ಅಧಿಕಾರಿಗಳ ಹಗ್ಗ ಜಗ್ಗಾಟ, ವಿದ್ಯುತ್ ಪರಿವರ್ತಕ ರಸ್ತೆ ಮದ್ಯದಲ್ಲಿ

e-ಸುದ್ದಿ, ಮಸ್ಕಿ
ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದ ಪೊಲೀಸ್ ಠಾಣೆ ಹತ್ತಿರ ರಸ್ತೆ ಮೇಲೆ ಇರುವ ವಿದ್ಯೂತ್ ಪರಿವರ್ತಕ ಸ್ಥಾಳಚಿತರಿಸಲು ಅಧಿಕಾರಿಗಳು ಹಗ್ಗ ಜಗ್ಗಾಟ ನಡೆಸಿದ್ದಾರೆ. ಇದರಿಮದ ಸಾರ್ವಜನಿಕರಿಗೆಗೆ ತೊಂದರೆಯಾಗಿದ್ದು ಯಾರು ಪರಿಹರಿಸುತ್ತಾರೆ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.
ವಿದ್ಯೂತ್ ಪರಿವರ್ತಕ ಸ್ಥಳಾಂತರಕ್ಕೆ ಪಪಂ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಹಗ್ಗಜಗ್ಗಾಟ ನಡೆಸಿ ಕಾಲ ತಳ್ಳುತ್ತಿದ್ದಾರೆ.
ಬಸ್‍ನಿಲ್ದಾಣಕ್ಕೆ ಹೊಂದಿಕೊಂಡಿರುವ ಪರಿವರ್ತಕದ ಹತ್ತಿರ ತಿಪ್ಪೆ ಗುಂಡಿಯಾಗಿ ಪುರುಷರು ಮೂತ್ರಾಲಯವಾಗಿ ಮಾರ್ಪಟ್ಟಿದೆ. ಬಸ್ ನಿಲ್ದಾಣದಲ್ಲಿ ಊರುಗಳಿಗೆ ತೆರಳುವ ಮಹಿಳಾ ಪ್ರಯಾಣಿಕರು, ವಿದ್ಯಾರ್ಥಿನಿಯರಿಗೆ, ಹತ್ತಿರದ ದೇವಸ್ಥಾನಕ್ಕೆ ತೆರಳುವ ಮಹಿಳೆಯರಿಗೆ ಮುಜುಗರ ತರುವಂತಹ ಸ್ಥಿತಿ ಎದುರಾಗಿದೆ.

Don`t copy text!