100 ನೇ ದಿನಕ್ಕೆ ಕಾಲಿಟ್ಟ 5 ಎ ಕಾಲುವೆ ಹೋರಾಟ
ಬಜೆಟ್‍ನಲ್ಲಿ 500 ಕೋಟಿ ಮೀಸಲಿಡಲು ಒತ್ತಾಯಿಸಿ ಹೊರಾಟಗಾರಿಂದ ಬೈಕ್ ರ್ಯಾಲಿ
e-ಸುದ್ದಿ ಮಸ್ಕಿ
ನಾರಯಣಪುರ ಬಲದಂಡೆ 5 ಎ ಕಾಲುವೆ ಯೋಜನೆ ಜಾರಿಗಾಗಿ ಸರ್ಕಾರ ಬಜೆಟ್‍ನಲ್ಲಿ 500 ಕೋಟಿ. ರೂ.ಮೀಸಲಿಡುವಂತೆ ಒತ್ತಾಯಿಸಿ ಹೋರಾಟ ಸಮಿತಿಯ ಮುಖಂಡರು ಶನಿವಾರ ಬೈಕ್ ರ್ಯಾಲಿ ನಡೆಸಿದರು.
ಯೋಜನೆಯನ್ನು ಜಾರಿಗೆ ಒತ್ತಾಯಿಸಿ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಶನಿವಾರ 100 ನೇ ದಿನಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಸ್ಥಳದಿಂದ ಪಟ್ಟಣದ ಬಸವೇಶ್ವರ ನಗರದ ತಹಸೀಲ್ ಕಚೇರಿ ವರಿಗೆ ಬೈಕ್ ರ್ಯಾಲಿ ನಡೆಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರು ಮಾತನಾಡಿ ಕಳೆದ 12 ವರ್ಷಗಳಿಂದ 5ಎ ಕಾಲುವೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ. ಕಳೆದ ಬಾರಿ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮಸ್ಕಿಗೆ ಆಗಮಿಸಿದಾಗ ನಮ್ಮ ಸರ್ಕಾರ ಬಂದರೆ 5 ಎ ಕಾಲುವೆ ಅನುಷ್ಠಾನಗೊಳಿಸುವದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಬಜೆಟ್‍ನಲ್ಲಿ 500 ಕೋಟಿ ಹಣ ಮೀಸಲಿಟ್ಟು ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರು ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಸಲ್ಲಿಸಿದರು. ನಾಗರಡ್ಡೆಪ್ಪ ದೇವರಮನಿ, ಚಂದ್ರಶೇಖರ ಕ್ಯಾತ್ನಟ್ಟಿ, ಜಿ.ಪಂ.ಮಾಜಿ ಸದಸ್ಯ ಎಚ್.ಬಿ.ಮುರಾರಿ, ಶಿವಕುಮಾರ ವಟಗಲ್ ಇದ್ದರು.