e-ಸುದ್ದಿ, ಮಸ್ಕಿ
ತಾಲೂಕಿನ ಬೆಳ್ಳಿಗನೂರು ಗ್ರಾಮದಲ್ಲಿರುವ ಬಸ್ ನಿಲ್ದಾಣ ಶಿಥಿಲವಾಗಿದ್ದು ಚತ್ತು ದಿನೇ ದಿನೆ ಬೀಳುತ್ತಿರುವದರಿಂದ ಪ್ರಯಾಣಿಕರು ಬಸ್ ತಂಗು ದಾಣದ ಕಡೆ ಮುಖ ಮಾಡುತ್ತಿಲ್ಲ.
ಈಗಾಗಲೇ ಬೇಸಿಗೆ ಆರಂಭವಾಗಿದೆ. ಪ್ರತಿದಿನ ವಿದ್ಯಾರ್ಥಿಗಳು, ಸರ್ವಜನಿಕರು ಪರಸ್ಥಳಗಳಿಗೆ ಹೋಗಲು ಬಸ್ ತಂಗುದಾಣದಲ್ಲಿ ಆಶ್ರಯ ಪಡೆಯದೆ ರಸ್ತೆ ಬದಿಯಲ್ಲಿ ನಿಂತುಕೊಳ್ಳಬೇಕಾದ ದುಸ್ಥಿತಿ ಬಂದಿದೆ.
ಮಳೆ ಬಂದರೆ ಸೋರುತ್ತಿದೆ. ಕಳೆದ ಮೂವತ್ತು ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಿಸಿದ್ದು ಈಗ ಅದು ಸಂಪೂರ್ಣವಾಗಿ ಶಿಥಿಲವಾಗಿದೆ. ಚತ್ತು ಉದುರಿ ಬೀಳುತ್ತಿದ್ದು ಕಬ್ಬಣದ ರಾಡುಗಳು ತೇಲಿಕೊಂಡು ಬೀಳುವಂತಾಗಿವೆ.
ಬಸ್ ನಿಲ್ದಾಣ ಯಾವುದೇ ಸಂದಂರ್ಭದಲ್ಲಿ ಬೀಳುವ ಅಪಾಯದಲ್ಲಿ ಇರುವದರಿಂದ ಸಾರ್ವಜನಿಕರು ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗೀರುವ ಬಸ್ ನಿಲ್ದಾಣವನ್ನು ನೆಲಸಮ ಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
—————————————
ಮಸ್ಕಿ ತಾಲೂಕಿನ ಬೆಳ್ಳಿಗನೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಅದರಲ್ಲಿ ಹಲವು ವರ್ಷಗಳಿಂದ ಬಸ್ ನಿಲ್ದಾಣ ಶಿಥಿಲವಾಗಿದ್ದು ಕೂಡಲೇ ಹೊಸ ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.
-ದೇವರಾಜ ಪೊಲೀಸ್ ಪಾಟೀಲ, ಬೆಳ್ಳಿಗನೂರು