ನೂರು ಆಸೆ
ಕಾರ್ಮೋಡದ
ಅಲೆಯಲ್ಲಿ
ತೇಲುವಾಸೆ..
ಸೋನೆ ಮಳೆಯ
ಹನಿಗಳಲಿ
ನವಿಲಿನಂತೆ
ಕುಣಿದಾಡುವಾಸೆ.
ರೆಕ್ಕೆ ಬಿಚ್ಚಿ
ನೀಲಿ ಗಗನಕೆ
ಹಾರುವಾಸೆ
.ವರ್ಷಧಾರೆಯನು
ಕಣ್ತುಂಬಿ
ಕೊಳ್ಳುವಾಸೆ..
ಪದ ಶಬ್ದ ಜೋಡಿಸಿ
ನಿನ್ನ ಕವನಕೆ
ಮರು ಕವನವ
ಬರೆಯುವಾಸೆ..
ನಿನ್ನ ನಗೆಯ
ತುಟಿ ಅಂಚಿನಲಿ
ಸವಿ ಜೇನು
ಸವಿಯುವಾಸೆ
ಅಚ್ಚ ಹಸಿರು
ಕಾಡು ಮೇಡು
ಮರದ ಪೋದರಲಿ
ಬಾಳುವಾಸೆ
ಆಸೆ ನಿತ್ಯ ನೂರು ಆಸೆ
ನಿನ್ನ ಜೊತೆ ಹೆಜ್ಜೆ
ಹಾಕುತ
–ರೇಖಾ ಅಶೋಕ ಎಚ್ಚ, ಹರಮಘಟ್ಟ
—————————————————————————