ಶರಣೆ ಮೋಳಿಗೆ ಮಹಾದೇವಿಯವರು.
ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.
ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ.
ಗುರು ತೋರಿದ್ದು ಒಂದೇ ದೇವರು ಸಾಕು, ಇಮ್ಮಡಿ_ನಿಃಕಳಂಕ_ಮಲ್ಲಿಕಾರ್ಜುನಾ.
ಶರಣೆ_ಮೋಳಿಗೆ_ಮಹಾದೇವಿಯವರು.
ಭಾವಾರ್ಥ-;
ಆರು_ದೇವರ_ನಿಮ್ಮ_ಎದೆಯಲ್ಲಿ_ಇರಿದುಕೊಳ್ಳಿ
ಹೊರಗೆ ನೂರಾರು ದೇವರನ್ನ ಮಾಡಿಕೊಳ್ಳುವುದಲ್ಲ.
ನಿಮ್ಮೊಳಗಿನ ಈ ಆರು ಗುಣಗಳನ್ನು ನಿಮ್ಮ ಎದೆಯೊಳಗೆ ಕಟ್ಟಿಹಾಕಿಕೊಳ್ಳಿ.
ಅರಿಷಡ್ವರ್ಗಗಳಾದ ಕಾಮ_ಕ್ರೋಧ__ಲೋಭ_ಮೋಹ_ಮದ_ಮತ್ಸರ ಇವುಗಳನ್ನು ನಿಮ್ಮೊಳಗೆ ಸುಧಾರಿಸಿಕೊಳ್ಳಿರಿ..
ಮೂರು_ದೇವರ_ನಿಮ್ಮ_ಮೂಗಿನಲ್ಲಿ_ಮುರಿದುಕೊಳ್ಳಿ
ಮುಕ್ಕೋಟಿ ದೇವರನ್ನು ಹುಡುಕುವವರೇ
ನೀವು ಮೊದಲು ನಿಮ್ಮ ತನು_ಮನ_ಧನ ಎಂಬ ಈ ಮೂರರಲ್ಲಿನ ಅಹಂಕಾರವನ್ನು ನಿಮ್ಮ ಮೂಗಿನಲ್ಲೇ ಮುರಿದುಕೊಳ್ಳಿ.
ಗುರು_ತೋರಿದ್ದು_ಒಂದೇ_ದೇವರು_ಸಾಕು,
ಇಮ್ಮಡಿ_ನಿಃಕಳಂಕ_ಮಲ್ಲಿಕಾರ್ಜುನಾ
ಗುರು ಕೊಟ್ಟ ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಇಷ್ಟಲಿಂಗ ಒಂದೇ ಸಾಕು.
ಅದುವೇ ನಿಜದ ಅರಿವಿನ ದೇವರು ಎಂದು ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದಾರೆ
ಶರಣೆ ಮೋಳಿಗೆ_ಮಹಾದೇವಿಯವರು…
–ಲೋಕೇಶ್_ಎನ್_ಮಾನ್ವಿ