦೧೯ ನೇ ಸಾಲಿಗೆ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಪರಿಶೀಲಿಸಿ ಅದರಲ್ಲಿ ೧೮ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ. ಪ್ರತಿಯೊಬ್ಬ ಲೇಖಕರಿಗರ ೨೫ ಸಾವಿರ ರೂ. ಹಾಗೂ ಪ್ರಮಾಣ ಪತ್ರ ವಿತರಿಸುವದಾಗಿ ತಿಳಿಸಿದರು.
ಡಾ.ಚನ್ನಬಸವಯ್ಯ ಹಿರೇಮಠ ಅವರ ‘ ಅನಾವರಣ’ ಸಂಶೋಧನಾ ಕೃತಿಗೆ ಬಹುಮಾನ ಬಂದಿದೆ.
ಪರಿಚಯ : ಡಾ.ಚನ್ನಬಸವಯ್ಯ ಹಿರೇಮಠ ಮಸ್ಕಿ ಪಟ್ಟಣದವರು. ರಾಯಚೂರಿನ ತಾರನಾಥ ಶಿಕ್ಷಣ ಸಂಸ್ಥೆ ಯ ಎಲ್.ವಿ.ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ ಈಗ ಅದೇ ಸಂಸ್ಥೆ ಯ ಬಿ.ಆರ್.ಬಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಡಾ.ಎಂ.ಎಂ.ಕಲಬುರ್ಗಿ ಅವರ ಗರಡಿಯಲ್ಲಿ ಪಳಗಿದ ಡಾ.ಚನ್ನಬಸವಯ್ಯ ಹಿರೇಮಠ ಅವರು ಎಂ.ಎಂ.ಕಲಬುರ್ಗಿ ಅವರ ಮಾರ್ಗದರ್ಶನ ದಲ್ಲಿ ಅನೇಕ ಕೃತಿ ರಚಿಸಿದ್ದಾರೆ. ಕುರುಗೋಡು ಸಿಂಧರು ಪಿ.ಎಚ್.ಡಿ ಗ್ರಂಥಕ್ಕೆ ಡಾ.ಬಿ.ವಿ.ಶಿರೂರು ಮಾರ್ಗದರ್ಶಕರಾಗಿದ್ದರು. ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು ಮತ್ತು ಅನಾವರಣ ಎರಡು ಶ್ರೇಷ್ಟ ಕೃತಿಗಳಾಗಿವೆ.
ಸಂಶೋಧನಾ ಕೃತಿಗಳು :
೧) ಕುರುಗೋಡು ಸಿಂಧರು ಒಂದು ಅಧ್ಯಯನ
೨) ನಮ್ಮ ಜಿಲ್ಲೆ ಐತಿಹಾಸಿಕ ಪರಿಚಯ
೩) ಎಡದೊರೆ ನಾಡು
೪) ರಾಯಚೂರು ಜಿಲ್ಲೆಯ ಶರಣರು
೫) ಮಸ್ಕಿಯ ಶಾಸನಗಳು
೬) ಸತ್ಯದ ಹಾದಿ ಸಂಪುಟ – ೧
೭ )ಅಟ್ಟಳೆ ನಾಡಿನ ಸಿಂಧರು
೮) ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು
೯) ಅನಾವರಣ ( ಸಂಶೋಧನ ಲೇಖನಗಳು)
೧೦) ಕಲ್ಯಾಣ ಕರ್ನಾಟಕದ ಸಂಸ್ಕೃತಿ
ಸಂಪಾದಿತ ಕೃತಿಗಳು
೧) ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು
೨) ಮಾನ್ವಿ ತಾಲೂಕಿನ ಶಾಸನಗಳು
೩) ಪ್ರಿಯದರ್ಶಿ (ಇತರರೊಂದಿಗೆ)
೪) ಬಳಗಾನೂರು ಮರಿಸ್ವಾಮಿಗಳ ಸ್ವರವಚನಗಳು
೫) ವಿರಾಟ ಪರ್ವ ಸಂಗ್ರಹ
೬) ಶರಣಪಥ (ಇತರರೊಂದಿಗೆ)
ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಅಭಿನಂದನ ಗ್ರಂಥ
೭)ರಾಚುರು
೮)ನಡುಗನ್ನಡ ಕಾವ್ಯ (ಗು.ವಿ.ವಿ.ಪಠ್ಯ)
೯) ಹೈದ್ರಬಾದ ಕರ್ನಾಟಕ ಸಂಗೀತ ಪರಂಪರೆ (ಇತರರೊಂದಿಗೆ)
೧೦) ಹಳಗನ್ನಡ ಕಾವ್ಯ (ಗು.ವಿ.ವಿ.ಪಠ್ಯ)
೧೧) ಗಂಗರಾಸಿ
೧೨) ಕರ್ನಾಟಕ ಗ್ರಾಮ ಚರಿತ್ರೆ ಕೋಶ – ರಾಯಚೂರು ಜಿಲ್ಲೆ
೧೩) ವಚನ ಸಂಪಾದನೆ (ಗು.ವಿ.ವಿ. ಪಠ್ಯ)
೧೪) ಧರ್ಮಾಮೃತ ಸಂಗ್ರಹ (ಗು.ವಿ.ವಿ. ಪಠ್ಯ)
ಜೀವನ ಚರಿತ್ರೆ
೧) ಶಾಸ್ತ್ರೀ ಮಲ್ಲನಗೌಡ
೨) ಕಾವ್ಯನಂದ
ಹೀಗೆ ಒಟ್ಟು ೨೬ ಕೃತಿಗಳನ್ನು ಡಾ.ಚನ್ನಬಸವಯ್ಯ ಹಿರೇಮಠ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.ಅವರಿಂದ ಮತ್ತಷ್ಟು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಬರಲಿ ಎಂಬ ಸದಾಶಯ e-ಸುದ್ದಿ ತಂಡದ ಹಾರೈಕೆಯಾಗಿದೆ.