e-ಸುದ್ದಿ, ಮಸ್ಕಿ
ಕನ್ನಡ ಸಹಿತ್ಯ, ಸಂಸ್ಕøತಿ, ನಾಡು, ನುಡಿ, ನೆಲ ಜಲದ ಉಳಿವಿಗಾಗಿ ಪ್ರಾಮಾಣಿಕವಾಗಿ ದುಡಿಯುವ ಮನಸ್ಸಿನಿಂದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವೆ. ಕಸಾಪ ಸದಸ್ಯರು ನನ್ನನ್ನು ಬೆಂಬಲಿಸುವಂತೆ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾಡೋಜ ಡಾ.ಮಹೇಶ ಜೋಷಿ ಮನವಿ ಮಾಡಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಗುರುವಾರ ಕಸಾಪ ಸದಸ್ಯರ ಸಭೆ ನಡೆಸಿ ಮಾತನಾಡಿದರು. ದುರದರ್ಶನದಲ್ಲಿ ಚಮದನ ವಾಹಿನಿ ಮುಖಾಂತರ ಕೆಲಸ ಮಾಡಿದ ತೃಪ್ತಿ ಇದೆ. ನಾನೊಬ್ಬ ಕ್ರಿಯಾಶೀಲ ಸಂಘಟಕನಾಗಿ ಕನ್ನಡ ಪರ ಕಾರ್ಯಕರ್ತನಾಗಿ ಎಲ್ಲಕ್ಕಿಮತ ಮಿಗಿಲಾಗಿ ಕನ್ನಡದ ಪರಿಚಾರಕನಾಗಿ ಸೇವೆ ಮಾಡುವ ಮನಸ್ಸಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.
ಹೈಕೊರ್ಟನ ನಿವೃತ್ತ ನ್ಯಾಯಧೀಶ ಅರಳಿ ನಾಗರಾಜ ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿ ಹೆಸರುವಾಸಿಯಾದ ಮಹೇಶ ಜೋಷಿಯವರನ್ನು ಹೆಚ್ಚಿನ ಮತ ನೀಡಿ ರಜ್ಯ ಅಧ್ಯಕ್ಷರನ್ನಾಗಿ ಮಾಡುವಂತೆ ಮತ ಯಾಚಿಸಿದರು.
ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ನಾಡೋಜ ಡಾ.ಮಹೇಶ ಜೋಷಿಯವರನ್ನು ಸತ್ಕರಿಸಿದರು. ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಮಹಾಂತೇಶ ಮಸ್ಕಿ, ಮಸ್ಕಿ ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಡಾ.ಶಿವಶರಣಪ್ಪ ಇತ್ಲಿ, ಕಾಸಪ ಸದಸ್ಯರಾದ ರಂಗಯ್ಯ ಶ್ರೇಷ್ಟಿ, ಎಂ.ಶಿವಶರಣ, ಉಪನ್ಯಾಸಕ ಶಂಕರಗೌಡ, ಸಾಹಿತಿ ಸಿ.ದಾನಪ್ಪ, ಚನ್ನಬಸವ ಕೊಟಗಿ, ಸುರೇಶ ಬ್ಯಾಳಿ, ಶ್ರೀಧರ ಬಳ್ಳೊಳ್ಳಿ, ಶಶಿಧರಸ್ವಾಮಿ ಉದ್ಬಾಳ, ನಭಿಸಾಬ ಕುಷ್ಟಗಿ ಹಾಗೂ ಇತರರು ಭಾಗವಹಿಸಿದ್ದರು.