ಬಸವ ಧರ್ಮ ಹೇಗೆ ಸ್ವತಂತ್ರ ಧರ್ಮ

ಬಸವ ಧರ್ಮ ಹೇಗೆ ಸ್ವತಂತ್ರ ಧರ್ಮ

ಮಹಾತ್ಮಾ ಬುದ್ಧನ ನಂತರ ಸುಮಾರು 1700 ವರುಷಗಳ ನಂತರ ಭಾರತದಲ್ಲಿ 12 ನೇ ಶತಮಾನದಲ್ಲಿ ಶ್ರೇಷ್ಠ ಸಮಾಜ ಸುಧಾರಕ ಮತ್ತು ಸರ್ವೋಚ್ಚ ಹೊಸ ಮಾರ್ಗದ ಸ್ಥಾಪಕ – ‘ಬಸವಣ್ಣ’ ಇವರ ನಾಯಕತ್ವದಲ್ಲಿ ಸಾರ್ವಕಾಲಿಕ ಸಮಾನತೆ ಸಮತೆ ಸಹಬಾಳ್ವೆ ಕಾಯಕ ದಾಸೋಹ ಸಿದ್ಧಾಂತದ ಅಡಿಯಲ್ಲಿ ಒಂದು ಹೊಸ ಸಂಘರ್ಷ ಮತ್ತು ಕ್ರಾಂತಿಯ ಮೊಳಕೆ ಒಡೆಯಿತು. ಜಾಗವು ಕಂಡರಿಯದ ಮುಕ್ತತೆ ಸ್ವಾತಂತ್ರದ ಪರಿಕಲ್ಪನೆಯನ್ನು ಬಸವಣ್ಣ ಜಗತ್ತಿಗೆ ನೀಡಿದನು.

ಬಸವಣ್ಣ ಕೇವಲ ಎಲ್ಲೋ ಒಂದು ಕೋಣೆಯಲ್ಲಿ ಕುಳಿತು ಗ್ರಂಥ ಬರೆದು ಕಾರ್ಮಿಕರ ಶ್ರಮಿಕರ ದಲಿತರ ಪರ ಧ್ವನಿ ಎತ್ತಲಿಲ್ಲ . ಹರಳಯ್ಯ ಚೆನ್ನಯ್ಯ ಕಕ್ಕಯ್ಯ ಮುಂತಾದ ಅಸ್ಪ್ರಶ್ಯರ ಜೊತೆಗೆ ಅಂದಿನ ಸವರ್ಣಿಯರ ಕರ್ಮ ಕಾಂಡದ ವಿರುದ್ಧ ಸಿಡಿದೆದ್ದ .
ಬಸವಣ್ಣ ಮೂಲತಃ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದರೂ ಬಾಲ್ಯದಲ್ಲಿನ ಮನೆಯಲ್ಲಿನ ಹಲವು ಆಚರಣೆ ವಿಚಾರಗಳಿಗೆ ಬೇಸತ್ತಿದ್ದನು.ಸಮತೆಯ ಕ್ರಾಂತಿಯ ಕನಸು ಕಾಣ ಹತ್ತಿದನು.
ಬಾಲ್ಯದಲ್ಲಿ ಬಸವಣ್ಣನವರಿಗೆ ಉಪನಯನ ಎಂಬ ಧಾರ್ಮಿಕ ಸಂಸ್ಕಾರವನ್ನು ಕೊಡಲು ಅಗ್ರಹಾರದ ಬ್ರಾಹ್ಮಣರು ಮುಂದೆ ಬಂದಾಗ ಅದನ್ನು ಪ್ರಶ್ನಿಸಿ ನನಗಿಂತ ಮುಂಚೆ ಹುಟ್ಟಿದ ಅಕ್ಕ ನಾಗಮ್ಮನಿಗೆ ಏಕೆ ಜನಿವಾರವಿಲ್ಲ ? ಮನೆಯಲ್ಲಿ ಕೊಟ್ಟಿಗೆ ಹಸನುಗೊಳಿಸುವ ಹೊಲೆಯನಿಗೇಕೆ ಇಲ್ಲ ಉಪನಯನ ಎಂಬ ಪ್ರಶ್ನೆಯಿಂದ ಅಂದಿನ ಸವರ್ಣಿಯರನ್ನು ಚಕಿತಗೊಳಿಸಿದ ಬಸವಣ್ಣ.

ಬಸವಣ್ಣ ಒಬ್ಬ ಹುಟ್ಟು ಹೋರಾಟಗಾರ ಕ್ರಾಂತಿಯ ಕಿಡಿ ಬಂಡಾಯಗಾರ ಸಮಾಜದಲ್ಲಿನ ಸಮಸ್ತ ಪರಿವರ್ತನೆಯ ಕನಸು ಕಂಡವನು.
ಅಂದಿನ ವರ್ಗ ವರ್ಣ ಲಿಂಗ ಭೇದ ಆಶ್ರಮಗಳ ಕರ್ಮಠಗಳ ವಿರುದ್ಧ ಬಸವಣ್ಣನಷ್ಟು ಭಾರತದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಿದವರು ಇನ್ನೊಬ್ಬರಿಲ್ಲ. ಭಾರತೀಯ ಸನಾತನ ವ್ಯವಸ್ಥೆಗೆ ಪರ್ಯಾಯವಾದ ವ್ಯವಸ್ಥೆಯನ್ನು ಬಸವಣ್ಣ ಕಲ್ಪಿಸಿದನು. ಬಸವ ಧರ್ಮ ಬಸವಣ್ಣ ಮತ್ತು ಆತನ ಶರಣರ ಸಿದ್ಧಾಂತಗಳ ಮೇಲೆ ಕರೆಯಲ್ಪಟ್ಟ ಶ್ರೇಷ್ಠ ಧರ್ಮ

ಬಸವ ಧರ್ಮವು ‘ಕಾಯಕ’ ಮತ್ತು ‘ದಾಸೋಹ’ದ *collection of wealth and Distribution of wealth* ಎಂಬ ಎರಡು ಮೂಲಭೂತ ತತ್ವಗಳ ಬಲವಾದ ಹೆಜ್ಜೆಯ ಮೇಲೆ ನಿಂತಿದೆ.

ವಯಸ್ಸು, ಲಿಂಗ, ಜಾತಿ, ರಾಷ್ಟ್ರೀಯತೆ ಅಥವಾ ವೃತ್ತಿಯನ್ನು ಲೆಕ್ಕಿಸದೆ ಯಾರಾದರೂ ಬಸವ ಧರ್ಮಕ್ಕೆ ಹೋಗಬಹುದು. ಗುರು (ಅರಿವು) ಅವರು’ ದೀಕ್ಷಾ ‘ಮೂಲಕ ಒಬ್ಬ ಮನುಷ್ಯ ‘ಇಷ್ಟ-ಲಿಂಗ’.ಆಚಾರ ಮತ್ತು ಅನುಭವದ ಜಂಗಮದ ಜೊತೆಗೆ
ಸರ್ವಶಕ್ತನೊಡನೆ ಒಂದಾಗಲು ಅವಕಾಶವಿದೆ , ಬಸವ ಧರ್ಮ ಅನುಯಾಯಿ ಮೂರು ಮೂಲಭೂತ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಬೆಳೆಸಬೇಕು.
*1. ಅಷ್ಟಾವರಣ -*

ಎಂಟು ಗುಣಗಳು: ಗುರು, ಲಿಂಗ, ಜಂಗಮ , ಪಾದೋದಕ , ಪ್ರಸಾದ, ಮಂತ್ರ, ವಿಭೂತಿ ಮತ್ತು ರುದ್ರಾಕ್ಷಿ ಇಂತಹ ಬಾಹ್ಯ ಲಾಂಛನಗಳು ಅರುವಿನ ಅನು ಸಂಧಾನಕ್ಕೆ ಕಾಯಗುಣಗಳಲ್ಲಿ ಪಂಚ ಮಹಾಭೂತದಲ್ಲಿ ಕಾಣುವ ಎಂಟು ತತ್ವಗಳು . ಸೃಷ್ಟಿಯಲ್ಲಿನ ನೀರು ಗಲಿ ಅಗ್ನಿ ಅಪು ಪೃಥ್ವಿ ಹೀಗೆ ಪಂಚ ಮಹಾಭೂತಗಳ ತತ್ವಗಳನ್ನು ಕಾಯಗುಣದಲ್ಲಿ ಬಸವಣ್ಣ ಕಂಡನು. ಅವು ಕೇವಲ ಪೂಜೆಗೆ ಸೀಮಿತವಾದ ಕಾಲವಾಗಿತ್ತು

*2. ಪಂಚಾಚಾರ*
ಐದು ಆಚರಣೆಗಳು: ಲಿಂಗಾಚರ, ಶಿವಾಚಾರ ಸದಾಚಾರ, ಭೃತ್ಯಾಚರ, ಗಣಾಚಾರ
ಸಮಾಜದಲ್ಲಿನ ಮನುಷ್ಯ ಸಂಬಂಧಕ್ಕಾಗಿ ತಾನು ಅಳವಡಿಸಿಕೊಳ್ಳಬೇಕಾದ ಹಲವು ಕಟ್ಟು ನೀಟಾದ ಮತ್ತು ಕಡ್ಡಾಯವಾದ ಆಚರಣೆಗಳನ್ನು ಕ್ರಿಯಾ ಸೂತ್ರಗಳನ್ನು ಬಸವಣ್ಣನವರು ಕಂಡುಕೊಂಡರು.

3. *ಷಟಸ್ಥಲಗಳು*
ಆರು ವಿಕಾಸದ ಹಂತಗಳು- :-ಭಕ್ತ ಸ್ಥಲ, ಮಹೇಶ್ವರಸ್ಥಲ ಪ್ರಸಾದಸ್ಥಲ, ಪ್ರಾಣಲಿಂಗಿಸ್ಥಲ, ಶರಣಸ್ಥಲ, ಮತ್ತು ಐಕ್ಯಸ್ಥಲ ಶರಣರು ಜಗತ್ತಿಗೆ ಕೊಟ್ಟ ಅತ್ಯಂತ ವಿಭಿನ್ನ ಮತ್ತು ವಿರಳವಾದ ಅನರ್ಘ್ಯ ಮೌಲ್ಯಯುತವಾದ ಸಿದ್ಧಾಂತವೆ ಷಟಸ್ಥಲ ಸಿದ್ಧಾಂತವು ,ಭಕ್ತನ ಪರಿಪೂರ್ಣತೆಯ ವಿವಿಧ ವಿಕಾಸದ ಹಂತಗಳನ್ನು ಅದರ ಜೊತೆಗೆ ಭಕ್ತ ಜವಾಬ್ದಾರಿಯನ್ನು ಹೆಚ್ಚಿಸುವ

ಮೇಲೆ ಹೇಳಿದ ಸದ್ಗುಣಗಳು ಅನುಸರಿಸಲು ಮತ್ತು ಅಭ್ಯಾಸ ಮಾಡಲು ಸರಳವಾಗಿವೆ ಮತ್ತು ವೈಯಕ್ತಿಕ ಮತ್ತು ಸಾರ್ವತ್ರಿಕ ಶಾಂತಿ ಮತ್ತು ನೆಮ್ಮದಿಯ ಕಡೆಗೆ ನಡೆಯುವ ಅಧ್ಯಾತ್ಮದ
ಪಯಣಕ್ಕೆ ಒಳ್ಳೆಯದು.

*ಸ್ತ್ರೀ ಸಮಾನತೆ*

ಬಸವ ಧರ್ಮವು ಮಹಿಳೆಯರಿಗೆ ಪುರುಷರೊಂದಿಗೆ ಸಮಾನ ಸ್ಥಾನಮಾನವನ್ನು ನೀಡುತ್ತದೆ. ಆದ್ದರಿಂದ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಲಿಂಗ ಭೇದವನ್ನು ನಿಲ್ಲಿಸಲಾಯಿತು. ಆದ್ದರಿಂದ ವಚನಗಳ ನಲವತ್ತು ಲೇಖಕಿಯರು ಬಸವ, ಚೆನ್ನಬಸವ, ಅಲ್ಲಮ ಪ್ರಭು ಮತ್ತು ಸಿದ್ಧರಮರಂತಹ ಸಂತರೊಂದಿಗೆ ಧಾರ್ಮಿಕ ಸಿದ್ಧಾಂತಗಳನ್ನು ಚರ್ಚಿಸಿದರು.
ಬಸವ ಧರ್ಮವು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳನ್ನು ಆಚರಿಸುತ್ತದೆ – ಸಾಮಾಜಿಕ ಸಮಾನತೆ ಮತ್ತು ಸಾರ್ವತ್ರಿಕ ಸಹೋದರತ್ವ. ಇಂದಿನ ಅಸಂಖ್ಯಾತ ಸಾಮಾಜಿಕ ವಿಜ್ಞಾನಿಗಳು ಬೋಧಿಸಿದ ಅದೇ ಸಿದ್ಧಾಂತಗಳು.

-ಡಾ.ಶಶಿಕಾಂತ್ ಪಟ್ಟಣ ಪೂನಾ
ರಾಮದುರ್ಗ
9552002338


ಇಂದಿನ ಎಲ್ಲಾ ಪ್ರಕಟನೆಗಳ ಪ್ರಾಯೋಜಕರು

ಬಸವ ಮಂದಾರ ಮೆಡಿಕಲ್ & ಜನರಲ್ ಸ್ಟೋರ್, ಮಸ್ಕಿ

Don`t copy text!