ಪುಸ್ತಕಗಳ ಅಳಲು

ಪುಸ್ತಕಗಳ ಅಳಲು

ಪುಸ್ತಕಗಳು ಇಣುಕುತ್ತಿವೆ
ಸಜ್ಜಿನ ಗಾಜಿನೊಳಗಿಂದ
ತಮ್ಮತ್ತ ಅರಸಿ ಬರುವವರ
ನಡಿಗೆ ನೆರಳನ್ನ

ಪುಸ್ತಕಗಳು ಎದುರುನೋಡುತ್ತಿವೆ
ಓದುಗರ ಕಂಗಳಲಿ
ತಮ್ಮ ಬಯಕೆಭಾವೈಕ್ಯವನ್ನ

ಪುಸ್ತಕಗಳು
ಬಯಸುತ್ತಿವೆ
ಓದುಗರ ಅಂಗೈಸ್ಪರ್ಶವನ್ನ,
ಅಲಿಂಗನವನ್ನ

ಪುಸ್ತಕಗಳು
ಹಾತೊರೆಯುತ್ತಿವೆ ತಮ್ಮ
ಪುಟಪುಟವ ತೆರೆದು
ಓದದೇ ಹೋದರೂ
ಮುಖ ಪುಟಕೆ ಅಂಗೈ
ಸವರಿಗಕೆಯನ್ನ

ಪುಸ್ತಕಗಳು
ನೆನೆಯುತ್ತಿವೆ
ಬಾಹುಗಳಲಿ ಬಿಗಿದಪ್ಪಿದ
ಆ ಮಧುರ ಕ್ಷಣಗಳನ

ಪುಸ್ತಕಗಳು
ರೋಧಿಸುತ್ತಿವೆ
ತಮ್ಮನ್ನು ಸಾಕುವವರಿಲ್ಲದೆ
ಸಲಹುವರಿಲ್ಲದೆ

ಪುಸ್ತಕಗಳು
ನರಳುತ್ತಿವೆ ಬೆಳ್ಳಿಮೀನು ಜಿರಳೆ ಜೇಡಗಳಿಗೆ ಆಹಾರವಾಗಿ

ಪುಸ್ತಕಗಳು
ಕೊರಗುತ್ತಿವೆ ಕೂತಲ್ಲೆಕೂತು
ತಾವಿರುವಲ್ಲಿ ತಂತ್ರಜ್ಞಾನ
ಹರಿದಾಡುವುದ ಕಂಡು

ಪುಸ್ತಕಗಳು
ಮಾಸಿ ಹೋಗುತ್ತಿವೆ
ಹಾಳೆಗೆ ಇಳಿಯುವವರಿಲ್ಲದೆ,
ನಾಳೆಗೆ ಮೋಳೆವವರಿಲ್ಲದೆ,

ಪುಸ್ತಕಗಳು ಕಣ್ಮರೆಯಾಗುತ್ತಿವೆ
ಗ್ರಂಥಾಲಯಗಳಿಗೆ ಸೀಮಿತವಾಗುತ್ತಿವೆ,
ಸಜ್ಜುಗಳಿಗೂ ಭಾರವಾಗುತ್ತಿವೆ.

ಗೂಗಲ್ ರಾಕ್ಷಸನ ಹೊಟ್ಟೆಯಲಿ
ಗುಳುಂ ಆಗುತ್ತಿವೆ.
ವ್ಯಾಸ ,ಕಾಳಿದಾಸರ
ನೆನೆದು ಕಣ್ಣೀರಿಡುತಿವೆ.

ಜ್ಯೋತಿ ಮಾಳಿ

Don`t copy text!