ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡರಿಂದ ಅಭಿವೃದ್ಧಿ -ಸಂಸದ ಸಂಗಣ್ಣ ಕರಡಿ

e-ಸುದ್ದಿ, ಮಸ್ಕಿ
ತಾಲೂಕಿನಲ್ಲಿ ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಪ್ರತಾಪಗೌಡ ಪಾಟೀಲ್‍ರ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಕನ್ನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಪಂಡೆಕ್ಸ್ ಇ ಯೋಜನೆಯಡಿಯಲ್ಲಿ 6 ಕೋಟಿ ವೆಚ್ಚದ ಮುದುಗಲ್ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೀರೆ ಹಳ್ಳದ ಸೇತುವೆ ಕಾಮಗಾರಿ ಹಾಗೂ ತಿಮ್ಮಾಪೂರು ಗ್ರಾಮದಲ್ಲಿ 30 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಾಗಾರಿ ಸೇರಿದಂತೆ ಸುಮಾರು 6.55 ಕೋಟಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರತಾಪಗೌಡ ಪಾಟೀಲ್ ಮಾಡುವ ಮೂಲಕ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಂದು ಸಮುದಾಯವನ್ನು ಸರ್ವ ಸಮನಾಗಿ ಪರಿಗಣಿಸಿ ಎಲ್ಲಾ ಸಮುದಾಯಗಳಿಗೆ ಅನುದಾನ ನಿಡುವ ಮೂಲಕ ಎಲ್ಲಾ ಸಮುದಾಯಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.


ಮುಂಬರುವ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಪ್ರತಾಪಗೌಡರನ್ನು ಆಯ್ಕೆ ಮಾಡಿ ಕಳಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈ ಬಲಪಡಿಸುವ ಜತೆಗೆ ಪ್ರತಾಪಗೌಡ ಪಾಟೀಲ ಮಂತ್ರಿಯಾಗುತ್ತಾರೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ಕನ್ನಾಳ ಗ್ರಾಮಸ್ಥರು ಹೀರೇ ಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವ ಬೇಡಿಕೆಯಾಗಿತ್ತು ಆದರೆ ಸಣ್ಣ ನೀರಾವರಿ ಇಲಾಖೆಯಲ್ಲಿ ಅಷ್ಟು ಅನುಧಾನ ಬಿಡುಗಡೆ ಮಾಡಲು ಅವಕಾಶ ಇಲ್ಲ. ಈಗ ಬ್ರೀಜ್ ಮಾಡಲಾಗುತ್ತದೆ. ಗ್ರಾಮದಲ್ಲಿ ವಾಲ್ಮೀಕಿ ಭವನ ಸೇರಿದಂತೆ ವಿವಿಧ ಸಮುದಾಯ ಭವನಗಳಿಗಾಗಿ ಅನುದಾನ ಬಿಡುಗಡೆಯಾಗಿದೆ ಎಂದರು. ಕನ್ನಾಳ ಗ್ರಾಮದಲ್ಲಿ ನನಗೆ ಮೂರು ಅವಧಿಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ನನಗೆ ಬೆಂಬಲಿಸಿದ್ದೀರಿ ಈ ಬಾರಿಯೂ ಅತಿ ಹೆಚ್ಚು ಮತಗÀಳನ್ನು ನೀಡಿ ನಿಮ್ಮ ಮನೆ ಮಗನಂತೆ ಕಾಣಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕನ್ನಾಳ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಶರಣೇಗೌಡ, ಮುಂಖಡರಾದ ಮಹಾದೇವಪ್ಪಗೌಡ, ಜಿಪಂ ಸದಸ್ಯರಾದ ಶಿವನಗೌಡ ಗೋರೆಬಾಳ, ಅಮರೇಗೌಡ ವಿರುಪಾಪೂರು, ಮುಖಂಡರಾದ ಬಸವರಾಜ ಕುರಕುಂದಿ, ಅಮರೇಶ ತಿಡಿಗೋಳ್, ಹರಿಶ್ಚಂದ್ರ ರಾಠೋಡ್, ಬಸನಗೌಡ ಪೊಲೀಸ್ ಪಾಟೀಲ್, ರವಿಕುಮಾರ ಪಾಟೀಲ್ ಪಿಡಬ್ಲೂಡಿ ಇಂಜಿನಿಯರ್ ಸಂದೀಪ್ ಪಾಟೀಲ್, ಗ್ರಾಪಂ ಸದಸ್ಯ ಸಂಗಮೇಶ ಕಲ್ಲೂರು ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಇತರರು ಇದ್ದರು.

Don`t copy text!