e-ಸುದ್ದಿ, ಮಸ್ಕಿ
ನಾಡು ನುಡಿ ಸಂಸ್ಕøತಿಯ ಬೆಳವಣಿಗೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಸಂಘಟನೆಗಳು ತೊಡಗಿಕೊಂಡಾಗ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ ಎಂದು ಅಭಿನವ ಶ್ರೀಮರಿಸಿದ್ದಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಇತ್ತಿಚೀಗೆ ಮಂಗಳವಾರ ವಿರಕ್ತಮಠದ ಆವರಣದಲ್ಲಿ ಜಯಕರ್ನಾಟಕ ಹೋಬಳಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಯಕರ್ನಾಟಕ ಜಿಲ್ಲಾ ಅಧ್ಯಕ್ಷ ಶಿವಕುಮಾರ ಯಾದವ ಮಾತನಾಡಿ 13 ವರ್ಷಗಳಿಂದ ಜಯಕರ್ನಾಟಕ ಕಳಂಕ ರಹಿತವಾಗಿ ಜನಪರ ಕಾರ್ಯಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುವ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದೇವೆ ಎಂದರು.
ಸಿಂಧನೂರು ತಾಲ್ಲೂಕಾ ಅಧ್ಯಕ್ಷ ಬಸವರಾಜ ಬಡಿಗೇರ, ಮಸ್ಕಿ ತಾಲ್ಲೂಕಾ ಆಧ್ಯಕ್ಷ ಯಮನೂರ ಒಡೆಯ, ಮಸ್ಕಿಯ ರಾಕೇಶ ಪಾಟೀಲ್, ಹನುಮೇಶ ಕಮ್ಮಾರ, ಬಳಗಾನೂರು ಹೋಬಳಿ ಘಟಕದ ಗೌರವಾಧ್ಯಕ್ಷ ಶಿವಮೂರ್ತಿ ಗದ್ಗಿಮಠ, ಅಧ್ಯಕ್ಷ ದೇವರಾಜ ಗುತ್ತೇದಾರ, ಉಪಾಧ್ಯಕ್ಷ ಶರಣಬಸವ, ಪದಾಧಿಕಾರಿಗಲಾದ ಬೀರಪ್ಪ ಬೆಳ್ಳಿಗನೂರು, ಚಂದ್ರಶೇಖರ ಹಾಲಾಪುರ, ನಂದಪ್ಪಮೂಲಿಮನಿ, ವಿಜಯಕುಮಾರ ನಾಯಕ್ ಹಾಗೂ ಇತರರು ಭಾಗವಹಿಸಿದ್ದರು.