ಕೂಗು ಭಟ ( ಕಾಗೆ)

ಕೂಗು ಭಟ ( ಕಾಗೆ)

ಪದ್ಮಬಂಧು ಬರುವನ್ನೇ
ಸಾರಿಸಾರೋ ಕೂಗುಭಟ
ನಿನ್ನ ಖಾರ ದ್ವನಿಯ ಕೇಳಿ
ತೆರೆದವೆಲ್ಲ ಕಣ್ಣುಪಟ
ಮುಳ್ಳಿನಿಂದ ಮನೆಯಕಟ್ಟಿ
ಸಲಹಿದರೂ ತನ್ನದಲ್ಲದ ಜೀವ
ಅಪಶಕುನದ ಅಗ್ರಜ ನೀ
ವ್ಯಂಗ್ಯ ನುಡಿವವರಗಾಗಿಯೇ

ಅಗಳನ್ನಕೂ ಬಳಗ ಕೂಗುವ ನಿನ್ನ
ತೆಗಳುವರೆ ಎಲ್ಲರೂ
ಇದ್ದಾಗ ಬೆಲೆ ಕೊಡದವರು
ನೀನಿಲ್ಲದಾಗ ಬಾಯಿ ಬಿಡುತಿಹರು
ತಿಥಿ ಊಟಕೆ ಸಾಕ್ಷಿಯಾಗು
ಇವರ ಮೋಕ್ಷಕೆ ಭಿಕ್ಷೆ ನೀಡು

ಕಥೆಯಾದವರ ವ್ಯೆಥೆನೀಗು
ಇವರಿಗಿಲ್ಲದ ತೂಕ ನೀ ತೂಗು
ಎನೇ ಆಗಲಿ ನೀ ಭುವಿಗೆ ಬೇಕು
ನಿನಗೆ ಸೃಷ್ಟಿಯ ಕೌತುಕವೇ ಸಾಕು

ಜ್ಯೋತಿ ಮಾಳಿ

Don`t copy text!