ಲಿಂಗಾಯತ ಧರ್ಮ- ನಡೆದು ಬಂದು ದಾರಿ,
ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನವು ಸುವರ್ಣ ಯುಗವೆಂದೇ ಹೇಳಬೇಕು. ಬಸವಣ್ಣನವರ ನೇತೃತ್ವದಲ್ಲಿ ನೆಲದ ಮಣ್ಣಿನ ಗುಣಕ್ಕನುಗುಣವಾಗಿ ಅತ್ಯಂತ ಸರಳ ಸಹಜ ಮತ್ತು ಕೆಳಸ್ತವರಿಂದ ಸ್ಥಾಪಿಸಲ್ಪಟ್ಟ ಕನ್ನಡಿಗರ ಮೊಟ್ಟ ಮೊದಲನೆಯ ಧರ್ಮ .
ಬಸವಣ್ಣನವರು ಈ ಧರ್ಮದ ಸಂಸ್ಥಾಪಕರು. ಕಾಲ 12 ನೇ ಶತಮಾನ .
ಲಿಂಗಾಯತ ಧರ್ಮದ ಲಕ್ಷಣಗಳು.
1) ಲಿಂಗಾಯತ ಧರ್ಮವು ವ್ಯಕ್ತಿ ಕೇಂದ್ರಿತ ಚೈತನ್ಯ ಭಾವವನ್ನು ಗುರುತಿಸಿ ಸೃಷ್ಟಿಯಲ್ಲಿನ ಸಕಲ ಚರಾಚರ ಜೀವಿ ,ಸಕಳ, ನಿಷ್ಕಳ ಹೊಂದಿದ ಭೂಮಿಯನ್ನು ಪ್ರೀತಿಸುವ ಒಂದು ಸುಂದರ ವ್ಯವಸ್ಥೆ.
2) ಇಷ್ಟಲಿಂಗವು ಸಮಗ್ರ ಸೃಷ್ಟಿಯ ಸಂಕೇತ ,ಇದು ವ್ಯಕ್ತಿಯ ಚೈತನ್ಯದ ಚಿತ್ಕಳೆಯ ಸಂಕೇತವೂ ಹೌದು
3) ಲಿಂಗಾಯತ ಧರ್ಮದಲ್ಲಿ ಮಧ್ಯವರ್ತಿಗಳ ,ಪೂಜಾರಿಗಳ ,ಧರ್ಮದರ್ಶಿಗಳ, ಪಾದ್ರಿಗಳ ,ಮೌಲ್ವಿಗಳ ಪುರೋಹಿತರ ಶೋಷಣೆಗೆ ಅವಕಾಶವಿಲ್ಲ .
4) ಹೆಣ್ಣು ,ಗಂಡು ,ಮಕ್ಕಳು ,ಮುದುಕರು ಯಾರು ಬೇಕಾದರೂ ಲಿಂಗಾಯತ ಧರ್ಮಪಾಲಿಸಬಹುದು
5) ಅಷ್ಟಾವರಣ ಪಂಚಾಚಾರ ಷಟ್ಸ್ಥಲ ಲಿಂಗಾಯತರ ಅಂಗ ಪ್ರಾಣ ಆತ್ಮಗಳು.
6) ಕಾಯಕ ದಾಸೋಹ ಅತ್ಯಂತ ಕಡ್ಡಾಯ ಮತ್ತು ಅಗತ್ಯವಾದ ಅನುಕ್ರಮಗಳು.
7) ಗುಡಿ ಗುಂಡಾರ ಮಠ ಆಶ್ರಮಗಳು ಸ್ಥಾವರಗಳ ಆರಾಧನೆ ಲಿಂಗಾಯತ ಧರ್ಮಕ್ಕೆ ದ್ರೋಹ ಅಪಚಾರವೂ ಹೌದು.
8) ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ -ಆಸ್ತಿಕ ನಾಸ್ತಿಕ ಭಾವದ ಮಧ್ಯದ ಹೊಸ ಕಲ್ಪನೆ ಲಿಂಗಾಯತ ಧರ್ಮವು .
9) ನಿರಾಕಾರ ನಿರ್ಗುಣ ದೈವತ್ವವನ್ನು ಕಾಯ ಗುಣದಲ್ಲಿ ಸಾಕಾರವಾಗಿ ನೋಡುವುದೆ ಲಿಂಗಾಯತ ಧರ್ಮವು.
10) ಮೌಢ್ಯತನ ಕಂದಾಚಾರ ಹವನ ಹೋಮ ಪ್ರಾಣಿ ಬಲಿ ಶಿಶು ಬಲಿ ಸ್ತ್ರೀ ಬಲಿಗಳಂತಹ ಕ್ರೂರ ಆಚರಣೆಗೆ ಅವಕಾಶವಿಲ್ಲ.
11) ವೇದ ಶಾಸ್ತ್ರ ಆಗಮ ಪುರಾಣಗಳನ್ನು ನಂಬಿದ ಕಲ್ಪನೆ ಭ್ರಮೆಯಲ್ಲಿರುವ ಸಿದ್ಧಾಂತಗಳನ್ನು ಧಿಕ್ಕರಿಸಿ ಮನುಷ್ಯಗುಣವಾದ ತರ್ಕ ಸತ್ಯ ನ್ಯಾಯಯುತ ಸಹಜ ಧರ್ಮವೇ ಲಿಂಗಾಯತ ಧರ್ಮ
12)ಲಿಂಗಾಯತ ಧರ್ಮವು ಪ್ರಾಪಂಚಿಕರ ಸಂಸಾರವಂತರ ಧರ್ಮವು. ಇಲ್ಲಿ ಸನ್ಯಾಸಿನಿ, ಮದುವೆ ಆಗದೆ ಇರುವವರಿಗೆ ಅವಕಾಶವಿಲ್ಲ,
13) ಧರ್ಮ ಬೋಧನೆಗೆ ಬೇಕಾದ ಅನುಭವದ ಅಮೃತ ನುಡಿಗಳಾದ ವಚನಗಳೆ ನಮ್ಮ ಧರ್ಮ ಗ್ರಂಥವು.( ಯಾರು ಧರ್ಮ ಗ್ರಂಥ ಬರೆಯುವ ಹಾಗಿಲ್ಲ)
14) ನಡೆ ನುಡಿಯಲ್ಲಿ ಸಮನ್ವಯತೆ ,ಸತ್ಯ ಶುದ್ಧ ಕಾಯಕ ,ಸಾಧ್ಭಾವನೆ ಶಾಂತಿ ವಿಶ್ವ ಪ್ರೀತಿ ನಮ್ಮ ಧರ್ಮದ ಧ್ಯೇಯಗಳು .
15) ಭಕ್ತ ಲಿಂಗಾಯತ ಧರ್ಮದ ಮಾಲೀಕ ಒಡೆಯ ಅನ್ಯ ಧರ್ಮಿಯರಂತೆ ಭಕ್ತ ಸೇವಕನಲ್ಲ. ಇದು ಶ್ರೇಣೀಕೃತ ಆಚರಣೆಯಲ್ಲ.
16) ಸಾರ್ವಕಾಲಿಕ ಸಮಾನತೆ ಭ್ರಾತೃತ್ವವನ್ನು ಸಾಧಿಸುವುದು , ಪಶು ಪಕ್ಷಿ ಪ್ರಾಣಿಗಳನ್ನು ತಮ್ಮಂತೆ ಪ್ರೀತಿಸಿ ಜೈವಿಕ ವಿಕಾಸದ ಅಭಿವೃದ್ಧಿಯ ಬಯಸುವುದು ಲಿಂಗಾಯತ ಧರ್ಮದ ಆದ್ಯ ಕರ್ತವ್ಯವು ಕೂಡ.
17) ಲಿಂಗಾಯತ ಧರ್ಮವು ಅತ್ಯಂತ ವೈಜ್ಞಾನಿಕ ವೈಚಾರಿಕ ತರ್ಕಬದ್ಧವಾದ ಸತ್ಯದ ಶೋಧನೆ.
18) ಲಿಂಗಾಯತ ಧರ್ಮದಲ್ಲಿ ದೇವರನ್ನು ಹೊರಗೆ ಹುಡುಕುವ ಹಾಗಿಲ್ಲ.ತನ್ನೊಳಗಿನ ಅಂತರಂಗದಲ್ಲಿ ನೋಡುವುದು.
19) ಗುರು ಲಿಂಗ ಜಂಗಮಗಳು ಕಾಯ ಗುಣ . ಗುರುವು ವ್ಯಕ್ತಿಯಲ್ಲ ,ಲಿಂಗ ವಸ್ತುವಲ್ಲ ಜಂಗಮವು ಜಾತಿಯಲ್ಲ.
20) ಯಾವುದೇ ರಾಜಾಶ್ರಯ ವಂತಿಕೆ ಹಣ ದಾನದಿಂದ ಬೆಳೆದ ಧರ್ಮಾವಲ್ಲ ಲಿಂಗಾಯತ ಧರ್ಮವು.
21) ಲೋಕ ವಿರೋಧಿತನ ನ್ಯಾಯ ನಿಷ್ಟುರತೆ ಗಣಾಚಾರವು ಧರ್ಮದ ಮೂಲ ಗುಣ ಧರ್ಮವಾಗಿದೆ.
22) ಮಾನವ ಕಲ್ಯಾಣಕ್ಕೆ ಲೋಕ ಕಲ್ಯಾಣಕ್ಕೆ ಸಾಧಕ ಬಾಧಕ ವಿಷಯಗಳ ಚರ್ಚೆಗೆ ಜಗತ್ತಿನ ಮೊದಲ ಪ್ರಜಾಸತ್ತಾತ್ಮಕವಾದ ಅನುಭವ ಮಂಟಪ ಸಂಸತ್ತನ್ನು ನಿರ್ಮಿಸಿ ತನ್ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಜಗತ್ತಿನ ಏಕ ಮೇವ ಧರ್ಮ ಲಿಂಗಾಯತ ಧರ್ಮವು.
ಇಂತಹ ಅತ್ಯಂತ ವೈಚಾರಿಕ ಧರ್ಮವು ( rationalism ) ಶರಣರಿಂದ ಸ್ಥಾಪಿಸಲ್ಪಟ್ಟು ಜಗತ್ತಿನ ಮೊದಲ ಸಮಾಜವಾದಿಗಳಾದರು ಶರಣರು. ಲಿಂಗಾಯತ ಧರ್ಮದಲ್ಲಿ ಜಾತಿಗಳಿಲ್ಲ ಆದರೆ ಕಸಬು ಉದ್ಯೋಗಗಳಿವೆ. ಯಾವುದೇ ಶ್ರೇಣೀಕೃತವಲ್ಲದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕಲ್ಪಿಸಿದ ಶ್ರೇಷ್ಠ ಧರ್ಮ,. ಲಿಂಗಾಯತ ಧರ್ಮವು ನೈಜ ಬದುಕಿನ ಸರಳ ಮಾರ್ಗ.
–ಡಾ.ಶಶಿಕಾಂತ.ಪಟ್ಟಣ.ಪೂನಾ ರಾಮದುರ್ಗ
—————————————————————————-ಇಂದಿನ ಸಂಚಿಕೆಯ ಪ್ರಾಯೋಜಕರು
ಬಸವ ಮಂದಾರ ಮೆಡಿಕಲ್ ಜನರಲ್ ಸ್ಟೋರ್, ಮಸ್ಕಿ