ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ – 17
ಸ್ಥಾವರಕ್ಕೆ ಅಳಿವುಂಟು
e-ಸುದ್ದಿ, ಮಸ್ಕಿ
ಇದೇ ಭಾನುವಾರ, ದಿನಾಂಕ 28 ಫೆಬ್ರವರಿ 2021 ಮುಂಜಾನೆ 11:25 ಕ್ಕೆ ಬಸವ ಅಂತಾರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಅಕ್ಕನ ಅರಿವು ಮತ್ತು ಬಸವಾದಿ ಶರಣರ ಚಿಂತನ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಸ್ಥಾವರಕ್ಕೆ ಅಳಿವುಂಟು ಎಂಬ ವಿಷಯದ ಮೇಲೆ ಸಾಮೂಹಿಕ ಸಂವಾದ ಇರುವುದು.
ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಶರಣಧರ್ಮದ ತತ್ವ ಸಿದ್ಧಾಂತ. *ಶರಣ ಜೀವನದಲ್ಲಿ ಲಿಂಗಪೂಜೆ ಮತ್ತು ಜಂಗಮ ಸೇವೆಯ ಚಿಂತನೆ, ಪ್ರಸ್ತುತತೆ ಮತ್ತು ನಿಷ್ಕರ್ಷೆ* ಈ ವಾರದ ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ – 17 ರ ಉದ್ದೇಶ.
ಕಾರ್ಯಕ್ರಮದಲ್ಲಿ ಡಾ. ಶಶಿಕಾಂತ್ ಪಟ್ಟಣರು ವಿಷಯ ಮಂಡಿಸಲಿದ್ದಾರೆ. ನಂತರ ವಿಷಯ ಮಂಡಿಸುವ ಸಹೃದಯರು ಒಂದು ಅಥವಾ ಎರಡು ವಚನಗಳನ್ನು ಆಯ್ದುಕೊಂಡು ಚಿಂತನೆ ನಡೆಸುವುದು ಅಥವಾ ಒಬ್ಬ ಶರಣರ ಅಥವಾ ವಚನಕಾರನ ಧೃಷ್ಟಿಯಲ್ಲಿ ಸ್ಥಾವರಕ್ಕೆ ಅಳಿವುಂಟು ಕುರಿತು ಚಿಂತನೆಯನ್ನು *3 ನಿಮಿಷಕ್ಕೆ ಮೀರದಂತೆ ಮಂಡಿಸಬೇಕೆಂದು ಕೋರಿಕೆ*. ವಿಷಯ ಮಂಡಿಸುವವರು ತಾವುಗಳು ಪ್ರಸ್ತಾಪಿಸ ಬಯಸುವ ವಿಷಯ (ವಚನ / ಶರಣ / ವಚನಕಾರರ ವಿಶೇಷ) ಕುರಿತು ಸಂಯೋಜಕರಲ್ಲಿ ಮುಂಚಿತಾಗಿ ತಿಳಿಸಿದರೆ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಲು ಸಹಕಾರಿಯಾಗುತ್ತದೆ. ಎಂದಿನಂತೆ ಚಿಂತಕರಿಂದ ವಿಷಯ ಮಂಡನೆ ನಂತರ ಸರ್ವರಿಗೂ ಪ್ರಶ್ನೋತ್ತರ ಸಂವಾದದಲ್ಲಿ ಅವಕಾಶವಿರುತ್ತದೆ. ವಚನ ಸಾಹಿತ್ಯಾಸಕ್ತರು ಹೆಚ್ಚಿನ ಅಧ್ಯಯನದಿಂದ ಪಾಲ್ಗೊಳ್ಳಲು ವಿನಂತಿ.
ಕಾರ್ಯಕ್ರಮದಲ್ಲಿ *ಎಲ್ಲರೂ ತಮ್ಮ mike ಅನ್ನು mute ಮಾಡಿರಬೇಕು* ಅವಕಾಶ ಸಿಕ್ಕಾಗ ಮಾತ್ರ unmute ಮಾಡಿಕೊಂಡು ಮಾತನಾಡಬೇಕು. *ಯಾರೂ slide share ಮಾಡಬಾರದು.* ತಮ್ಮೆಲ್ಲರ ಪ್ರೋತ್ಸಹ ಸಹಕಾರವಿದ್ದರೆ ಇಂತಹ ಅನೇಕ ಮೌಲ್ಯಯುತ ಚಿಂತನೆಗಳ Google Meet ಅನ್ನು ಆಯೋಜಿಸಬಹುದು.
ಸಂಯೋಜಕರು : ಡಾ. ಶಶಿಕಾಂತ ಪಟ್ಟಣ
ರುದ್ರಮೂರ್ತಿ ಪ್ರಭು
*ದಿನಾಂಕ – 28 ಫೆಬ್ರವರಿ 2021, ರವಿವಾರ*
*ಸಮಯ – ಬೆಳಗ್ಗೆ11:25 ರಿಂದ ಮಧ್ಯಾಹ್ನ 1:00 ಘಂಟೆ*
*ಲಿಂಕ್ – https://meet.google.com/fbg-czus-fyc*
*Meeting Code – fbg – czus – fyc*
*ದಯವಿಟ್ಟು ಆಸಕ್ತ ಸಹೃದಯರೊಂದಿಗೆ ಹಂಚಿಕೊಳ್ಳಿ, ಪಾಲ್ಗೊಳ್ಳಲ್ಲು ಸಹಕರಿಸಿ🙏*