e-ಸುದ್ದಿ, ಮಸ್ಕಿ
2021 ರಲ್ಲಿ ಧಾರ್ಮಿಕ ಗಣತಿ ಆರಂಭವಾಗುತ್ತಿದ್ದು ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯೆತೆ ಪಡೆಯುವದಕ್ಕಾಗಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಲಿಂಗಾಯತ ಎಂದು ಬರೆಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಪ್ಪ.ಪಿ.ಕುರುಕುಂದಿ ಹೇಳಿದರು.
ಕಳೆದ ಎರಡು ಬಾರಿ ನಡೆದ ಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿರುವದರಿಂದ ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ಸಿಗಲಿಲ್ಲ. ಅದಕ್ಕಾಗಿ ವೀರಶೈವ ಲಿಂಗಾಯತ ಎಂದು ಗುರುತಿಸಿಕೊಳ್ಳುವ 99 ಕ್ಕೂ ಹೆಚ್ಚು ಉಪ ಪಂಗಡಗಳು ಧಾರ್ಮಿಕ ಗಣತಿಯಲ್ಲಿ ಲಿಂಗಾಯತ ಎಂದು ಬರೆಸುವ ಮೂಲಕ ಈ ಭಾರಿ ಅಲ್ಪ ಸಂಖ್ಯಾತ ಮಾನ್ಯತೆ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಲಿಂಗಾಯತ ಧರ್ಮದಲ್ಲಿ ಅನೇಕ ಜಾತಿಗಳಿವೆ. ಆಯಾ ಜಾತಿಗಳಿಗೆ ಸಿಗುವ ಸೌಲಭ್ಯಗಳ ಕುಂಠಿತವಾಗುತ್ತವೆ ಎಂದು ಬಹಳಷ್ಟು ಅನುಮಾನ ವ್ಯಕ್ತಪಡಿಸುತ್ತಾರೆ. ಧಾರ್ಮಿಕ ಮಾನ್ಯತೆ ಬೇರೆ, ಜಾತಿಗಳ ಮೀಸಲಾತಿ ಬೇರೆ ಅವುಗಳನ್ನು ಒಂದಕ್ಕೊಮದು ತಾಳೆ ಹಾಕುವದು ಬೇಡ. ಲಿಂಗಾಯತ ಧಾರ್ಮಿಕ ಅಲ್ಪ ಸಂಖ್ಯಾತ ಪಡೆದರೆ ಜಾತಿಗಳಿಗೆ ಸಿಗುವ ಸೌಲಭ್ಯಗಳು ಸ್ಥಗಿತವಾಗುವುದಿಲ್ಲ. ಇದನ್ನು ಸೂಪ್ರಿಂಕೊರ್ಟನ ನ್ಯಾಯಧೀಶರಾದ ರಾಮ ಜೋಯಿಸರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ರುದ್ರಪ್ಪ ಅವರು ವಿವರಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಮಸ್ಕಿ ತಾಲೂಕಿಗೆ ಡಾ.ಶಿವಶರಣಪ್ಪ ಇತ್ಲಿ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಮತ್ತು ಡಾ.ಬಿ.ಎಚ್.ದಿವಟರ್ ಅವರನ್ನು ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅಂದಾನಪ್ಪ ಗುಂಡಳ್ಳಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಸಿದ್ದಲಿಂಗಯ್ಯ ಗಚ್ಚಿನಮಠ, ಪಂಚಾಕ್ಷರಯ್ಯ ಕಂಬಾಳಿಮಠ, ಘನಮಠದಯ್ಯ ಸಾಲಿಮಠ, ಆದಯ್ಯಸ್ವಾಮಿ ಕ್ಯಾತನಟ್ಟಿ, ಉಮಾಕಾಂತಪ್ಪ ಸಂಗನಾಳ, ಎಂ.ಅಮರೇಶ, ಬಸಪ್ಪ ಬ್ಯಾಳಿ, ಸುರೇಶ ಹರಸೂರು, ಅಮರಪ್ಪ ಅಂಗಡಿ, ಮಲ್ಲಿಕಾರ್ಜುನ ಬೈಲಗುಡ್ಡ, ಗದ್ದೆಪ್ಪ ಮಡಿವಾಳ. ಪಂಪಣ್ಣ ಮಡಿವಾಳ, ದುರಗಣ್ಣ ಮಾಸ್ತಾರ, ಬಸವರಾಜ ಕಡಬೂರು, ಶಂಕ್ರಪ್ಪ ಸಾಹುಕಾರ ಬಸಾಪೂರು , ಮಹಾಂತೇಶ ಮಸ್ಕಿ ಹಾಗೂ ಇತರರು ಭಾಗವಹಿಸಿದ್ದರು.