e-ಸುದ್ದಿ, ಮಸ್ಕಿ
ಪಟ್ಟನದಲ್ಲಿ ಹೆಚ್ಚುತ್ತಿರುವ ವಿದ್ಯಾವಂತರು, ಪದವಿ ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹೈಟೆಕ್ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರ ನಿರ್ಮಿಸಿ ಒಂದು ವರ್ಷವೇ ಗತಿಸಿದರೂ ಉದ್ಘಾಟನೆಯ ಭಾಗ್ಯ ಲಭಿಸಿಲ್ಲ. ಇಂದು ನಾಳೆ ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿಕೊಂಡು ಗ್ರಂಥಾಲಯ ಇಲಾಖೆಯವರು ಕಾಲಹರಣ ಮಾಡುತ್ತಿದ್ದಾರೆ.
ಪಟ್ಟಣದ ಬಸವೇಶ್ವರ ನಗರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅಡಿಯಲ್ಲಿ 2016-17 ನೇ ಸಾಲಿನಲ್ಲಿ ಮೈಕ್ರೋ ಯೋಜನೆಯಡಿ ಸುಮಾರು 74 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಅದಕ್ಕೆ ಬೇಕಾದ ಪೀಠೋಪಕರಣ ಹಾಗೂ ಪುಸ್ತಕಗಳನ್ನು ಪೂರೈಸದೇ ಇರುವುದರಿಂದ ಗ್ರಂಥಾಲಯ ಇದ್ದರೂ ಇಲ್ಲದಂತಾಗಿದೆ.
ಪೂರೈಕೆಯಾಗದ ಪುಸ್ತಕ: ಹೈಟೆಕ್ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸುಮಾರು ಒಂದು ವರ್ಷ ವಾಗುತ್ತಿದೆ. ಆದರೆ ಗ್ರಂಥಾಲಯಕ್ಕೆ ಇವರೆಗೂ ಒಂದು ಪುಸ್ತಕ ಸೇರಿದಂತೆ ಯಾವುದೇ ಪಿಠೋಪಕರಣಗೂ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ.
ಸೌಲಭ್ಯ: ಹೈಟೆಕ್ ಗ್ರಂಥಾಲಯದಲ್ಲಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ವಾಚಕ ವಿಭಾಗಳು ಇವೆ. ವಿದ್ಯಾರ್ಥಿಗಳಿಗಾಗಿ ಹಾಗೂ ಉದ್ಯೋಗ ಪಡೆಯುವವರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷವಾದ ಪುಸ್ತಕಗಳು ಲಭ್ಯ ಇವೆ. ಕಂಪ್ಯೂಟರ್ ಮೂಲಕ ಇ ಲೈಬ್ರರಿ ಇದ್ದು ಇದರ ಉಪಯೋಗ ಕೂಡ ಇಲ್ಲದಂತಾಗಿದೆ.
ಕೂಡಲೇ ಗ್ರಂಥಾಲಯಕ್ಕೆ ಬೇಕಾದ ಪಿಠೋಪಕರಣ ಹಾಗೂ ಪುಸ್ತಕಗಳನ್ನು ಒದಗಿಸಿ ಒದುಗರಿಗೆ ಅನೂಕೂಲ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
——————————–
ಮಸ್ಕಿ ಪಟ್ಟಣದಲ್ಲಿ ಬಸವೇಶ್ವರ ನಗರದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಗ್ರಂಥಾಲಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಆದಷ್ಟು ಬೇಗನೆ ಆರಂಭಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನೂಕೂಲವಾಗುತ್ತದೆ.
– ಸಯ್ಯದ್ ರಸೂಲ್ ವಿದ್ಯಾರ್ಥಿ ಮಸ್ಕಿ.
—————————
ಮಸ್ಕಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಂಥಾಲಯಕ್ಕೆ ಬೇಕಾದ ಪಿಠೋಪಕರಣಗಳ ಖರೀದಿಗಾಗಿ ಅನುಧಾನ ಬಿಡುಗಡೆಯಾಗಿದ್ದು, ಪಿಠೋಪಕರಣ ಪೂರೈಕೆ ಆದ ಕೂಡಲೇ ಆರಂಭಿಸಲಾಗುವುದು.
-ಎಂ.ಎಸ್.ರೆಬಿನಾಳ್.ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ. ರಾಯಚೂರು.