ಗಾಲಿಬ್‍ನ ‘ಗಜಲ್’ಗಳನ್ನು ಕನ್ನಡಕ್ಕೆ ತರುವಲ್ಲಿ ತಳವಾರ ಯಶಸ್ವಿಯಾಗಿದ್ದಾರೆ- ಅಬ್ದುಲ್ ರಬ್ ಉಸ್ತಾದ್

e-ಸುದ್ದಿ, ಕಲಬುರ್ಗಿ

ಅರಬ್ ಪದವಾದ ಗಜಲ್ ಸಾಹಿತ್ಯ ರೂಪವಾಗಿ ಬೆಳದದ್ದು ಪರ್ಷಿಯನ್ ಬಾಷೆಯಲ್ಲಿ. ಉತ್ತುಂಗಕ್ಕೇರಿದ್ದು ಮಾತ್ರ ಉರ್ದು ಭಾಷೆಯಲ್ಲಿ. ಈ ಗಜಲ್ ಕನ್ನಡದ ಜಾಯಮಾನಕ್ಕೆ ತರುವದು ಪ್ರಯಾಸದ ಕೆಲಸ. ಇದರಲ್ಲಿ ಡಾ.ಮಲ್ಲಿನಾಥ ಎಸ್.ತಳವಾರ ಯಶಸ್ವಿಯಾಗಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಬುರ್ಗಿಯ ಉರ್ದು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಅಬ್ದುಲ್ ರಬ್ ಉಸ್ತಾದ್ ಹೇಳಿದರು.
ಇತ್ತಿಚೀಗೆ ಕಲಬುರ್ಗಿಯಲ್ಲಿ ಡಾ.ಮಲ್ಲಿನಾಥ ಎಸ್.ತಳವಾರ ರಚಿಸಿದ “ಗಾಲಿಬ್ ಸ್ಮøತಿ” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಗಾಲಿಬ್ ಸ್ಮøತಿ ಕೇವಲ ಗಜಲ್ ಸಂಕಲನವಾಗಿರದೆ ಗಜಲ್ ಹೇಗೆ ಬರೆಯಬೇಕು ಎನ್ನುವ ಸಾಹಿತ್ಯಾಸಕ್ತರಿಗೆ ಇದೊಂದು ಆಕರ ಗ್ರಂಥವಾಗಿದೆ ಎಂದರು.
ಪ್ರಾದ್ಯಾಪಕ ಡಾ.ವಿಕ್ರಮ ವಿಸಾಜಿ ಮತಾನಾಡಿ ಗಜಲ್‍ನ ರೂಪ, ಲಕ್ಷಣ, ಸ್ವರೂಪ ಹಾಗೂ ವಿವಿದ ಪ್ರಕಾರಗಳನ್ನು ಉದಾಹರಣೆಯೊಂದಿಗೆ ತುಂಬಾ ಸರಳವಾಗಿ ವಿವರಿಸಿದ್ದಾರೆ. ಇದೊಂದು ಸಂಶೋಧನೆಯ ರೂಪದಲ್ಲಿ ಮೂಡಿ ಬಂದಿದೆ ಎಂದರು.
ಗಜಲ್ ಕಾವ್ಯ ನೇರವಾಗಿ ವಿಷಯವನ್ನು ಹೇಳದೆ ಅಂತರಂಗದ ವಿಷಯವನ್ನು ಒಳಗೊಂಡಿರುತ್ತದೆ. ಇದೊಂದು ಕರುಣ ರಸದ ಸಾಹಿತ್ಯ ಪ್ರಕಾರ, ಮುಗ್ದತೆ ಹಾಗೂ ಬದ್ದತೆ ಇರುವ ಕವಿಗೆ ಗಜಲ್ ಒಲಿಯುತ್ತದೆ ಎಂದು ವಿಕ್ರಮ ವಿಸಾಜಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಚಂದ್ರಕಾಂತ ಕೆಳಮನಿ ಮಾತನಾಡಿ ಕವಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ವೈದ್ಯರು ಎಂದು ಮೆಚ್ಚುಗೆ ಸೂಚಿಸಿದರು. ಅಧ್ಯಕ್ಷತೆಯನ್ನು ಬಿ.ಎಚ್.ನಿರುಗುಡಿ ವಹಿಸಿದ್ದರು. ಕೃತಿಕಾರ ಡಾ.ಮಲ್ಲಿನಾಥ ಎಸ್.ತಳವಾರ, ಪ್ರೋ.ಎಚ್.ಟಿ.ಪೋತೆ, ರಿಯಾಜ್ ಅಹ್ಮದ ಬೋಡೆ, ಮಹಿಪಾಲ ರಡ್ಡಿ ಮೂನ್ನೂರು, ಡಾ.ಭಗವಂತಪ್ಪ ಬುಳ್ಳಾ, ಪ್ರೋ.ಮಲ್ಲಪ್ಪ ಮಾನೆಗಾರ್, ಡಾ.ಸುರ್ಯಕಾಂತ್ ಸುಜ್ಯಾತ್, ಸುರೇಶ ಬಡಿಗೇರ, ಸಿದ್ದರಾಮ ಹೊನ್ಕಲ್, ಶಿವರಂಜನ್ ಸತ್ಯಂಪೇಟ್ ಹಾಗೂ ಇತರರು ಭಾಗವಹಿಸಿದ್ದರು.

Don`t copy text!