ಗಜಲ್
ಮಧುಬಟ್ಟಲುಗಳು ಖಾಲಿಯಾದವು ನಶೆ ಏರಲಿಲ್ಲ
ಮಧುಬಾಲೆಯ ಕಂಗಳಿಂದ ಏರಿದ ನಶೆ ಇಳಿಯಲಿಲ್ಲ
ಪದಗಳಿಗೂ ನಿಲುಕುತಿಲ್ಲ ನಿನ್ನ ಸೌಂದರ್ಯದ ಬಣ್ಣನೆ
ನಿನ್ನಯ ಕೆನ್ನೆಯ ಮುಂದೆ ಕಾಶ್ಮೀರಿ ಸೇಬು ರುಚಿಸಲಿಲ್ಲ
ದಾಹಕ್ಕೆ ಬೇಲಿಯಾಕಲು ಆಗುತ್ತಿಲ್ಲ ನಿನ್ನ ಬಾಹುಗಳಲ್ಲಿ
ನಿನ್ನೆದೆಯ ಸಂಗಮದಲ್ಲಿ ದ್ರಾಕ್ಷಿ ರಸವು ಉಳಿಯಲಿಲ್ಲ
ಬಲಿಷ್ಠ ದೇಹವು ಮಿದುವಾಗುತಿದೆ ನಿನ್ನಯ ಸ್ಪರ್ಶದಿ
ನಿನ್ನಯ ಕಟಿ ಮುಂದೆ ಸ್ನಾಯುಗಳಲ್ಲಿ ಶಕ್ತಿ ಚಿಗುರಲಿಲ್ಲ
‘ಮಲ್ಲಿ’ಯ ಮೈ ಮನವನು ಆಳುತಿದೆ ನಿನ್ನಯ ಪ್ರೇಮ
ನೀನಿರದ ಬರಡು ಗಳಿಗೆಯಲ್ಲಿ ಹೃದಯವು ಬಡಿಯಲಿಲ್ಲ
✍️ರತ್ನರಾಯಮಲ್ಲ